Wednesday, January 22, 2025

ಅಕ್ಕಿ ಕೊಡುವುದರಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ; ಸಚಿವ ಕೆ.ಹೆಚ್.ಮುನಿಯಪ್ಪ

ಬೆಂಗಳೂರು: ರಾಜ್ಯಕ್ಕೆ ಅಕ್ಕಿ ಕೊಡುವುದರಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ.ಎಂದು ಆಹಾರ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ವಾಗ್ದಾಳಿ ಮಾಡಿದರು.

ಹೌದು, ಕಾಂಗ್ರೆಸ್​ ಗ್ಯಾರಂಟಿಯಲ್ಲೊಂದು ಆದ ಅನ್ನಭಾಗ್ಯಯೋಜನೆಗೆ ಸರ್ಕಾರ ಅಕ್ಕಿ ಹೊಂದಿಸಲು ಬಾರಿ ಸರ್ಕಸ್​ ಮಾಡುತ್ತಿದೆ. ಇದರ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ  ಕೆ,ಎಚ್​  ಮುನಿಯಪ್ಪ ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ.

ಇದನ್ನೂ ಓದಿ: ವಿಜಯೇಂದ್ರ ಮಿಲ್ ನಲ್ಲಿ ಅಷ್ಟು ಅಕ್ಕಿ ಇದೆಯಾ? : ಸಿದ್ದರಾಮಯ್ಯ

ಜೂನ್ 12ರಂದು ರಾಜ್ಯಕ್ಕೆ ಅಕ್ಕಿ ಕೊಡುವುದಾಗಿ ಎಫ್​ಸಿಐ ಹೇಳಿತ್ತು ಅದರೆ ಜೂನ್ 13ರಂದು ಅಕ್ಕಿ ಕೊಡಲು ಆಗುವುದಿಲ್ಲವೆಂದು FCI ಹೇಳಿದೆ. ಬಡವರಿಗೆ ನೀಡುವ ಅಕ್ಕಿಯಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. 

 

RELATED ARTICLES

Related Articles

TRENDING ARTICLES