Sunday, December 22, 2024

ದಿಂಬು ಬಳಸಿ ಮಲಗುವುದರಿಂದ ಈ ಸಮಸ್ಯೆ ಬರಬಹುದು!

ಬೆಂಗಳೂರು : ಪ್ರತಿಯೊಬ್ಬರಿಗೂ ಅವರದ್ದೇ ಆದ ನಿದ್ದೆಯ ಅಭ್ಯಾಸ ಇರುತ್ತೆ. ಕೆಲವರಿಗೆ ದಿಂಬು ಇದ್ರೆ ನಿದ್ರೆ ಬರುತ್ತೆ. ಕೆಲವರಿಗೆ ದಿಂಬು ಇಲ್ಲದಿದ್ರೆ ನಿದ್ರೆ ಬರುತ್ತೆ. ಹಾಗಿದ್ರೆ, ದಿಂಬು ಬಳಕೆಯಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ನೀವು ತಿಳಿಯಲೇಬೇಕು.

ಮನುಷ್ಯನಿಗೆ ನಿದ್ರೆ ತುಂಬಾ ಮುಖ್ಯ. ಮನುಷ್ಯ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರು ವಿಶ್ರಾಂತಿಯೆಂಬುದು ಬೇಕೇ ಬೇಕು. ಮಲಗುವಾಗ ದಿಂಬು ಬಳಸುವುದರಿಂದ ಹಲವಾರು ರೀತಿಯ ಕಾಯಿಲೆಗಳನ್ನು ಎದುರಿಸಬೇಕಾಗಬಹುದು.

ಕೆಲವರು ದಪ್ಪ ಇರುವ ದಿಂಬುಗಳನ್ನು ಬಳಸುವುದರಿಂದ ಆರಾಮಾಗಿ ನಿದ್ರಿಸುತ್ತಾರೆ. ಆದರೆ, ಕೆಲವರಿಗೆ ನಿದ್ರೆ ಬರುವುದಿಲ್ಲ. ಅಂಥವರು ತೆಳುವಾಗಿರುವ ದಿಂಬನ್ನು ಬಳಸುತ್ತಾರೆ. ದಿಂಬು ಇಲ್ಲದೆ ಮಲಗುವುದರಿಂದ ಆಗುವ ಪ್ರಯೋಜನಗಳೇನು? ತಿಳಿಯೋಣ ಬನ್ನಿ.

  • ಬೆನ್ನು ನೋವು

ಕೆಲವು ಸಂಶೋಧನೆಯ ಪ್ರಕಾರ ದಿಂಬು ಬಳಸುವುದರಿಂದ ನಮ್ಮ ಕುತ್ತಿಗೆ ಹಾಗೂ ಬೆನ್ನು ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ : ಈ ಸೊಪ್ಪುಗಳ ಸೇವನೆಯಿಂದ ಸಿಗಲಿದೆ ಆರೋಗ್ಯದಲ್ಲಿ ವೃದ್ಧಿ

  • ಮೊಡವೆ ಸಮಸ್ಯೆ

ದಿಂಬು ಬಳಸುವುದರಿಂದ ಮೊಡವೆ ಸಮಸ್ಯೆ ಹೆಚ್ಚಾಗುತ್ತದೆ. ಧೂಳು ಅಥವಾ ತಲೆಯಲ್ಲಿ ಇರುವ ಅಗರು ದಿಂಬಿನ ಮೇಲೆ ಶೇಖರಣೆ ಆಗಿರುತ್ತದೆ. ಅದರ ಮೇಲೆಯೇ ನಾವು ತಲೆ ಹಾಕಿ ಮಲಗುವುದರಿಂದ ನಮ್ಮ ಮುಖದ ಚರ್ಮ ದಿಂಬಿನ ಜೊತೆಗೆ ನೇರ ಸಂಪರ್ಕ ಹೊಂದಿರುತ್ತದೆ. ಹೀಗಾಗಿ, ಮುಖದಲ್ಲಿ ಮೊಡವೆಯ ಸಂಖ್ಯೆ ಹೆಚ್ಚಾಗುತ್ತದೆ.

  • ತಲೆ ನೋವು

ದಪ್ಪ ದಿಂಬು ಬಳಸುವುದರಿಂದ ತಲೆಯಲ್ಲಿ ರಕ್ತ ಪರಿಚಲನೆಗೆ ತೊಂದರೆಯಾಗುತ್ತದೆ. ಇದರಿಂದ ಬೆಳಗ್ಗೆ ಎದ್ದ ತಕ್ಷಣ ತಲೆ ನೋವು ಕಾಣಿಸಿಕೊಳ್ಳುತ್ತದೆ.

ಹೀಗಾಗಿ, ಈ ಎಲ್ಲ ಕಾರಣಗಳಿಂದ ದಿಂಬು ಇಲ್ಲದೆ ಮಲಗುವುದು ಉತ್ತಮ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ.

  • ವಿದ್ಯಾ, ಪವರ್ ಟಿವಿ

RELATED ARTICLES

Related Articles

TRENDING ARTICLES