Wednesday, January 22, 2025

ನೂತನ 70 ಶಾಸಕರಿಗೆ ಹೆಲ್ತ್ ಫಿಟ್ನೆಸ್ & ಟ್ರೈನಿಂಗ್ ಕ್ಯಾಂಪ್

ಬೆಂಗಳೂರು : 70 ಹೊಸ ಶಾಸಕರಿಗೆ ಮೂರು ದಿನಗಳ ಕಾಲ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ 70 ಶಾಸಕರು ಮೊದಲ ಬಾರಿಗೆ ಆಯ್ಕೆ ಆಗಿದ್ದಾರೆ. ಅಧಿವೇಶನಲ್ಲಿ ನೂತನ ಶಾಸಕರು ಪಾಲ್ಗೊಳ್ಳುವುದು ತುಂಬಾ ಅವಶ್ಯಕ. ಈ ಹಿನ್ನೆಲೆಯಲ್ಲಿ ನೂತನ ಶಾಸಕರಿಗೆ ಮೂರು ದಿನ ತರಬೇತಿ ಶಿಬಿರ ನಡೆಸಲಾಗುವುದು ಎಂದಿದ್ದಾರೆ.

ಇದೇ ತಿಂಗಳು 26ನೇ ತಾರೀಖಿನಿಂದ ನೂತನ ಶಾಸಕರಿಗೆ ತರಬೇತಿ ಜೊತೆಗೆ ಹೆಲ್ತ್ ಫಿಟ್ನೆಸ್ & ಟ್ರೈನಿಂಗ್ ಕ್ಯಾಂಪ್ ನಡೆಸಲಾಗುತ್ತದೆ. ನೆಲಮಂಗಲದ ಧರ್ಮಸ್ಥಳ ನ್ಯೂಚರೋಪತಿ ಟ್ರಿಟ್ಮೆಂಟ್ ಕೂಡ ಇರಲಿದೆ.

ಇದನ್ನೂ ಓದಿ : ಒಂದೇ ನಿಮಿಷದಲ್ಲಿ ಗೃಹಜ್ಯೋತಿ ಅರ್ಜಿ ನೋಂದಣಿ!

ಮಾಜಿ ಸಿಎಂಗಳ ಜೊತೆ ಸಂವಾದ

ಫಿಟ್ನೆಸ್ ಜೊತೆಗೆ ಅಧಿವೇಶನದ ಬಗ್ಗೆ ತರಬೇತಿ ಹಾಗೂ ಈ ಸಮಯದಲ್ಲಿ ಪ್ರತಿದಿನಕ್ಕೆ ಒಬ್ಬರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಕ್ಯಮಂತ್ರಿ ಹೆಚ್.ಡಿ ಕುಮಾರಸ್ಚಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆ ಸಂವಾದ ಕೂಡ ನಡೆಸಲಾಗುವುದು.

ಹಿರಿಯ ಮಾಜಿ ಸಚಿವರುಗಳು ಕಿರಿಯ ಶಾಸಕರಿಗೆ ತರಬೇತಿ ನೀಡಲಿದ್ದಾರೆ. ಬಜೆಟ್ ಮಂಡನೆ ಹೇಗೆ? ಶಾಸನ ರಚನೆ, ವಿಧಾನಭೆ ಮತ್ತು ಪರಿಷತ್ ಮಹತ್ವ ಏನು? ಶಾಸಕ ಹಕ್ಕುಗಳು ಏನಹ ಎಂಬ ಎಲ್ಲಾ ಮಾಹಿತಿಯನ್ನ ತರಬೇತಿಯಲ್ಲಿ ನೂತನ ಶಾಸಕರಿಗೆ ತಿಳಿಸಕೊಡಲಾಗುತ್ತದೆ.

RELATED ARTICLES

Related Articles

TRENDING ARTICLES