Thursday, December 19, 2024

ಕೆ.ಆರ್.ಜಿ ಸ್ಟುಡಿಯೋದಿಂದ ಆದಿಪುರುಷ ಸಿನ್ಮಾ ರಿಲೀಸ್

ಬೆಂಗಳೂರು: ಹೊಂಬಾಳೆ ಫಿಲಂಸ್​ನಂತಯೇ (Hombale Films) ಕೆಆರ್​ಜಿ ಸ್ಟುಡಿಯೋಸ್ (KRG Studios) ಕೂಡ ಬಹುದೊಡ್ಡ ಸಂಸ್ಥೆಯಾಗಿ ಬೆಳೆಯುತ್ತಿದೆ. ಸಿನಿಮಾಗಳ ನಿರ್ಮಾಣದ ಜೊತೆಗೆ ಕೆಜಿಎಫ್, ಕಾಂತಾರದಂತಹ ಬ್ಲಾಕ್ ಬಸ್ಟರ್​ಗಳನ್ನ ಡಿಸ್ಟ್ರಿಬ್ಯೂಷನ್ (Distribution) ಕೂಡ ಮಾಡಿದೆ.

ಅಂದ್ರೆ ಇದೀಗ ಹಿಟ್​ ಚಿತ್ರಗಳ ಯಶಸ್ವಿ ವಿತರಣೆಯ ನಂತರ ಪ್ರಭಾಸ್ (Prabhas) ಅಭಿನಯದ ಆದಿಪುರುಷ (Adipurush) ಚಿತ್ರದ ಕರ್ನಾಟಕದ ಹಕ್ಕುಗಳನ್ನು ಕೆಆರ್‌ಜಿ ಸ್ಟುಡಿಯೋಸ್ (KRG Studios) ಪಡೆದುಕೊಂಡಿದ್ದು, ಹೊಸ ದಾಖಲೆ ಬರೆಯೋ ಮುನ್ಸೂಚನೆ ನೀಡಿದೆ.

ಹೌದು, ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರದ ಕರ್ನಾಟಕದ ಹಕ್ಕುಗಳನ್ನು ಕೆಆರ್‌ಜಿ ಸ್ಟುಡಿಯೋಸ್ ಪಡೆದುಕೊಂಡಿದೆ.ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಆದಿಪುರುಷ (Adipurusha) ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಇನ್ನೂ ಈ ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಮೂವಿ ಆದಿಪುರುಷ್ ಸಿನಿಮಾದಲ್ಲಿ ಡಾರ್ಲಿಂಗ್ ಪ್ರಭಾಸ್, ಕೃತಿ ಸನನ್, ಸೈಫ್ ಅಲಿ ಖಾನ್ ಕಾಂಬೋನಲ್ಲಿ ತಯಾರಾಗಿರೋ ಈ ದೃಶ್ಯಕಾವ್ಯ ರಿಲೀಸ್​ಗೆ ಇನ್ನೊಂದೇ ದಿನ ಬಾಕಿ. ವಿಶ್ವದಾದ್ಯಂತ 2D ಹಾಗೂ 3Dಯಲ್ಲಿ ಆದಿಪುರುಷ್ ಸಾವಿರಾರು ಸ್ಕ್ರೀನ್ಸ್​​ನಲ್ಲಿ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ರಾಜ್​ ಬಿ. ಶೆಟ್ಟಿ ನಟನೆಯ ‘ಟೋಬಿ’ ಸಿನ್ಮಾಗೆ ಡೇಟ್​ ಫಿಕ್ಸ್​ 

ಓಂ ರಾವತ್ ನಿರ್ದೇಶನದ ಆದಿಪುರುಷ್, ರಾಮಾಯಣದ ಒಂದು ಭಾಗವಾಗಿದ್ದು, ಸಹಜವಾಗಿಯೇ ಇಂದಿನ ಜನರೇಷನ್​ಗೆ ಎಂಟರ್​ಟೈನ್ಮೆಂಟ್ ಜೊತೆ ಎಜುಕೇಷನ್ ಕೂಡ ನೀಡಲಿದೆ. ಹಾಗಾಗಿ ಇದೊಂದು ಇನ್ಫೋಟೈನ್ಮೆಂಟ್ ಮೂವಿ. ವಿಶೇಷ ಅಂದ್ರೆ ಈ ಸಿನಿಮಾವನ್ನು ನಮ್ಮ ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡ್ತಿರೋದು ಕೆಆರ್​ಜಿ ಸ್ಟುಡಿಯೋಸ್ ಬ್ಯಾನರ್. ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಮೊದಲ ದಿನದ ಶೋಗಳ ಸಂಖ್ಯೆ 2 ಸಾವಿರ ದಾಟಲಿದ್ದು, ಮುಂಜಾನೆ 4.45, 5 ಗಂಟೆಗೆ ಪ್ರದರ್ಶನ ಶುರುವಾಗಲಿದೆ.

ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಒಡೆತನದ ಕೆಆರ್​ಜಿ, ಅಪ್ಪು ಅಭಿನಯದ ದೊಡ್ಮನೆ ಹುಡ್ಗ ಸಿನಿಮಾದಿಂದ ಡಿಸ್ಟ್ರಿಬ್ಯೂಷನ್ ಶುರು ಮಾಡಿತು. ಕೆಜಿಎಫ್, ಕೆಜಿಎಫ್-2, ಕಾಂತಾರ, 777 ಚಾರ್ಲಿ ಸೇರಿದಂತೆ ಕನ್ನಡದಲ್ಲಿ ನೂರಾರು ಸಿನಿಮಾಗಳ ವಿತರಣೆ ಮಾಡಿದೆ.ಇದೀಗ ಹೊಂಬಾಳೆ ಫಿಲಂಸ್ ರೀತಿ ಕೆಆರ್​ಜಿ ಸ್ಟುಡಿಯೋಸ್ ಕೂಡ ದಿನದಿಂದ ದಿನಕ್ಕೆ ಬಹುದೊಡ್ಡ ಸಂಸ್ಥೆಯಾಗಿ ಬೆಳೆಯುತ್ತಿದೆ.

ಪರಭಾಷಾ ಚಿತ್ರಗಳಾದ ಪವನ್ ಕಲ್ಯಾಣ್​ರ ವಕೀಲ್ ಸಾಬ್, ನಾನಿಯ ದಸರಾ ಸಹ ಕರ್ನಾಟಕಕ್ಕೆ ಇವ್ರೇ ಹಂಚಿಕೆ ಮಾಡಿದ್ರು. ಇದೀಗ ಆದಿಪುರುಷ್ ಸಿನಿಮಾನ ಕೈಗೆತ್ತಿಕೊಂಡಿದ್ದು, ಸುಮಾರು 350ರಿಂದ 400 ಥಿಯೇಟರ್​ಗಳಲ್ಲಿ ರಿಲೀಸ್ ಮಾಡ್ತಿದ್ದಾರೆ. ಕನ್ನಡದ ಜೊತೆ ತೆಲುಗು ವರ್ಷನ್ ಕೂಡ ರಿಲೀಸ್ ಆಗ್ತಿದ್ದು, ಇದೇ ಮೊದಲ ಬಾರಿ ಪರಭಾಷಾ ಚಿತ್ರಕ್ಕೆ ಕನ್ನಡದಲ್ಲಿ ಪ್ರೀಮಿಯರ್ ಶೋ ಮಾಡಲಾಗ್ತಿದೆ. ಅಂತಹದ್ದೊಂದು ದಾಖಲೆಗೆ ಕೆಆರ್​ಜಿ ಕಾರಣವಾಗ್ತಿದೆ.

ರತ್ನನ್ ಪ್ರಪಂಚ, ಗುರುದೇವ್ ಹೊಯ್ಸಳ, ಉತ್ತರಖಾಂಡದಂತಹ ಸಿನಿಮಾಗಳ ನಿರ್ಮಾಣ ಮಾಡಿ, ಸದಭಿರುಚಿಯ ಚಿತ್ರಗಳ ಪ್ರೊಡಕ್ಷನ್​​ಗೂ ಕೈ ಹಾಕಿರೋ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್, ಕನ್ನಡ ಚಿತ್ರರಂಗದ ಆಶಾಕಿರಣವಾಗಿದ್ದಾರೆ. ಇತ್ತೀಚೆಗೆ ತೆರೆಕಂಡ ಶಿವಾಜಿ ಸುರತ್ಕಲ್-2, ಡೇರ್​ಡೆವಿಲ್ ಮುಸ್ತಾಫಾ ಚಿತ್ರಗಳು ಕೂಡ ಇದೇ ಸಂಸ್ಥೆಯಡಿ ರಿಲೀಸ್ ಆಗಿವೆ.

ಇದನ್ನೂ ಓದಿ: KGF 2ಗೆ ವರುಷ : ರಾಕಿಭಾಯ್ ‘ಉಡೀಸ್ ಮಾಡಿರೋ ದಾಖಲೆ’ಗಳೇನು ಗೊತ್ತಾ?

ಒಟ್ಟಾರೆ ಆದಿಪುರುಷ್ ಸಿನಿಮಾ ಹೀಗೆ ಕರ್ನಾಟಕ ಒಂದರಲ್ಲೇ 2000 ಶೋಗಳಿಂದ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗ್ತಿರೋದು ಖುಷಿಯ ವಿಚಾರ. ಕಾರಣ ನಮ್ಮ ಪ್ಯಾನ್ ಇಂಡಿಯಾ ಸಿನಿಮಾಗಳನ್ನ ಪರಭಾಷೆಗಳ ಡಿಸ್ಟ್ರಿಬ್ಯೂಟರ್ಸ್​ ಗ್ರ್ಯಾಂಡ್ ಆಗಿ ರಿಲೀಸ್ ಮಾಡ್ತಿರುವಾಗ, ಅವ್ರ ಸಿನಿಮಾಗಳನ್ನ ನಾವೂ ಸಹ ಅದೇ ರೇಂಜ್​ಗೆ ರಿಲೀಸ್ ಮಾಡೋದ್ರಲ್ಲಿ ತಪ್ಪೇನಿಲ್ಲ. ಇದು ಆರೋಗ್ಯಕರ ಬ್ಯುಸಿನೆಸ್ ಜೊತೆ ಸಂಬಂಧಗಳನ್ನ ಮತ್ತಷ್ಟು ಗಟ್ಟಿಗೊಳಿಸಲಿದೆ. ಅಂತಹ ಕಾರ್ಯಕ್ಕೆ ಕೈ ಹಾಕಿರೋ ಕಾರ್ತಿಕ್- ಯೋಗಿಗೆ ಜಯವಾಗಲಿ. ನಮ್ಮ ಹೆಮ್ಮೆಯ ರಾಮಾಯಣದ ಕಥೆ ಇದೇ ಶುಕ್ರವಾರದಿಂದ ಪ್ರತಿ ಮನೆ, ಮನಗಳನ್ನ ತಲುಪಲಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

 

RELATED ARTICLES

Related Articles

TRENDING ARTICLES