Sunday, May 19, 2024

ಮಲ್ಲಿಕಾರ್ಜುನ್​ ಖರ್ಗೆಗೆ ಒಲಿಯಲಿದೆಯಾ ಸಿಎಂ ಪಟ್ಟ..?

ಬೆಂಗಳೂರು: ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂಬ ಬಗ್ಗೆ ಶಾಸಕರ ನಡುವೆ ಹಗ್ಗ-ಜಗ್ಗಾಟ ನಡೆಯುತ್ತಿದೆ. ಕಡೇ ಕ್ಷಣದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​​​​ ಬದಲು ಮೂರನೆಯವರಿಗೆ ಪಟ್ಟ ಸಿಗುತ್ತದೆಯೋ ಎಂಬ ಚರ್ಚೆಗಳು ನಡೆಯುತ್ತಿವೆ.

ಹೌದು,ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆದ್ದು ಬೀಗಿದೆ(Karnataka Assembly Elections 2023). ಹೊಸ ಸರ್ಕಾರ ರಚನೆಗಾಗಿ ಭಾರೀ ಕಸರತ್ತುಗಳು ನಡೆಯುತ್ತಿವೆ.‌ ಆದ್ರೆ ಯಾರಾಗ್ತಾರೆ ಸಿಎಂ ಎಂಬುವುದು ಈಗ ಕರುನಾಡಿನ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ (Who is Next CM). ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷಸ ಸಭೆ ನಡೆದಿದ್ದು, ಸಭೆಯಲ್ಲಿ ಮುಂದಿನ ಸಿಎಂ ಯಾರು ಅನ್ನೋದರ ಬಗ್ಗೆ ಚರ್ಚೆಗಳು ನಡೆದಿವೆ.

ಕಡೇ ಕ್ಷಣದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​​​​ ಬದಲು ಮೂರನೆಯವರಿಗೆ ಹೆಸರು ಸೂಚಿಸುತ್ತಯೋ ಎಂಬ ಚರ್ಚೆಗಳು ಶುರುವಾಗಿದೆ. ಇನ್ನೂ ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿರುವ ವ್ಯಕ್ತಿ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಕೈ ಹೈಕಮಾಂಡ್​ ಸೂಚಿಸುತ್ತಾ..? ಅಥವಾ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​ ಹೆಸರು ಸೂಚಿಸುತ್ತಾ..? ಎಂಬ ಚರ್ಚೆಗೆ ಉತ್ತರ ಇಂದು ದೆಹಲಿಯಲ್ಲಿ ನಡೆಯುವ ಹೈಕಮಾಂಡ್​ ಮೀಟಿಂಗ್​ನಲ್ಲಿ ಸಿಗುತ್ತದೆ.

ಮೂರು ಬಾರಿ ಸಿಎಂ ಪಟ್ಟ ಕೈ ತಪ್ಪಿದರೂ ಪಕ್ಷ ನಿಷ್ಠೆ ಬಿಡದ ಖರ್ಗೆಗೆ ಸಿಎಂ ಪಟ್ಟ ಒಲಿಯಾಲಿದೆಯಾ ಎಂಬುವುದನ್ನು ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES