Wednesday, January 22, 2025

25 ನಿಮಿಷಗಳಲ್ಲಿ ನಿಮ್ಮ ಮುಖ ಬೆಳ್ಳಗಾಗಬೇಕಾದರೆ ಹೀಗೆ ಮಾಡಿ..!

25 ನಿಮಿಷಗಳಲ್ಲಿ ನಿಮ್ಮ ಮುಖ ಬೆಳ್ಳಗಾಗಬೇಕಾದರೆ ಹೀಗೆ ಮಾಡಿ..!

ಒಂದು ನಿಮಿಷದಲ್ಲಿ ನಿಮ್ಮ ಮುಖ ಬಿಳಿಯಾಗಬೇಕಾದರೆ ಹೀಗೆ ಮಾಡಿ ಸಾಕು . ನೀವು ಕುಡಿಯುವ ಕಾಫಿಪುಡಿಯಿಂದ..!

ಮುಖ ಬೆಳ್ಳಗಾಗೋದು ಅಲ್ಲದೇ ಚರ್ಮವೂ ಕಾಂತಿಯಿಂದ ಮಿಂಚುತ್ತದೆ. ಬಗೆ ಬಗೆಯ ಸೋಪುಗಳು ವಿವಿಧ ರೀತಿಯ ಕ್ರಿಮ್​ಗಳನ್ನು ನೋಡ್ತಾ ಇದ್ದಿವಿ. ಈ ಎಲ್ಲ ಸೌಂದರ್ಯ ಸಾಧನಗಳು ಇವೆ. ಇದೆಲ್ಲ ಒಂದು ಕಡೆ ಆದ್ರೆ ಬಿಸಿಲಿನ ತೀವೃತೆ ಮತ್ತು ಧೂಳು , ಆಹಾರ ಪದ್ದತಿ, ಜೀವನ ಶೈಲಿ ಇತ್ಯಾದಿ ಆನೇಕ ಕಾರಣಗಳಿಂದ ಮುಖ ಕಪ್ಪಗೆ, ಡಲ್​ ಆಗಿ ಕಾಣುತ್ತದೆ. ಕೆಲವರಿಗೆ ಬೋರಿಂಗ್ ನೀರು ಸಹ ಆಗಿಬರದೆ ಕಪ್ಪು ಬಣ್ಣಕ್ಕೆ ಚರ್ಮ ತಿರುಗುತ್ತದೆ. ಆದರೆ ಹೀಗೆ ಕಪ್ಪು ಬಣ್ಣಕೆ ತಿರುಗಿದ ಚರ್ಮವನ್ನು ಕಾಫಿಪುಡಿ ಉಪಯೋಗ ಮಾಡಿ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಬಹುದು ಸುಲಭವಾಗಿಯೇ…

ಯಾವ ಕಾಫಿಪುಡಿ ಬಳಸಬೇಕು ಅಂತ ಸಂದೇಹ ಬರುತ್ತಿದೆಯಾ? ಹಾಗಾದ್ರೆ ಅದಕೆಲ್ಲ ಉತ್ತರ ಇಲ್ಲಿದೆ.!

ನಮಗೆ ಸುಲಭವಾಗಿ ಸಿಗುವ ಕಾಫಿಪುಡಿಯನ್ನೇ ತೆಗೆದುಕೊಳ್ಳಬೇಕು. ಅದ್ರಲ್ಲು ಬ್ರು ಮತ್ತು ನೆಸ್ಕೆಫೇ ಪ್ರತಿಯೊಬ್ಬರ ಮನೆಯಲ್ಲೂ ಇದ್ದೆ ಇರುತ್ತೆ ಇಂತಹ ಬ್ರು ಅಥವಾ ನೆಸ್ಕೇಫೆಯನ್ನು ತೆಗೆದುಕೊಂಡು ನಿವು ಒಂದು ಲೇಪನವನ್ನು ತಯಾರಿಸಿಕೊಳ್ಳಬೇಕು.

ಅದಕ್ಕೆ ಬೇಕಾಗಿರುವ ಪದಾರ್ಥಗಳು ಕಾಫಿಪುಡಿ ಮತ್ತು ಜೇನು ತುಪ್ಪ . ನಿಮಗೆ ಬೇಕಾಗಿರುವ ಪ್ರಮಾಣದಲ್ಲಿ ಕಾಫಿ ಪುಡಿಯನ್ನು ತೆಗೆದುಕೊಳ್ಳಿ, ಅದಕ್ಕೆ ಜೇನು ತುಪ್ಪಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಿಕೊಳ್ಳುವ ಮೊದಲು ಮುಖವನ್ನು ತಂಪಾದ ನೀರಿನಿಂದ ತೊಳೆದುಕೊಳ್ಳಿ ಬಳಿಕ ಹೀಗೆ ಈ ಮಿಶ್ರಣವನ್ನು ಲೇಪಿಸಿಕೊಳ್ಳೊದ್ರಿಂದ ಒಂದು ವಾರದಲ್ಲಿ ಚರ್ಮದ ಕಾಂತಿ ಹೆಚ್ಚಾಗಿ , ಕಪ್ಪುಕಲೆಗಳು ಹಾಗೂ ಮುಖದ ಮೇಲಿನ ಟ್ಯಾನ್ ಮೃತ ಕಣಗಳು ಎಲ್ಲವು ದಿನಕಳೆದಂತೆ ಕಡಿಮೆಯಾಗುವವು.

