Sunday, December 22, 2024

ಜೆ.ಪಿ ನಡ್ಡಾ ಅವ್ರಿಗೆ ಥ್ಯಾಕ್ಸ್, ಅವ್ರು ನುಡಿದಂತೆ ನಡೆದಿದ್ದಾರೆ : ಡಿ.ಕೆ ಶಿವಕುಮಾರ್

ಬೆಂಗಳೂರು : ಬಿಜೆಪಿಯವರು 15 ಲಕ್ಷ ರೂಪಾಯಿ ಕೊಡ್ತೀವಿ ಅಂದಿದ್ರಲಾ, ಅದನ್ನು ಮೊದಲು ಕೊಡಲಿ ಎಂದು ಬಿಜೆಪಿಗೆ ಡಿಸಿಎಂ ಡಿ.ಕೆ ಶಿವಕುಮಾರ್​​​ ಸವಾಲ್​​ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕಾಂಗ್ರೆಸ್​ ಸರ್ಕಾರದ ಮೇಲೆ ಏನಾದ್ರೂ ಆರೋಪ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.

ಬ್ಲ್ಯಾಕ್ ಮನಿ ಯಾರ ಹತ್ತಿರ ಇದೆ ಎಂಬುದನ್ನು ಹೇಳಲಿ. ನಮ್ಮ ಅಕೌಂಟ್​ಗಳಿಗೆ ಇನ್ನೂ ಹಣ ಬಂದಿಲ್ಲ. ಆ ಬಗ್ಗೆ ಬಿಜೆಪಿಯವರು ಮಾತನಾಡಲಿ. ಇನ್ನು ಕೆಲವು ರಾಜ್ಯಗಳಿಗೆ ಅಕ್ಕಿ ಕೊಡಬೇಡಿ ಅಂತಾ ಕೇಂದ್ರ ಸರ್ಕಾರ ಬೆದರಿಸಬಹುದು. ಮೂರ್ನಾಲ್ಕು ರಾಜ್ಯಗಳಿಂದ ಅಕ್ಕಿ ಖರೀದಿ ಮಾಡ್ತೀವಿ. ಸ್ಟಾಕ್ ಎಷ್ಟಿದೆ ಅಂತಾ ಆಹಾರ ಸಚಿವರಿಗೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : ಈ ಕೆಲಸ ಮಾಡ್ರಿ ಅಂತ ಜನ ನಿಮಗೆ ವೋಟು ಹಾಕಿ ಗೆಲ್ಲಿಸಿದ್ರಾ? : ಬಿ.ವೈ ವಿಜಯೇಂದ್ರ

ಬಿಜೆಪಿಯವ್ರಿಗೂ ಗೌರವ ಕೊಡ್ತೀವಿ

ದೆಹಲಿಯಲ್ಲಿ ಹೋರಾಟ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಎಂಪಿಗಳೆಲ್ಲಾ ನಮ್ಮ ಜೊತೆ ಬರ್ತಾರೆ ಅನ್ನೋ ವಿಶ್ವಾಸ ಇದೆ. ಬಿಜೆಪಿಯವ್ರಿಗೂ ಗೌರವ ಕೊಡ್ತೀವಿ. ಜೂನ್ 21ರಂದು ನಮ್ಮ ಅಧ್ಯಕ್ಷರು ಮೀಟಿಂಗ್ ಕರೆದಿದ್ದಾರೆ. ಕೇಂದ್ರದ ಮಂತ್ರಿಗಳ ಭೇಟಿಗೂ ಯತ್ನಿಸ್ತೀವಿ ಎಂದು ಹೇಳಿದ್ದಾರೆ.

ಜೆ.ಪಿ ನಡ್ಡಾ ನುಡಿದಂತೆ ನಡೆದಿದ್ದಾರೆ

ಜೆ.ಪಿ ನಡ್ಡಾ ಅವ್ರಿಗೆ ಅಭಿನಂದನೆ ಸಲ್ಲಿಸ್ತೇವೆ. ಅವ್ರು ನುಡಿದಂತೆ ನಡೆದಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಕೇಂದ್ರದ ಯೋಜನೆಗಳು ಸಿಗಲ್ಲ, ಸಹಕಾರ ಕೊಡಲ್ಲ ಅಂದಿದ್ರು. ನಮ್ಮ ಮತದಾರರನ್ನು ಬೆದರಿಸಿದ್ರು. ಅನ್ನಭಾಗ್ಯ ನಮ್ಮ‌ರಾಜ್ಯದ ಪ್ರತಿಷ್ಠಿತ ಯೋಜನೆ. ಯಾರೂ ಕೂಡ ರಾಜ್ಯದಲ್ಲಿ ಹಸಿವಿನಿಂದ ಇರಬಾರದು. ಐದರಿಂದ ಏಳು‌ ಕಿಲೋ ಅಕ್ಕಿ ಕೊಡ್ತಿದ್ವಿ. ಆದ್ರೆ, ಬಿಜೆಪಿ ಐದು ಕಿಲೋಗೆ ಮಾಡ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES