ಬೆಂಗಳೂರು : ವೈಎಸ್ ಟಿ ತೆರಿಗೆ ಅಂತ ಇವರ ಸರ್ಕಾರದಲ್ಲಿ ಬಂದಿದೆಯಂತೆ. ಅದರ ಬಗ್ಗೆ ಪತ್ತೆ ಮಾಡ್ತಾ ಇದ್ದೀನಿ, ಆಮೇಲೆ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಕೇಳಲು ಬಯಸುತ್ತೇನೆ. ನಾನು ಸಿಎಂ ಆದಾಗ ನಿಮ್ಮ ಮಂತ್ರಿಗಳು ಏನು ಮಾಡಿದ್ರು? ಎಂದು ವಾಗ್ದಾಳಿ ನಡೆಸಿದರು.
ಪೊಗರುದಸ್ತ್ ಇಲಾಖೆಯನ್ನು ನಿಮ್ಮ ಕಡೆಯವರು ಇಟ್ಟುಕೊಂಡಿದ್ದರು. ಯಾವುದೇ ಟ್ರಾನ್ಫರ್ ಕೂಡ ನಾನು ಮಾಡುವಂತಿರಲಿಲ್ಲ. ಅವರ ಆದೇಶದಂತೆ ಎಲ್ಲಾ ನಡೆಯಬೇಕಿತ್ತು. ಬೆಂಗಳೂರು ಪ್ರಾಧಿಕಾರಕ್ಕೆ ಡಿಮ್ಯಾಂಡ್ ಇಟ್ಟುಕೊಂಡು ಬಂದವರನ್ನು ಆಚೆ ಇಟ್ಟಿದ್ದೆ. ಯಲಹಂಕ ತಹಶೀಲ್ದಾರರ ಕಚೇರಿಗೆ ಒಂದೂವರೆ ಕೋಟಿ ಕೊಡ್ತೀವಿ ಅಂದವರನ್ನು ಆಚೆ ಇಟ್ಟಿದ್ದೆ ಎಂದು ಛೇಡಿಸಿದರು.
ಇದನ್ನೂ ಓದಿ : ಸೋಲನ್ನು ಒಂದು ಕೆಟ್ಟ ಕನಸು ಅಂತ ಒಪ್ಪಿಕೊಳ್ಳಬೇಕು : ಕೆ.ಎಸ್ ಈಶ್ವರಪ್ಪ
ನನಗೆ ಯಾವುದಕ್ಕೂ ಭಯ ಇಲ್ಲ
ವೈಎಸ್ ಟಿ ತೆರಿಗೆ ಅಂತ ಇವರ ಸರ್ಕಾರದಲ್ಲಿ ಬಂದಿದೆಯಂತೆ. ನಾನು ಒಂದು ರೂಪಾಯಿ ತೆಗೆದುಕೊಳ್ಳದೆ ಟ್ರಾನ್ಫರ್ ಮಾಡಿದ್ದೀನಿ. ಇದು ನಮ್ಮ ಕಾಲದಲ್ಲಿ ನಡೆದಿದ್ದು. ನನಗೆ ಯಾವುದಕ್ಕೂ ಭಯ ಇಲ್ಲ. ಗವರ್ನರ್ ಅಡ್ರೆಸ್ ಮಾಡಲಿ ಆಮೇಲೆ ನೋಡೋಣ ಎಂದು ಕುಮಾರಸ್ವಾಮಿ ಅವರು ಕಾದು ನೋಡುವ ತಂತ್ರದ ಮೋರೆ ಹೋದರು.