Sunday, May 12, 2024

ವಿಜಯೇಂದ್ರ ಮಿಲ್ ನಲ್ಲಿ ಅಷ್ಟು ಅಕ್ಕಿ ಇದೆಯಾ? : ಸಿದ್ದರಾಮಯ್ಯ

ಬೆಂಗಳೂರು : ಕಮಿಷನ್ ಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡುತ್ತಿದ್ದಾರೆ ಎಂಬ ಶಾಸಕ ಬಿ.ವೈ ವಿಜಯೇಂದ್ರ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಿಜಯೇಂದ್ರ ಇಲ್ಲಿ ಅಕ್ಕಿ ಕೊಡಿಸಲಿ. ವಿಜಯೇಂದ್ರ ಮಿಲ್ ನಲ್ಲಿ ಇದೆಯಾ ಅಷ್ಟು ಅಕ್ಕಿ? ಸುಮ್ಮನೆ ಮಾತಾಡ್ತಾರೆ ಎಂದು ಫುಲ್ ಗರಂ ಆಗಿದ್ದಾರೆ.

ತೆಲಂಗಾಣದ ಸಿಎಂ ಜೊತೆ ನಾನೇ ಮಾತಾಡಿದ್ದೀನಿ. ನಿನ್ನೆ, ಮೊನ್ನೆಯೂ ಮಾತಾಡಿದ್ದೀನಿ. ಅಲ್ಲಿಯೂ ಅಕ್ಕಿ ಸಿಗ್ತಾ ಇಲ್ಲ ಅಂತೆ. ಆಂಧ್ರದವರ ಜೊತೆ ನಮ್ಮ ಚೀಫ್ ಸೆಕ್ರೆಟರಿ ಮಾತನಾಡಿದ್ದಾರೆ. ಛತ್ತೀಸ್ ಗಢದಿಂದ ಒಂದೂವರೆ ಲಕ್ಷ ಮೆಟ್ರಿಕ್ ಟನ್ ಕೊಡ್ತೀನಿ ಅಂದಿದ್ದಾರೆ. ಆದ್ರೆ, ದರ ಜಾಸ್ತಿ ಇದೆ. ನೋಡೋಣ ಇವತ್ತು ಸಂಜೆ ಮೀಟಿಂಗ್ ಮಾಡಿ ಹೇಳ್ತೀನಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ : ಅಕ್ಕಿಯಲ್ಲೂ ಕಮಿಷನ್ ಹೊಡೆಯೋ ಯತ್ನವಿರಬಹುದು ; ಬಿ.ವೈ ವಿಜಯೇಂದ್ರ

ಅಕ್ಕಿ ಇದ್ರೂ ರಾಜಕೀಯ ಮಾಡ್ತಿದ್ದಾರೆ

ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಸಚಿವ ಕೆ.ಹೆಚ್ ಮುನಿಯಪ್ಪ, ಅಕ್ಕಿಯನ್ನ ಕೊಡಬೇಕು ಅಂತ ಸಿಎಂ, ಡಿಸಿಎಂ ನಿರ್ಧಾರ ಮಾಡಿದ್ವಿ. ಅಕ್ಕಿ ಕೊಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡಿದೆ. ಅಕ್ಕಿ ಇದ್ದರೂ ಕೂಡ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ನಮ್ಮದೇ ರೀತಿಯಲ್ಲಿ ಅಕ್ಕಿಯ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ತೆಲಂಗಾಣ ಸರ್ಕಾರದ ಜೊತೆಗೆ ಮಾತನಾಡುತ್ತಿದ್ದೇವೆ. ನಮ್ಮ ಅಧಿಕಾರಿಗಳ ತಂಡ ಕೂಡ ಸಂಪರ್ಕದಲ್ಲಿದೆ. ನಾಳೆ ಒಳಗೆ ಅಂತಿಮವಾಗುತ್ತದೆ. ತೆಲಂಗಾಣ, ಛತ್ತಿಸಘಡದಿಂದ ಪಾಸಿಟಿವ್ ರೆಸ್ಪಾನ್ಸ್ ಇದೆ. ನಾವು ಕೊಟ್ಟ ಭರವಸೆಯಂತೆ ಅಕ್ಕಿ ಕೊಡುವುದಂತೂ ನಿಶ್ಚಿತ ಎಂದು ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES