Tuesday, May 14, 2024

ಜೂ. 26ರಂದು 5 ವಂದೇ ಭಾರತ್ ರೈಲುಗಳಿಗೆ ಚಾಲನೆ

ಬೆಂಗಳೂರು : ಬಹು ನಿರೀಕ್ಷಿತ ಬೆಂಗಳೂರು ಹಾಗೂ ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಓಡಾಟಕ್ಕೆ ಮುಹೂರ್ತ ನಿಗದಿಯಾಗಿದೆ.

ದೇಶದಲ್ಲಿ ಈಗಾಗಲೇ 18 ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿವೆ. ಇದೀಗ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ 5 ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸಲು ರೈಲ್ವೆ ನಿರ್ಧರಿಸಿದೆ.

ಒಂದೇ ದಿನ ದೇಶಾದ್ಯಂತ ಐದು ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದ್ದು, ಬೆಂಗಳೂರು-ಹುಬ್ಬಳ್ಳಿ ರೈಲು ಕೂಡ ಸಂಚಾರ ಆರಂಭಿಸಲಿದೆ. ಜೂನ್ 26ರಂದು ದೇಶಾದ್ಯಂತ ಹೊಸದಾಗಿ 5 ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಐದು ರೈಲುಗಳ ಓಡಾಟಕ್ಕೆ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ : ವಂದೇ ಭಾರತ್ ಎಕ್ಸ್​​ಪ್ರೆಸ್’ಗೆ ಮೋದಿ ಚಾಲನೆ

ಜೂನ್ 26ರಂದು ಬೆಂಗಳೂರು-ಹುಬ್ಬಳ್ಳಿ(Bangalore-Hubali), ಮುಂಬೈ-ಗೋವಾ(Mumbai-Goa), ಪಾಟ್ನಾ-ರಾಂಚಿ(Patna-Ranchi), ಭೋಪಾಲ್-ಇಂಧೋರ್(Bhopal-Indore) ಮತ್ತು ಭೋಪಾಲ್-ಜಬಲ್ಪುರ(Bhopal-Jabalpur) ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ.

ರಾಜ್ಯಕ್ಕೆ 2ನೇ ರೈಲು ಸೇವೆ

ಈಗಾಗಲೇ ಕರ್ನಾಟಕದಲ್ಲಿ ಮೈಸೂರು-ಚೆನ್ನೈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್​ಪ್ರೆಸ್​ ಸಂಚಾರ ನಡೆಸುತ್ತಿದೆ. ಇನ್ನು ಬಹುನಿರೀಕ್ಷಿತ ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್​ ಸಿಗಲಿದೆ. ಆ ಮೂಲಕ ರಾಜ್ಯಕ್ಕೆ 2ನೇ ಸೆಮಿ ಸ್ಪೀಡ್​ ರೈಲು ಸೇವೆ ಸಿಗಲಿದೆ.

RELATED ARTICLES

Related Articles

TRENDING ARTICLES