ಇನ್ನೂ ಕಾಫಿ ಪುಡಿ ಚರ್ಮದ ತೊಂಡರೆಗಳನ್ನ ಕಡಿಮೆ ಮಾಡುತ್ತದೆ. ಅಲ್ಲದೆ ಸಮರ್ಥವಾಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೇ ಟ್ಯಾನ್ , ಮೃತ ಕಣಗಳನ್ನು ಕಪ್ಫುಕಲೆಗಳನ್ನ ಹೋಗಲಾಡಿಸಿ ಚರ್ಮವನ್ನು ಸಾಫ್ಟ್ ಹಾಗೂ ಬೆಳ್ಳಗಾಗಿ ಬದಲಾಯಿಸುವುದು.
ಅಲ್ಲದೆ ಜೇನಿನಲ್ಲಿರುವ ಪೋಷಕಾಂಶಗಳು ಎಲ್ಲರಿಗೂ ಗೊತ್ತಿವೆ. ಆ್ಯಂಟಿ ಆಕ್ಸಿಡೆಂಟ್ ಮುಖದ ಮೇಲೆ ಕಪ್ಪು ಕಲೆಗಳನ್ನು ಮತ್ತು ಟ್ಯಾನ್ ಹೋಗಲಾಡಿಸಿ, ಚರ್ಮದ ಸುಕ್ಕುಗಳನ್ನು ಸರಿಮಾಡುವುದು ಮತ್ತು ಜೇನು ಚರ್ಮಕ್ಕೆ ಒಂದು ಒಳ್ಳೆಯ ಮಾಶ್ಚರೈಸರ್​ನಂತೆ ಕೆಲಸ ಮಾಡುತ್ತದೆ.

ಇದರ ಬಳಕೆ ಹೇಗೆ ಅಂತಿರಾ..?

ಒಂದು ಬಟ್ಟಲಿನಲ್ಲಿ ಕಾಫಿಪುಡಿ ಮತ್ತು ಜೇನು ತುಪ್ಪವನ್ನು ಚೆನ್ನಾಗಿ ಬೆರೆಸಿಕೊಂಡು ಮುಖಕ್ಕೆ ಲೇಪಿಸಿಕೊಂಡು ಮಸಾಜ್​ನಂತೆ  20 ರಿಂದ 25ನಿಮಿಷಗಳ ಕಾಲ ಬಿಟ್ಟುಬಿಡಬೇಕು…
25ನಿಮಿಷಗಳ ನಂತರ ತಣ್ಣೀರಿನೊಂದಿಗೆ ಮುಖವನ್ನು ತೊಳೆದುಕೊಂಡರೆ ಸಾಕು ನಿಮ್ಮ ಮುಖ ಕಾಂತಿಯುತವಾಗಿ ಬೆಳ್ಳಗೆ ತಿರುಗುತ್ತದೆ…

ಇನ್ನು ಕಾಫಿಯಲ್ಲಿರುವ ಪೋಷಕಾಂಶಗಳು ಚರ್ಮದ ಮೇಲಿನ ಮೃತ ಕಣಗಳನ್ನು ನ್ಯಾಚುರಲ್ಲಾಗಿ ಹೋಗಲಾಡಿಸುತ್ತದೆ.  ಉಪಯೊಗಿಸಿದ ಮೊದಲ ದಿನದಿಂದಾನೇ ಇದರ ಫಲಿತಾಂಶವನ್ನು ನಿಧಾನವಾಗಿ ಕಾಣಬಹುದು .

ಆಗ ನಿಮ್ಮ ಚರ್ಮ ಸ್ಮೂತ್ , ಸಾಫ್ಟ್ ಹಾಗೂ ಕಾಂತಿಯುತವಾದ ಚರ್ಮ ನಿಮ್ಮದಾಗುವುದು… ವಾರದಲ್ಲಿ 2 ರಿಂದ 3 ಬಾರಿ ಉಪಯೋಗಿಸುತ್ತಾ ಬನ್ನಿ ನಿಮ್ಮ ಮುಖ ಬೆಳ್ಳಗಾಗುತ್ತದೆ..

RELATED ARTICLES

Related Articles

TRENDING ARTICLES