Tuesday, May 21, 2024

ರಕ್ಷಿತ್ @40 : ಬರ್ತ್ ಡೇ ಸಂಭ್ರಮಕ್ಕೆ ಗುಡ್ ನ್ಯೂಸ್ ಕೊಡ್ತಾರಾ ಕಿರಿಕ್ ಸ್ಟಾರ್?

ಬೆಂಗಳೂರು : 40ನೇ ವಸಂತಕ್ಕೆ ಕಾಲಿಟ್ಟಿರೋ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಸ್ಟಿಲ್ ಮೋಸ್ಟ್ ಎಲಿಜಿಬಲ್ ಬ್ಯಾಚಲರ್. 777 ಚಾರ್ಲಿ ಬಳಿಕ ಗುಡ್ ನ್ಯೂಸ್ ಕೊಡ್ತಾರೆ ಅಂತ ಕಾಯ್ತಿದ್ದ ಫ್ಯಾನ್ಸ್​ಗೆ ಈ ವರ್ಷವೂ ಖಾಲಿ ಪಲಾವ್ ಸಿಕ್ಕಂತಾಗಿದೆ.

2010ರಲ್ಲಿ ನಮ್ ಏರಿಯಲ್ ಒಂದ್ ದಿನ ಸಿನಿಮಾದಿಂದ ಹಿಡಿದು, ರೀಸೆಂಟ್ ಆಗಿ ತೆರೆಕಂಡ 777 ಚಾರ್ಲಿ ವರೆಗೂ ಸದಾ ಕಂಟೆಂಟ್ ಬೇಸ್ಡ್ ಕಥೆಗಳಿಗೆ ಹೆಚ್ಚು ಒತ್ತು ಕೊಟ್ಟವ್ರು ನಟ ರಕ್ಷಿತ್ ಶೆಟ್ಟಿ. ಸದಾ ಹೊಸತನಕ್ಕೆ ಹಾತೊರೆಯೋ ಸಿಂಪಲ್ ಸ್ಟಾರ್, ಸಾಲು ಸಾಲು ಹಿಟ್ಸ್ ನೀಡಿದ್ರು.

ನಿರ್ದೇಶನ, ನಿರ್ಮಾಣ, ಬರವಣಿಗೆ ಹೀಗೆ ನಟನೆ ಜೊತೆ ಚಿತ್ರರಂಗದ ಬೇರೆ ಬೇರೆ ಆಯಾಮಗಳಲ್ಲೂ ತೊಡಗಿಸಿಕೊಂಡ್ರು ರಕ್ಷಿತ್ ಶೆಟ್ಟಿ. 777 ಚಾರ್ಲಿ ಮೂಲಕ 100 ಕೋಟಿ ಬ್ಯುಸಿನೆಸ್ ಮಾಡಿದ ರಕ್ಷಿತ್, ಕಿರಿಕ್ ಪಾರ್ಟಿಯಿಂದ ರಶ್ಮಿಕಾ ಅಂತಹ ನ್ಯಾಷನಲ್ ಕ್ರಶ್​​ನ ಇಂಡಸ್ಟ್ರಿಗೆ ಕೊಡುಗೆಯಾಗಿ ನೀಡಿದ್ರು.

ಇದನ್ನೂ ಓದಿ : ಸೂರಿ ಅಡ್ಡಾದಲ್ಲಿ ‘ಬ್ಯಾಡ್ ಮ್ಯಾನರ್ಸ್’ ರೆಬೆಲಿಸಂ : ಅಭಿ-ಅವಿವಾ ಮದ್ವೆ ಬಳಿಕ ಚಿತ್ರ ರಿಲೀಸ್

ಪ್ರಮೋಷನಲ್ ಪ್ಲಾನ್ಸ್​​ನಲ್ಲಿ ಬ್ಯುಸಿ

ಇದೀಗ ಗೋಧಿಬಣ್ಣ ಹೇಮಂತ್ ಜೊತೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮಾಡಿರೋ ರಕ್ಷಿತ್, ಅದ್ರ ಪ್ರಮೋಷನಲ್ ಪ್ಲಾನ್ಸ್​​ನಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ಹೊಂಬಾಳೆ ಫಿಲಂಸ್​​ನಲ್ಲಿ ತಯಾರಾಗಲಿರೋ ರಿಚರ್ಡ್​ ಆಂಟನಿ ಚಿತ್ರದ ಕಥೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಬಹಳ ವರ್ಷಗಳ ನಂತ್ರ ಉಳಿದವರು ಕಂಡಂತೆ ಸಿನಿಮಾಗೆ ಲಿಂಕ್ ಕೊಡೋ ಅಂತಹ ರಿಚರ್ಡ್​ ಆಂಟನಿಯನ್ನ ನಿರ್ದೇಶಿಸುವುದರ ಜೊತೆ ನಟಿಸೋಕೂ ಸಜ್ಜಾಗ್ತಿದ್ದಾರೆ.

ವಯಸ್ಸು 40 ಆದ್ರೂ, ಇಂದಿಗೂ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಆಗಿರೋ ರಕ್ಷಿತ್, ಬರ್ತ್ ಡೇ ವಿಶೇಷ ಗುಡ್​ನ್ಯೂಸ್ ಕೊಟ್ಟಿಲ್ಲ. ಮದ್ವೆ ಬಗ್ಗೆ ಆಗ್ಲಿ, ರಿಚರ್ಡ್​ ಆಂಟನಿ ಬಗ್ಗೆ ಆಗ್ಲಿ ಏನೂ ರಿವೀಲ್ ಮಾಡಿಲ್ಲ.

RELATED ARTICLES

Related Articles

TRENDING ARTICLES