Sunday, December 22, 2024

Me Too Caseಗೆ ಟ್ವಿಸ್ಟ್ : ನಟಿ ಶ್ರುತಿ ಹರಿಹರನ್ ಗೆ ನೋಟಿಸ್ ಜಾರಿ

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡಿದ್ದ ಅರ್ಜುನ್​ ಸರ್ಜಾ ವಿರುದ್ಧದ ಮೀ ಟೂ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಟಿ ಶ್ರುತಿ ಹರಿಹರನ್‌ಗೆ ನೋಟಿಸ್​ ಜಾರಿ ಮಾಡಲಾಗಿದೆ.

ಬಹುಭಾಷಾ ನಟ ಆಕ್ಷನ್ ಕಿಂಗ್ ಅರ್ಜುನ್​ ಸರ್ಜಾ ವಿರುದ್ಧದ ನಟಿ ಶೃತಿ ಹರಿಹರನ್ ಆರೋಪಕ್ಕೆ ಸೂಕ್ತ ಸಾಕ್ಷಾಧಾರಗಳು ಸಿಕ್ಕಿಲ್ಲ. ಹೀಗಾಗಿ, ಸಿ‌ಆರ್‌ಪಿ‌ಸಿ ನಿಯಮಾನುಸಾರ ಫಾರ್ಮ್​ ನಂಬರ್ 159ರ ಅಡಿಯಲ್ಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಇದಲ್ಲದೆ, ಬಿ ರಿಪೋರ್ಟ್​ ಸಿದ್ಧತೆಗೂ ಕೂಡ ಕಬ್ಬನ್​ ಪಾರ್ಕ್​ ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಕಬ್ಬನ್​ ಪಾರ್ಕ್​ ಪೊಲೀಸರು ಬಿ ರಿಪೋರ್ಟ್​ ಸಿದ್ಧಪಡಿಸಲು ನಿರ್ಧಾರ ಮಾಡಿದ್ದು, ಹೀಗಾಗಿ ಶ್ರುತಿ ಹರಿಹರನ್​ ಅವರಿಗೆ ನೋಟಿಸ್​ ಜಾರಿ ಮಾಡಲಾಗಿದೆ.

ಇದನ್ನೂ ಒದಿ : ಸಿಎಂ ಕುಮಾರಸ್ವಾಮಿಗೂ ಮೀ ಟೂ ಕಂಟಕ?

ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ

ನಟಿ ಶ್ರುತಿ ಹರಿಹರನ್​ ಅವರು, ವಿಸ್ಮಯ ಸಿನಿಮಾ ಚಿತ್ರೀಕರಣ ವೇಳೆ ಲೈಂಗಿಕ ಕಿರುಕುಳ ಆಗಿತ್ತು ಎಂದು ನಟ ಅರ್ಜುನ್ ಸರ್ಜಾ ವಿರುದ್ಧ ಆರೋಪಿಸಿದ್ದರು. ಈ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಗಂಡ ಮತ್ತು ಹೆಂಡತಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಚಿತ್ರೀಕರಣದ ವೇಳೆ ಅರ್ಜುನ್​ ಸರ್ಜಾ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಅಂತಾ ಶ್ರುತಿ ಹರಿಹರನ್​ ಆರೋಪ ಮಾಡಿದ್ದರು.

ಶ್ರುತಿ ಹರಿಹರನ್ ಆರೋಪ ಚಂದನವನದಲ್ಲಿ ವಿವಾದದ ಕಿಚ್ಚು ಹಚ್ಚಿತ್ತು. ಪರ ವಿರೋಧ ಹೇಳಿಕೆಗಳೂ ವ್ಯಕ್ತವಾಗಿದ್ದವು. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷಿ ಸಿಗದ ಕಾರಣ ಅರ್ಜುನ್​ ಸರ್ಜಾ ಅವರಿಗೆ ಈ ಕೇಸ್​ನಿಂದ ಬಿಗ್​ ರಿಲೀಫ್​ ಸಿಗುವ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES