ಬೆಂಗಳೂರು : ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಚುನಾವಣೆಗೆ ಮುನ್ನ ಭರವಸೆಯ ಗ್ಯಾರಂಟಿಗಳನ್ನು ನೀಡಿತ್ತು. ಇನ್ನೂ ಬಹುಮತದಿಂದ ಅಧಿಕಾರದ ಗದ್ದುಗೆಯನ್ನು ಏರಿ ಯೋಜನೆಗಳನ್ನು ಜಾರಿ ತರಲು ಮುಂದಾಗಿದೆ.
ಹೌದು, ಚುನಾವಣೆ ವೇಳೆ 5 ಗ್ಯಾರಂಟಿಗಳನ್ನು ಘೋಷಿಸಿದಂತೆ ಕಾಂಗ್ರೆಸ್ ಈಗಲೇ ಶಕ್ತಿ ಯೋಜನೆ ಹಾಗೂ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯದ ಜನತೆಯ ಕಡೆಯಿಂದ ಈ ಯೋಜನೆಗಳಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.
ಇದನ್ನೂ ಓದಿ: ಆಗಸ್ಟ್ 18ರಂದು ಗೃಹಲಕ್ಷ್ಮೀಯರ ಖಾತೆಗೆ 2000 ರೂ. : ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ಗ್ಯಾರಂಟಿಯಾದ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಲು ರಾಜ್ಯಸರ್ಕಾರ ಮುಂದಾಗಿದೆ. ಈ ಯೋಜನೆಯಲ್ಲಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡುವ ಯೋಜನೆ ಇದಾಗಿದ್ದು, ಆಗಸ್ಟ್ 15ರ ಬಳಿಕ ಜಾರಿಯಾಗಲಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಯೋಜನೆಗೆ ಒಪ್ಪಿಗೆ ಸಿಕ್ಕಿದ್ದು, ಜೂನ್‌ತಿಂಗಳಿಂದ ಯೋಜನೆಗೆ ಅರ್ಜಿ ಸಲ್ಲಿಕೆ ಕೂಡ ಪ್ರಾರಂಭವಾಗಲಿದೆ. ಹಾಗಿದ್ರೆ ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆ ಹೇಗೆ? ಏನೆಲ್ಲಾ ದಾಖಲಾತಿಗಳು ಬೇಕು ಎಂಬುವುದಕ್ಕೆ ಉತ್ತರ ಇಲ್ಲಿದೆ.
ಗೃಹಲಕ್ಷ್ಮೀ ಯೋಜನೆಗೆ ಬೇಕಾಗುವ ದಾಖಲೆಗಳು
- ಗೃಹಲಕ್ಷ್ಮೀ ಯೋಜನೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಒನ್ ಕಚೇರಿ, ಗ್ರಾಮ ಒನ್ ಕಚೇರಿ, ಕರ್ನಾಟಕ ಒನ್ ಕಚೇರಿ ಹಾಗೂ ನಾಡ ಕಚೇರಿಗಳಲ್ಲಿ ಆಫ್ ಲೈನ್ನಲ್ಲೂ ಕೂಡ ಅರ್ಜಿ ಪಡೆದು ಸಲ್ಲಿಸಬಹುದು.
- ಈ ಯೋಜನೆಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ವೋಟರ್ ಐಡಿ, ಯಜಮಾನಿಯ ವಿಳಾಸ,ಜಾತಿ ಮತ್ತು ಆದಾಯ ಪತ್ರ, ಬ್ಯಾಂಕ್ ಖಾತೆಯ ಸಂಖ್ಯೆ ಇರಬೇಕು.
ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಹೇಗಿದೆ ?
- ಮನೆಯ ಯಜಮಾನಿಯ ಹೆಸರು ಹಾಗೂ ವಿಳಾಸ
- ಆಧಾರ್ ಸಂಖ್ಯೆ
- ವೋಟರ್ ಐಡಿ ನಂಬರ್
- ಪಡಿತರ ಕಾರ್ಡ್ ಸಂಖ್ಯೆ (APL, BPL, ಅಂತ್ಯೋದಯ)
- ಮನೆ ಯಜಮಾನಿಯ ಉದ್ಯೋಗ
- ಪತಿಯ ಹೆಸರು
- ಪತಿಯ ಆಧಾರ್ ಸಂಖ್ಯೆ
- ಪತಿಯ ವೋಟರ್ ಐಡಿ ಸಂಖ್ಯೆ
- ಜಾತಿ ಪ್ರಮಾಣ ಪತ್ರ
- ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
- ಮನೆ ಯಜಮಾನಿಯ ACCOUNT NO ಹಾಗೂ IFSC CODE
- ಆಧಾರ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಪಾಸ್ ಬುಕ್, ಜೆರಾಕ್ಸ್ ಕಾಪಿ Attach ಮಾಡಬೇಕು.
ರಜನಿ ಎ.ಕೆ, ಪವರ್ ಟಿವಿ