Monday, November 18, 2024

ನಕಲಿ ಮತದಾನ : ಕಾರ್ಕಳ ಠಾಣೆಯಲ್ಲಿ ದೂರು ದಾಖಲು

ಉಡುಪಿ : ಮಿಯ್ಯಾರಿನಲ್ಲಿ ನಡೆದ ನಕಲಿ ಮತದಾನ ಸಂಬಂಧ ಕೊನೆಗೂ ಕಾರ್ಕಳ ಠಾಣೆಯಲ್ಲಿ ದೂರು ದಾಖಲಾಗಿದೆ. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮಿಯ್ಯಾರು ಎಂಬಲ್ಲಿ ನಡೆದ ಅಡ್ಡಮತದಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದೆ.

ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ತಡವಾಗಿ ದೂರು ದಾಖಲಾಗಿದೆ. ಮಿಯ್ಯಾರು ಗ್ರಾಮದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತಾರಾನಾಥ್ ಕೋಟ್ಯಾನ್ ಕಾರ್ಕಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಿಯಾರು ಗ್ರಾಮದ ಮತಗಟ್ಟೆ ಸಂಖ್ಯೆ 155 ರಲ್ಲಿ ಸಂಜೆ 5.45 ಕ್ಕೆ ಅಪ್ರಾಪ್ತ ಬಾಲಕನೋರ್ವ ವಿದೇಶದಲ್ಲಿದ್ದ ಸುಹಾಸ್ ಶೆಟ್ಟಿ ಎಂದು ಸುಳ್ಳು ಹೇಳಿ ಅಧಿಕಾರಿಗಳಿಗೆ ಯಾಮಾರಿಸಿ ಕಳ್ಳ ಒಟು ಚಲಾಯಿಸಿದ್ದನು.

ಈ ಘಟನೆ ಕುರಿತಂತೆ ನವೀನ್ ಮತ್ತು ಬಿಜೆಪಿ ಕಾರ್ಯಕರ್ತರಾದ ರೋಹಿತ್ ಶೆಟ್ಟಿ ಇವರು ಕಾನೂನು ಬಾಹಿರವಾಗಿ ಮತ ಚಲಾಯಿಸಲು ಕುಮ್ಮಕ್ಕು ನೀಡಿದ್ದಾರೆ ಎಂಬ ಅನುಮಾನ ಇರುವುದಾಗಿ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ದೇವೇಗೌಡ್ರು ಮನೆಗೆ ‘ಬೊಮ್ಮಾಯಿ ಅಂಡ್ ಟೀಂ’ ಭೇಟಿ

ಸಚಿವರೇ ಕುಮ್ಮಕ್ಕು ಆರೋಪ

ನಕಲಿ ಮತದಾನಕ್ಕೆ ಬಿಜೆಪಿ ಮಾಜಿ ಸಚಿವರೇ ಕುಮ್ಮಕ್ಕು ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ. ಕಾರ್ಕಳ ಕ್ಷೇತ್ರದಲ್ಲಿ ಸುನೀಲ್ ಕುಮಾರ್ ಅವರ ಅನಾಚಾರ, ಅಸಂಸ್ಕೃತ ವರ್ತನೆ ಅನಾವರಣಗೊಂಡಿತ್ತು. ಸಾವಿರಾರು ಹುಡುಗರಿಂದ ನಕಲಿ ಮತದಾನ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಉದಯ್ ಕುಮಾರ್ ಶೆಟ್ಟಿ ಗೆಲುವಿನ ಮುನ್ಸೂಚನೆ ಹಿನ್ನೆಲೆ ಅಪ್ರಾಪ್ತರನ್ನು ಬಳಸಿಕೊಂಡು ನಕಲಿ ಮತದಾನ ಮಾಡಿಸಿದ್ದರು ಎನ್ನಲಾಗಿದೆ.

RELATED ARTICLES

Related Articles

TRENDING ARTICLES