Wednesday, January 22, 2025

ಕಾಂಗ್ರೆಸ್ ಒಮ್ಮೆ ಅಲ್ಲ, ಪ್ರತಿ ಬಾರಿಯೂ ಸುಳ್ಳು ಆರೋಪ ಮಾಡುತ್ತೆ : ತೇಜಸ್ವಿ ಸೂರ್ಯ

ಬೆಂಗಳೂರು : ಕಾಂಗ್ರೆಸ್ ಒಮ್ಮೆ ಅಲ್ಲ, ಪ್ರತಿ ಬಾರಿಯೂ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಕುಟುಕಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಅಕ್ಕಿಗೆ ಕಾಂಗ್ರೆಸ್ ತನ್ನ ಲೇಬಲ್ ಹಾಕಲು ಪ್ಲಾನ್ ಮಾಡಿದೆ ಎಂದು ಛೇಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈಗಾಗಲೇ 5 ಕಿಲೋ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿದೆ. ಕೇಂದ್ರ ನೀಡುವ ಅಕ್ಕಿಯ ಜೊತೆಗೆ ಮತ್ತೆ 5 ಕಿಲೋ ಅಕ್ಕಿ ಸಬ್ಸಿಡಿ ದರದಲ್ಲಿ ಪಡೆದು ಸಿದ್ದರಾಮಯ್ಯ ಸರ್ಕಾರದ ಲೇಬಲ್‌ ಹಾಕಿ ಅನ್ನಭಾಗ್ಯ ಗ್ಯಾರಂಟಿ ನೀಡುವ ಪ್ಲಾನ್‌ ಮಾಡಿದೆ. ಹೀಗಾಗಿ, ಕಳೆದೊಂದು ವಾರದಿಂದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸರ್ಕಾರ ಸುಳ್ಳು ಆರೋಪ ಮಾಡುತ್ತಿದೆ. ಇದು ಮೋದಿ ಸರ್ಕಾರದ ವಿರುದ್ಧ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.

ಗ್ಯಾರಂಟಿಯಿಂದ ನುಣುಚಿಕೊಳ್ಳುತ್ತಿದೆ

ಕಾಂಗ್ರೆಸ್‌ ಸರ್ಕಾರವು ಮೋದಿ ಸರ್ಕಾರದ ವಿರುದ್ಧ ನಿರಂತರವಾಗಿ ಸುಳ್ಳು ಹೇಳುವ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಮೋದಿ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂದು ಸುಳ್ಳು ಹೇಳುವ ಮೂಲಕ ತಮ್ಮ ಅನ್ನಭಾಗ್ಯದ ಗ್ಯಾರಂಟಿಯಿಂದ ನುಣುಚಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ವಿಜಯೇಂದ್ರ ಮಿಲ್ ನಲ್ಲಿ ಅಷ್ಟು ಅಕ್ಕಿ ಇದೆಯಾ? : ಸಿದ್ದರಾಮಯ್ಯ

140 ಕೋಟಿ ಜನರ ಹಿತ ಕಾಪಾಡುತ್ತಿದೆ

ಕೇಂದ್ರ ಸರ್ಕಾರ ಕಳೆದ 3 ವರ್ಷಗಳಿಂದ 80 ಕೋಟಿ ಕುಟುಂಬಗಳಿಗೆ 5 ಕಿಲೋ ಆಹಾರಧಾನ್ಯವನ್ನು ಉಚಿತವಾಗಿ ಕೊಡುತ್ತಿದೆ. ಈಗಾಗಲೇ ಉಳಿದ ದೇಶಗಳಲ್ಲಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇದು ಭಾರತದಲ್ಲೂ ಉಚಿತ ಪಡಿತರ ಇಲ್ಲದವರಿಗೆ ಬೆಲೆ ಏರಿಕೆಯ ಬರೆ ಬೀಳಬಾರದು. ಈ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ರಾಜ್ಯ ಸರ್ಕಾರಗಳಿಗೆ ನೀಡುವ ಉಚಿತ ಪಡಿತರಕ್ಕೆ ತಿದ್ದುಪಡಿ ತರುವ ಮೂಲಕ 140 ಕೋಟಿ ಜನರ ಹಿತ ಕಾಪಾಡುತ್ತಿದೆ ಎಂದು ಹೇಳಿದ್ದಾರೆ.

ರೈತರಿಂದ ಅಕ್ಕಿ ಖರೀದಿಸಬೇಕು

ತಮಿಳುನಾಡು, ತೆಲಂಗಾಣ, ಛತ್ತೀಸ್ಗಢ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ತಮ್ಮ ರಾಜ್ಯದ ರೈತರು ಬೆಳೆದ ಅಕ್ಕಿಯನ್ನು ಖರೀದಿಸುವ ನೀತಿಯಿದೆ. ಅದೇ ರೀತಿ ರಾಜ್ಯ ಸರ್ಕಾರ ಕೂಡಾ ನಮ್ಮದೇ ರಾಜ್ಯದ ರೈತರಿಂದ ಅಕ್ಕಿ ಖರೀದಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES