Wednesday, January 22, 2025

ಕಾಂಗ್ರೆಸ್​ಗೆ ದೇಶವನ್ನು ಛಿದ್ರ ಛಿದ್ರ ಮಾಡೋದು ಇಷ್ಟವಾಗಿದೆ : ಭಗವಂತ ಖುಬಾ

ಬೀದರ್ : ಕಾಂಗ್ರೆಸ್‌ಗೆ ದೇಶ ಅಖಂಡವಾಗಿ ಇರುವುದು ಇಷ್ಟ ಇಲ್ಲ. ಛಿದ್ರ ಛಿದ್ರ ಮಾಡೋದು ಇಷ್ಟವಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖುಬಾ ಕುಟುಕಿದ್ದಾರೆ.

ಬೀದರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಯೋಜನೆಗಳ ವಿರುದ್ಧ ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದ್ವೇಷ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ಗೆ ಜನ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ. ಕಾಂಗ್ರೆಸ್ ಒಲೈಕೆ ರಾಜಕಾರಣ ಮಾಡದೇ ಸರ್ಕಾರದ ಅಸ್ಥಿರತೆ ಕಾಪಾಡುವ ಕೆಲಸ ಮಾಡಬೇಕು. ಕೈಗಾರಿಕೆಗಳು ಅಭಿವೃದ್ಧಿ ಆಗಬೇಕಂದ್ರೆ, ಕಡಿಮೆ ದರದಲ್ಲಿ ವಿದ್ಯುತ್ ನೀಡಬೇಕು ಎಂದು ಕುಟುಕಿದ್ದಾರೆ.

ಬಿಜೆಪಿ ಅವಧಿಯಲ್ಲೇ ವಿದ್ಯುತ್ ದರ ಏರಿಕೆ ವಿಚಾರ ಕುರಿತು ಮಾತನಾಡಿ, ವಿದ್ಯುತ್ ದರ ಪರಿಷ್ಕರಣೆ ಬಂದಾಗ ನಾವು ಒಪ್ಪಿರಲಿಲ್ಲ ಅಂತ ತಿಳಿಸಿದ್ದೇವೆ. ವಿದ್ಯುತ್ ಪರಿಷ್ಕರಣೆ ಪ್ರಪೊಸಲ್ ಬಂದಾಗ ಬೊಮ್ಮಾಯಿ‌ ಒಪ್ಪಿರಲಿಲ್ಲ. ಈಗ ಕಾಂಗ್ರೆಸ್‌ನವರು ಯಾಕೆ ಒಪ್ಪಿಕೊಂಡಿದ್ದಾರೆ. ಈಗಾ ರಾಜ್ಯ ಸರ್ಕಾರ ಮತಾಂತರ ಕಾಯ್ದೆ ವಾಪಸ್ ತೆಗೆದುಕೊಂಡಿದೆ. ಅದೇ ತರ ವಿದ್ಯುತ್ ದರ ಹೆಚ್ಚಳವನ್ನು ಹಿಂತೆಗೆದುಕೊಳ್ಳಲಿ. ಬೇರೆಯವರಿಗೆ ಯಾಕೆ ಗೂಬೆ ಕೂರಿಸುತ್ತೀರಾ? ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಡಿಸೆಂಬರ್​​ನಲ್ಲಿ ಈ ಸರ್ಕಾರ ಬಿದ್ದು ಹೋಗಲಿದೆ : ಕಟೀಲ್ ಭವಿಷ್ಯ

ತಮ್ಮ ವೈಫಲ್ಯ ಮುಚ್ಚಿಕೊಳ್ಳುವ ಹುನ್ನಾರ

ಅಕ್ಕಿ ಸಂಘರ್ಷ ವಿಚಾರ ಕುರಿತು ಮಾತನಾಡಿ, 2೦13 ರಿಂದ 2014 ರಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಕೇಂದ್ರದ ಕಾಂಗ್ರೆಸ್ ಸರ್ಕಾರ ಈಗ ನೀಡಲು ಆಗಲ್ಲ ಎಂದಿತ್ತು. ಅದು ಸಿದ್ದರಾಮಯ್ಯ ಅವರಿಗೆ ನೆನಪಿರಬಹುದು. ಸಿದ್ದರಾಮಯ್ಯ, ಕೇಂದ್ರದ ವಿರುದ್ಧ ಬೊಟ್ಟು ಮಾಡಿ, ತಮ್ಮ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡ್ತಿದಾರೆ. ಐದು ಗ್ಯಾರಂಟಿಗಳ ಮೂಲಕ ಜನರಿಗೆ ಕಾಂಗ್ರೆಸ್ ಮೋಸ ಮಾಡ್ತಿದೆ. ಅಷ್ಟು ದೊಡ್ಡ ಯೋಜನೆಗಳನ್ನು ಜನರಿಗೆ ಷರತ್ತು ರಹಿತ ನೀಡಲಾಗಲ್ಲ ಅಂತಾ ಷರತ್ತು ಹಾಕ್ತಿದ್ದಾರೆ. ಒಂದಿಲ್ಲೊಂದು ರೀತಿಯಲ್ಲಿ ‌ಕಾರಣ ಹುಡುಕಿ‌ ಉಸಾಬರಿ‌ ಮಾಡ್ತಿದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರತಿ ವ್ತಕ್ತಿಗೆ 15 ಕಿಲೋ ಅಕ್ಕಿ‌ ಕೊಡಬೇಕು

ನಿಮಗೆ ಏನಾದರೂ ಬದ್ಧತೆ ಇದ್ರೆ, ಕೇಂದ್ರದ ಕಡೆ ಬೊಟ್ಟು ಮಾಡದೇ ಕೆಲಸ ಮಾಡಿ. ನ್ಯಾಯ ಸಮ್ಮತವಾಗಿ ನೀಡಬೇಕಾದ ಸವಲತ್ತುಗಳನ್ನು ಕೇಂದ್ರ ಸರ್ಕಾರ ನೀಡುತ್ತೆ. ಚುನಾವಣೆ ಪೂರ್ವದಲ್ಲಿ 10 ಕಿಲೋ ಕೋಡ್ತಿವಿ ಅಂತ ಕಾಂಗ್ರೆಸ್‌ನವರು‌ ಹೇಳಿದ್ರು. ಈಗಾಗಲೇ ಪ್ರತಿ ವ್ಯಕ್ತಿಗೆ 5 ಕಿಲೋ ಸಿಗುತ್ತೆ. ಮೊದಲಿನ 5 ಕಿಲೋ ಹಾಗೂ ಘೋಷಿತ 10 ಕಿಲೋ ಸೇರಿ ಒಟ್ಟು 15 ಕಿಲೋ ನೀಡಬೇಕು. ಪ್ರತಿ ವ್ತಕ್ತಿಗೆ 15 ಕಿಲೋ ಅಕ್ಕಿ‌ ನೀಡಬೇಕು ಎಂದು ಭಗವಂತ ಖುಬಾ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES