Monday, May 20, 2024

ಟ್ರಾಫಿಕ್ ಜಾಮ್ ನಡುವೆ ನೈಸ್ ರಸ್ತೆ ಟೋಲ್ ಶುಲ್ಕ ಹೆಚ್ಚಳ

ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಟೋಲ್ ದರದಲ್ಲಿ ಹೆಚ್ಚಳ ಬೆನ್ನಲ್ಲೇ ನೈಸ್ ರಸ್ತೆಯ ಶುಲ್ಕವನ್ನು ಕೂಡ ಹೆಚ್ಚಳ ಮಾಡಲಾಗಿದೆ.

ಹೌದು, ಬೆಂಗಳೂರಿನ ನೈಸ್ ರಸ್ತೆಯ ಟೋಲ್​ ದರವನ್ನು ಶೇಕಡಾ 11ರಷ್ಷು ಹೆಚ್ಚಳ ಮಾಡಿದ್ದಾರೆ.ಈ ಪರಿಷ್ಕೃತ ದರವು ಇಂದಿನಿಮದಲೇ ಜಾರಿ ಬರಲಿದೆ. ಬೆಂಗಳೂರಿನ ನೈಸ್ ರಸ್ತೆಯ ಮೂಲಕ  ಪ್ರಯಾಣಿಸುವ ಪ್ರಯಾಣಿಕರಿಗೆ ಜೇಬಿಗೆ ಬರೆ ಎಳೆಯುವಂತಾಗಿದೆ. ಬೆಂಗಳೂರಿನ ನೈಸ್‌ ರೋಡ್‌ ಸಂಚಾರ ಇನ್ನೂ ಮುಂದೆ ದುಬಾರಿಯಾಗಲಿದೆ.

ಇದನ್ನೂ ಓದಿ: ಸರ್ಕಾರದ ವಿರುದ್ದ ಸಿಡಿದೆದ್ದ 108 ಆಂಬ್ಯುಲೆನ್ಸ್ ಸಿಬ್ಬಂದಿ : ಪ್ರತಿಭಟನೆಯ ಎಚ್ಚರಿಕೆ

ರಾಜ್ಯ ಸರ್ಕಾರ ಮತ್ತು ನಂದಿ ಎಕಾನಮಿಕ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ನಡುವೆ 2000ದಲ್ಲಿ ನಡೆದ ಒಪ್ಪಂದದ ಪ್ರಕಾರ ನೈಸ್ ರೋಡ್ ಟೋಲ್ ದರ ಹೆಚ್ಚಳವಾಗಿದೆ. ಇಂದಿನಿಂದಲೇ ಪರಿಷ್ಕೃತ ದರ ಅನ್ವಯಿಸಲಿದ್ದು, ಕಾರುಗಳಿಗೆ 5 ರಿಂದ 10 ರೂ, ಬಸ್​ಗೆ 20 ರೂ, ಟ್ರಕ್​ಗೆ 5 ರಿಂದ 15 ರೂ, ಲಘು ವಾಣಿಜ್ಯ ವಾಹನಗಳಿಗೆ 5 ರಿಂದ 10 ರೂ, ದ್ವಿಚಕ್ರ ವಾಹನಗಳಿಗೆ 2 ರಿಂದ 5 ರೂಪಾಯಿಗಳನ್ನ ಹೆಚ್ಚಿಸಡಲಾಗಿದೆ.

 

RELATED ARTICLES

Related Articles

TRENDING ARTICLES