ಬೆಂಗಳೂರು: ಮಳೆಯಾಗದ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ಘಟಪ್ರಭಾ,ಮಲಪ್ರಭಾ ಮೂರು ನದಿ ಬತ್ತಿ ಹೋಗಿವೆ. ಇದರ ನಡುವೆ ಜಿಲ್ಲೆಯಲ್ಲಿನ ಕೆರೆಗಳು ನೀರಿಲ್ಲದೆ ಬಣಗುಟ್ಟುತ್ತಿವೆ.
ಹೌದು ಜಿಲ್ಲೆಯಲ್ಲಿಯೇ ಬೃಹತ್ ಕೆರೆಗಳಲ್ಲಿ ಒಂದಾದ ಮುಚಖಂಡಿ ಕೆರೆ ನೀರು ಖಾಲಿಯಾಗಿ ಭಣಗುಡುತ್ತಿದೆ. ಜನ ಜಾನುವಾರಗಳಿಗೆ ನಿಲ್ಲದ ನೀರಿನ ಆತಂಕ ಹೆಚ್ಚಿದೆ.ಸುತ್ತ ೧೫ ಹಳ್ಳಿಗಳಿಗೆ ವರದಾನವಾಗಿದ್ದ ಬೃಹತ್ ಮುಚಖಂಡಿ ಕೆರೆ ಈಗ ಖಾಲಿ ಖಾಲಿಯಾಗಿದ್ದು ಬರಗಾಲದ ಆತಂಕ ಸೃಷ್ಠಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಭಾರೀ ಮಳೆ
ಮುಚಖಂಡಿ ಬೃಹತ್ ಕೆರೆ ಒಣಗಿ ಹೋದ ಬೆನ್ನಲ್ಲೆ ಮುಚಖಂಡಿ ಸುತ್ತ ಮುತ್ತಲಿನ 25 ರಿಂದ 30 ಹಳ್ಳಿಗಳಲ್ಲಿನ ಬಾವಿ ಮತ್ತು ಬೋರವೇಲ್ ಗಳು ಬತ್ತುತ್ತಿವೆ.ಅಂದಾಜು ೭೦೦ ಎಕರೆಗೂ ಅಧಿಕ ಪ್ರದೇಶದಲ್ಲಿನ ಕೆರೆ ಈಗ ಅಯೋಮಯ ಸ್ಥಿತಿಯಲ್ಲಿ ಗೋಚರಿಸುತ್ತಿದೆ.ಪ್ರತಿ ವರ್ಷ ನೀರು ನಿಂತು ಸುತ್ತಮುತ್ತಲಿನ ಹಳ್ಳಿಗಳ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗುತ್ತಿದ್ದ ಬೃಹತ್ ಮುಚಖಂಡಿ ಕೆರೆ.ಈ ಬಾರಿ ಕೆರೆಯಲ್ಲಿ ನೀರಿಲ್ಲದ್ದರಿಂದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಕುಸಿಯುತ್ತಿದೆ.
1882ರಲ್ಲಿ ಬ್ರಿಟಿಷರಿಂದ ನಿರ್ಮಾಣವಾಗಿರೋ ಮುಚಖಂಡಿ ಕೆರೆ.ಇದೀಗ ನೀರಿಲ್ಲದೆ ಬಣಗುಡುತ್ತಿದೆ. ತಕ್ಷಣ ಮಳೆಯಾಗದೇ ಹೋದ್ರೆ ನೀರಿನ ಹಾಹಾಕಾರದಿಂದ ಪರಿಸ್ಥಿತಿ ಮತ್ತಷ್ಟು ಬಿಗಾಡಾಯಿಸೋ ಸಾಧ್ಯತೆ ಜಿಲ್ಲೆಗೆ ಎದುರಾಗುವುದರಲ್ಲಿ ಸಂದೇಹವೇ ಇಲ್ಲ.