Monday, December 23, 2024

ಸಿದ್ದರಾಮಯ್ಯ ಆಪ್ತ ಕೆ . ಎನ್ ರಾಜಣ್ಣನಿಗೆ ಮೊದಲ ಬಾರಿಗೆ ಒಲಿದ ಮಂತ್ರಿ ಭಾಗ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯನ ಸಂಪುಟಕ್ಕೆ ಮಧುಗಿರಿಯ ಕಾಂಗ್ರೆಸ್​ ಶಾಸಕರಾಗಿರುವ ಕೆಎನ್ ರಾಜಣ್ಣ(KN Rajanna)ನಿಗೆ ಮೊದಲ ಬಾರಿಗೆ ಸಚಿವ ಸ್ಥಾನ ಒಲಿದಿದೆ.

ಹೌದು,  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಸಮುಖದಲ್ಲಿಇಂದು ರಾಜಭವನದಲ್ಲಿ ಬುದ್ಧ, ಬಸವಣ್ಣ ಅಂಬೇಡ್ಕರ್​ ವಾಲ್ಮೀಕಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರಿದ್ದರು.

ತುಮಕೂರು ತಾಲೂಕಿನ ಕ್ಯಾತಸಂದ್ರದಲ್ಲಿ 1951 ಏಪ್ರಿಲ್​ 13 ರಂದು ಜನಿಸಿದ ಇವರು ಬಿಎಸ್ಸಿ, ಎಲ್​ಎಲ್​ಬಿ ಮುಗಿಸಿದ್ದಾರೆ. ಬಳಿಕ ವಕೀಲ ವೃತ್ತಿ ಮಾಡುತ್ತ ಕೃಷಿಯಲ್ಲಿ ತೊಡಗಿಕೊಂಡರು. ನಂತರ ಶ್ರೀಮತಿ ಎಸ್​ ಆರ್​ ಶಾಂತಲಾ ಅವರನ್ನ ಮದುವೆಯಾದರು. ಇವರಿಗೆ ಇಬ್ಬರು ಪುತ್ರರು ಹಾಗೂ ಒಬ್ಬಳು ಮಗಳಿದ್ದಾಳೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿರುವ ರಾಜಣ್ಣ, ಪ್ರಬಲ ಸಚಿವ ಆಕಾಂಕ್ಷಿಯಾಗಿದ್ದರು. ಕೊನೆಗೂ ಸಚಿವ ಸ್ಥಾನ ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ. ಸಹಕಾರಿ ಖಾತೆಯ ಮೇಲೆ ಕಣ್ಣಿಟ್ಟಿರುವ ರಾಜಣ್ಣರಿಗೆ ಯಾವ ಖಾತೆ ಒಲಿಯಲಿದೆ ಎಂದು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES