Friday, April 26, 2024

ವಿಪಕ್ಷ ನಾಯಕನ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಭಾರೀ ಪೈಪೋಟಿ

ಬೆಂಗಳೂರು:  ಕಾಂಗ್ರೆಸ್​ ಬಹುಮತ ಬಂದು ಈಗಲೇ ಸರ್ಕಾರ ರಚನೆಯಾಗಿದೆ. ಇನ್ನೂ ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಈ ಬಾರಿ ವಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಾಂಗ್ರೆಸ್​​ನಲ್ಲಿ ಸಿಎಂ, ಡಿಸಿಎಂ ಆಯ್ಕೆ ಪೈನಲ್​ ಆಗಿದೆ. ಆದರೆ ಬಿಜೆಪಿಯಲ್ಲಿ ವಿಪಕ್ಷ ನಾಯಕ ಯಾರು ಎಂಬುದು ಅಂತಿಮವಾಗಿಲ್ಲ.

ಹೌದು, ಮಾಜಿ ಮುಖ್ಯಮಂತ್ರಿ ಬಸವರಾಜ್​​​ ಬೊಮ್ಮಾಯಿ‌ ಅವರನ್ನು ವಿಪಕ್ಷ ನಾಯಕರನ್ನಾಗಿ ಮಾಡುವುದೋ ಅಥವಾ ರಫ್ ಆ್ಯಂಡ್ ಟಫ್ ಶಾಸಕ ಯತ್ನಾಳ್ ಅವರನ್ನು ಈ ಸ್ಥಾನಕ್ಕೆ ಕೂರಿಸುವುದೋ ಎಂಬ ಚರ್ಚೆ ಜೋರಾಗಿದೆ.

ಇದನ್ನೂ ಓದಿ: ಇದು ರಿವರ್ಸ್​ ಗೇರ್ ಸರ್ಕಾರ ; ಬಸವರಾಜ ಬೊಮ್ಮಾಯಿ

ಇನ್ನೂ ಬೊಮ್ಮಾಯಿ‌ ಸಿಎಂ ಆಗಿ ಕಾರ್ಯಕರ್ತರಿಗೆ ರೀಚ್ ಆಗಿಲ್ಲ.. ಕಾರ್ಯಕರ್ತರು ವರ್ಚಸ್ವಿ ನಾಯಕನನ್ನು ಇಷ್ಟ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿಗೆ ವಿಪಕ್ಷ ನಾಯಕ ಸ್ಥಾನ ಕೈತಪ್ಪುವ ಸಾಧ್ಯತೆ ಹೆಚ್ಚಾಗಿವೆ.

ಬಿಜೆಪಿ ತತ್ವ ಸಿದ್ದಾಂತಕ್ಕೆ ಸರಿ ಹೊಂದುವ ಯತ್ನಾಳ್ ವಿಪಕ್ಷ ನಾಯಕ ಆಗಬೇಕು ಎನ್ನುವುದು ಕಾರ್ಯಕರ್ತರ ಇಚ್ಛೆಯಾಗಿದೆ. ಈ ಮಧ್ಯೆ ಯತ್ನಾಳ್​ ದೆಹಲಿಗೆ ಹೋಗಿದ್ದಾರೆ.. ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ಯತ್ನಾಳ್​ ದೆಹಲಿಗೆ ಹೋಗಿದ್ದು, ಕುತೂಹಲ ಮೂಡಿಸಿದೆ. ವಿಪಕ್ಷ ನಾಯಕ ಯಾರಾಗ್ತಾರೆ ಎಂಬುದು ಭಾರೀ ಕುತೂಹಲ ಮೂಡಿಸಿದ್ದು, ಬಿಜೆಪಿ ಹೈಕಮಾಂಡ್​​ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದನ್ನು ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES