Wednesday, January 22, 2025

ಸಾಲುಮರದ ತಿಮ್ಮಕ್ಕಗೆ ಸಂಪುಟ ದರ್ಜೆ ಸ್ಥಾನಮಾನ ಮುಂದುವರಿಸುವಂತೆ ಸಿಎಂ ಆದೇಶ

ಬೆಂಗಳೂರು : ವೃಕ್ಷ ಮಾತೆ ಡಾ.ಸಾಲುಮರದ ತಿಮ್ಮಕ್ಕ ಅವರಿಗೆ (ಈ ಹಿಂದಿನ ಸರ್ಕಾರ ನೀಡಿದ್ದ) ಸಚಿವ ಸಂಪುಟ ದರ್ಜೆ ಸ್ಥಾನಮಾನ ಮುಂದುವರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದಿರುವ ಸಾಲುಮರದ ತಿಮ್ಮಕ್ಕನವರನ್ನು ಹಿಂದಿನ ಸರ್ಕಾರ ಪರಿಸರ ರಾಯಭಾರಿಯನ್ನಾಗಿ ನೇಮಿಸಿತ್ತು. ಅಲ್ಲದೆ, ಪರಿಸರ ಪ್ರೇಮಿ ಡಾ. ಸಾಲುಮರದ ತಿಮ್ಮಕ್ಕನವರಿಗೆ ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಆದೇಶ ಹೊರಡಿಸಿತ್ತು.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರು ಸಹಸ್ರಾರು ಗಿಡಗಳನ್ನು ನೆಟ್ಟು, ಅವುಗಳನ್ನು ತಾಯಿಯಂತೆ ಪೊರೆದು ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ. ಅವರನ್ನು ಗೌರವಿಸುವ ನಿಟ್ಟಿನಲ್ಲಿ ತಿಮ್ಮಕ್ಕನವರಿಗೆ ಈ ಹಿಂದೆ ನೀಡಲಾಗಿದ್ದ ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ಮುಂದುವರೆಸಿ ಹಾಗೂ ಪರಿಸರ ರಾಯಭಾರಿಯಾಗಿ ಅವರನ್ನೇ ಮುಂದುವರೆಸುವಂತೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಶತಾಯುಷಿ ಸಾಲುಮರದ ತಿಮಕ್ಕ, ಸುಕ್ರಿ ಬೊಮ್ಮಗೌಡರಿಂದ ಮತದಾನ

8,000ಕ್ಕೂ ಅಧಿಕ ಮರ ನೆಟ್ಟು ಪೋಷಣೆ

ಸಾಲುಮರದ ತಿಮ್ಮಕ್ಕ ಪರಿಸರಕ್ಕಾಗಿ ತಮ್ಮ ಜೀವನ ಮೂಡಿಪಿಟ್ಟದ್ದಾರೆ. ಸಾಲು ಸಾಲು ಮರಗಳನ್ನು ನೆಟ್ಟು ಪರಿಸರಕ್ಕೆ ನೆರವು ಮಾಡಿದ್ದಾರೆ. ಹುಲಿಕಲ್ ಮತ್ತು ಕುದೂರಿನ ನಡುವಿನ 45 ಕಿ.ಮೀ ಹೆದ್ದಾರಿಯ ಉದ್ದಕ್ಕೂ 385 ಆಲದ ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸಿದ್ದಾರೆ. ಸುಮಾರು 8,000ಕ್ಕೂ ಅಧಿಕ ಮರಗಳನ್ನು ನೆಟ್ಟಿದ್ದಾರೆ.

ತಿಮ್ಮಕ್ಕರ ನಿಸ್ವಾರ್ಥ ಸೇವೆಗೆ ಪದ್ಮಶ್ರೀ, ನಾಡೋಜ ಸೇರಿ ಈವರೆಗೆ ಹಲವು ಪ್ರಶಸ್ತಿ ಲಭಿಸಿವೆ. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ  ಪಡೆದಿರುವ ತಿಮ್ಮಕ್ಕನವರು ಪರಿಸರ ರಾಯಭಾರಿಯಾಗಿದ್ದಾರೆ. ತಿಮ್ಮಕ್ಕನವರಿಗೆ ಗೌರವಿಸುವ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ.

RELATED ARTICLES

Related Articles

TRENDING ARTICLES