Monday, December 23, 2024

10 ಕೆಜಿ ಅಕ್ಕಿ ಕೊಟ್ಟೇ ಕೊಡ್ತೇವೆ ; ಸಚಿವ ಕೆ.ಹೆಚ್.ಮುನಿಯಪ್ಪ

ಬೆಂಗಳೂರು: ಕಾಂಗ್ರೆಸ್​ ನೀಡಿದ ಎಲ್ಲಾ ಗ್ಯಾರಂಟಿಗಳನ್ನು ನಾವು ಈಡೇರಿಸುತ್ತೇವೆ.ಇದರಲ್ಲಿ ಎರಡೂ ಮಾತಿಲ್ಲ ಇನ್ನೂ ‘ಕೈ’ ಗ್ಯಾರಂಟಿಯಲ್ಲಿವೊಂದು ಆದ ಅನ್ನಭಾಗ್ಯ ಯೋಜನೆ ಜಾರಿ ಬಗ್ಗೆ ನಾಳೆ ತೀರ್ಮಾನ ಮಾಡ್ತೇವೆ. ಎಂದು ವಿಧಾನಸೌಧದಲ್ಲಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

ಹೌದು, ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಾವು ಅನ್ನಭಾಗ್ಯಯೋಜನೆಯ ಬಗ್ಗೆ ತೀರ್ಮಾನ ಮಾಡುತ್ತೇವೆ.

ಇನ್ನೂ 10 ಕೆಜಿ ಅಕ್ಕಿ ಕೊಟ್ಟೇ ಕೊಡ್ತೇವೆ, ಅದರಲ್ಲಿ ಎರಡನೇ ಮಾತಿಲ್ಲ. 5 ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಜಾರಿ ಮಾಡುತ್ತೇವೆ. ಭಾರತದಲ್ಲಿ ಭತ್ತವನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಾರೆ.

ಇದನ್ನೂ ಓದಿ: ಸಿದ್ಧಗಂಗಾ ಮಠಕ್ಕೆ ಅನುದಾನ ಮುಂದುವರಿಸಲು ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್

ಕೇಂದ್ರ ಸರ್ಕಾರಕ್ಕೆ 5 ಕೆಜಿ ಅಕ್ಕಿ ನೀಡುವಂತೆ ಮನವಿ ಮಾಡ್ತೇವೆ. ಒಂದು ವೇಳೆ ಕೇಂದ್ರ ಸರ್ಕಾರ ಕೊಡದಿದ್ರೆ ಟೆಂಡರ್ ಕರೆಯುತ್ತೇವೆ. ನಾವೇ ಟೆಂಡರ್ ಮೂಲಕ ಅಕ್ಕಿ ಖರೀದಿಸಿ ವಿತರಣೆ ಮಾಡುತ್ತೇವೆ ಎಂದರು.

 

RELATED ARTICLES

Related Articles

TRENDING ARTICLES