#MeToo ಸದ್ಯದ ಹಾಟ್ ಟಾಪಿಕ್. ಅಮೆರಿಕಾದಲ್ಲಿ ಆರಂಭವಾದ ಈ ಕ್ಯಾಂಪೇನ್ ಈಗ ವರ್ಲ್ಡ್ ವೈಡ್ ವೈರಲ್ ಆಗಿದೆ. ಬಾಲಿವುಡ್, ಸ್ಯಾಂಡಲ್ ವುಡ್ ಅಂಗಳದಲ್ಲೂ ಈ ಮೀ ಟೂ ಘಾಟು ಬಡಿದಿದೆ. ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸರದಿ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೂ ಮೀ ಟೂ ಕಂಟಕ ಎದುರಾಗುತ್ತೆ..! ಹೀಗಂತ ಎಚ್ಚರಿಕೆ ನೀಡಿರೋದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ.
ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರಿಂದ ಯಾರಿಗೆ ಶೋಷಣೆ ಆಗಿದೆಯೋ ಅವರು ದೂರು ನೀಡುತ್ತಾರೆ. ಮೀ ಟೂ ಸುಳಿಯಲ್ಲಿ ಮುಖ್ಯಮಂತ್ರಿಗಳು ಸಿಲುಕಿಕೊಳ್ಳುತ್ತಾರೆ ಅಂತ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತಾಡಿದ ಅವರು ಎಚ್ ಡಿಕೆಗೆ ಮೀ ಟೂ ವಾರ್ನಿಂಗ್ ಕೊಟ್ಟಿದ್ದಾರೆ. ರಾಧಿಕಾ ಅವರನ್ನು ಏಕೆ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಲಿಲ್ಲ. ಹಾಸನ ಜಿಲ್ಲೆಯಲ್ಲಿ ಅವರನ್ನು ಏಕೆ ಚುನಾವಣೆಗೆ ನಿಲ್ಲಿಸುತ್ತಿಲ್ಲ ಅಂತ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.
ಕುಮಾರವ ಸ್ವಾಮಿ ಅವರು ಕೂಡ ಮೀ ಟೂ ಬಲೆಯಲ್ಲಿ ಸಿಕ್ಕಿಕೊಳ್ತಾರೆ. ಅವರಿಂದ ಶೋಷಣೆಗೆ ಒಳಗಾದವರು ಕಂಪ್ಲೇಂಟ್ ಮಾಡುತ್ತಾರೆ ಅಂತ ಕುಮಾರ್ ಬಂಗಾರಪ್ಪ ಭವಿಷ್ಯ ನುಡಿದ್ದಾರೆ.