ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂದೆ ಹಾಜರಾದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಪಕ್ಷದ ವಿರುದ್ಧ ಮಾತನಾಡಿದವರು ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನ ಕಂಟ್ರೋಲ್ ಮಾಡಲು ಅಗಲಿಲ್ಲ. ಐದು ವರ್ಷ ಏನು ಮಾಡಿದ್ರಿ ಅಧ್ಯಕ್ಷರೇ ನೀವು ಎಂದು ಯತ್ನಾಳ್ ಗುಡುಗಿದ್ದಾರೆ.
ನಾನು ಪಕ್ಷದ ವಿರುದ್ಧ ಎಂದೂ ಮಾತನಾಡಿಲ್ಲ. ಪಕ್ಷದ ವಿರುದ್ಧ ಹೋದವರ ವಿರುದ್ಧ ಸುಮ್ಮನೆಯೂ ಇರಲ್ಲ. ಈಗ ನೀವು ಕರೆದು ಮಾತನಾಡ್ತೀರಾ? ಇದೇ ಕೆಲಸ ಬಹಳ ಹಿಂದೆಯೇ ಮಾಡಬೇಕಿತ್ತು. ಯಾವುದೇ ಅಂತಹ ಕೆಲಸವನ್ನ ನೀವು ಯಾವತ್ತೂ ಮಾಡಿಲ್ಲ ಎಂದು ಚಾಟಿ ಬೀಸಿದ್ದಾರೆ.
ಇದನ್ನೂ ಓದಿ : ನೋಟಿಸ್ ಕೊಟ್ಟರೆ ಹೆದರಲ್ಲ : ಕಟೀಲ್ ವಿರುದ್ಧ ರೇಣುಕಾಚಾರ್ಯ ಕಿಡಿ
ಅವ್ರ ಸಲಹೆಯಂತೆ ಕೆಲ್ಸ ಮಾಡ್ತೀರಾ?
ಯಾರೋ ಒಬ್ಬ ವ್ಯಕ್ತಿ ಹೇಳಿದ್ರು ಅಂತ ಅವರ ಸಲಹೆಯಂತೆ ಕೆಲಸ ಮಾಡ್ತೀರಾ? ನಾನು ಮಾತನಾಡಿರೋ ಆಡಿಯೋ ಹಾಗೂ ವಿಡಿಯೋ ತರಿಸಿ ನೋಡಿ ಒಮ್ಮೆ. ನಾನು ವಾಜಪೇಯಿ ತತ್ವ ಸಿದ್ಧಾಂತವನ್ನು ಬೆಳೆಸಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.
ಸಚಿವ ಸ್ಥಾನಕ್ಕೆ ಎಂದೂ ಲಾಭಿ ಮಾಡಿಲ್ಲ
ಪಕ್ಷಕ್ಕಾಗಿ ಎಲ್ಲಾ ತ್ಯಾಗ ಮಾಡಲು ನಾನು ಸಿದ್ದ. ಹೀಗಾಗಿ, ಪಕ್ಷ ಅಧಿಕಾರಕ್ಕೆ ಬಂದಾಗ ನಾನು ಸಚಿವ ಸ್ಥಾನಕ್ಕೆ ಎಂದೂ ಲಾಭಿ ಮಾಡಿಲ್ಲ. ಮೊದಲು ಪಕ್ಷದ ಸಂಘಟನೆ ಮಾಡಿ, ಒಗ್ಗಟ್ಟು ಪ್ರದರ್ಶಿಸಿ ಅಂತ ಕಟೀಲ್ ಗೆ ಶಾಸಕ ಯತ್ನಾಳ್ ನೀತಿ ಪಾಠ ಮಾಡಿದ್ದಾರೆ.