Wednesday, January 22, 2025

ನೋಟಿಸ್ ಕೊಟ್ಟರೆ ಹೆದರಲ್ಲ: ಕಟೀಲ್​ ವಿರುದ್ಧ ರೇಣುಕಾಚಾರ್ಯ ಕಿಡಿ

ಬೆಂಗಳೂರು : ನೋಟಿಸ್ ಕೊಟ್ಟರೇ ನಾನು ಹೆದರಲ್ಲ, ಬಿಜೆಪಿಯಲ್ಲಿ ಶಿಸ್ತು ಸಮಿತಿ ಇದೆ ಎಂದು ನನಗೆ ಗೊತ್ತಾಗಿದ್ದೆ ನೋಟಿಸ್ ನೀಡಿದ ಮೇಲೆಯೇ ಎಂದು ಬಿಜೆಪಿಯ ರೆಬೆಲ್ ಶಾಸಕ ಎಂ.ಪಿ. ರೇಣುಕಾಚಾರ್ಯ ಸ್ವಪಕ್ಷಿಯವರ ವಿರುದ್ದ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೆದುರು ಬಿಜೆಪಿಯ ನಾಯಕರ ವಿರುದ್ದ ಬೆಂಕಿಯುಗುಳಿದ್ದಾರೆ.

ಯಡಿಯೂರಪ್ಪನವರಿಗೆ ಪಕ್ಷದಲ್ಲಿ ಅವಮಾನವನ್ನು ಮಾಡಿದರು, ಅಗೌರದಿಂದ ನಡಿಸಿಕೊಂಡರು ಆದರೂ ಅವರು ಪಾಪ! ಗೌರವದಿಂದಲೇ ರಾಜೀನಾಮೆ ನೀಡಿದರು ಅಲ್ಲಿಂದಲೇ ಅವರ ಅಪಪ್ರಚಾರ ಪ್ರಾರಂಭಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಯಡಿಯೂರಪ್ಪನವರು,ಮೋದಿಯವರ ಮುಖನೋಡಿ ಕಾಂಗ್ರೆಸ್-ಜೆಡಿಎಸ್ ಶಾಸಕರು ಪಕ್ಷಕ್ಕೆ ಬಂದರು,ಅದರಿಂದಲೇ ಉಪ ಚುನಾವಣೆಯಲ್ಲಿ ಪಕ್ಷ ಗೆದ್ದಿದೆ. ಯಡಿಯೂರಪ್ಪನವರು ನಮ್ಮ ನಾಯಕರು,ಅವರಿಗೆ ಗೌರವ ಕೊಡುತ್ತೇನೆ ಎಂದು ಗುರು ನಿಷ್ಠೆ ಮೆರೆದರು.

ಇದನ್ನೂ ಓದಿ : ಅಕ್ಕಿ ಬದಲು ಹಣ ನೀಡುವ ಪ್ರಕ್ರಿಯೆಗೆ ಇದೇ ತಿಂಗಳು ಚಾಲನೆ: ಸಚಿವ ಸತೀಶ್ ಜಾರಕಿಹೊಳಿ

ಇನ್ನೊಬ್ಬರ ಹೆಗಲಮೇಲೆ ಗನ್ ಇಟ್ಟು ಯಡಿಯೂರಪ್ಪ ಹೇಳಿಸಿದ್ದಾರೆ  ಅಂತ ಮಾತನಾಡುತ್ತಾರೆ, ಅಂಥ ಕೆಳಮಟ್ಟಕ್ಕೆ ಯಡಿಯೂರಪ್ಪ ಹೋಗಿಲ್ಲ ಆದರೆ ಪಕ್ಷಕ್ಕೆ ಹೀನಾಯ ಸ್ಥಿತಿ ಬಂದಿರುವುದಕ್ಕೆ ಅವರಿಗೆ ನೋವಿದೆ ಎಂದು ತಿಳಿಸಿದರು.

ಅಲ್ಲದೆ  ಹೊಂದಾಣಿಕೆ ರಾಜಕಾರಣದ ಬಗ್ಗೆ ಪ್ರಸ್ತಾಪಿಸಿ ಪರೋಕ್ಷವಾಗಿ ಪ್ರತಾಪ್ ಸಿಂಹ ವಿರುದ್ದ ಮಾತನಾಡಿ “ಮೈಸೂರು ಸಂಸದರು ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಅಲ್ವಾ?” ಒಬ್ಬ ಮಹಾನ್ ನಾಯಕನಿಗೆ ಅಪಮಾನ ಮಾಡೋದು ಸರಿಯಲ್ಲವೆಂದು ಕೇಸರಿ ನಾಯಕರ ವಿರುದ್ದ ಕಿಡಿ ಕಾರಿದರು.

ನೋಟೀಸ್​ ನೀಡಿದರೆ ಹೆದರುತ್ತೀನಾ ? ಎಂದ ಅವರು ರಾಜ್ಯಾಧ್ಯಕ್ಷ ಕಟೀಲ್ ಹೇಳಿದಂತೆ 11 ಮಂದಿಗೆ ನೋಟಿಸ್ ನೀಡಿದ್ದಾರೆ ಆ 11 ಮಂದಿ ಯಾರು ? ನೋಟಿಸ್ ಎಲ್ಲಿದೆ ಎಂದು ಕಟೀಲ್​ಗೆ ಪ್ರಶ್ನಿಸಿದರು.

RELATED ARTICLES

Related Articles

TRENDING ARTICLES