Monday, May 20, 2024

How To Vote : ಮತ ಚಲಾಯಿಸೋದು ಹೇಗೆ..?

ಜನತಂತ್ರದ ಹಬ್ಬಕ್ಕೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದೆ.  ಮತದಾನವನ್ನು ನಾವು ಹೇಗೆ ಮಾಡಬೇಕು…? ವೋಟಿಂಗ್‌ ಬೂತ್‌ಗೆ ಹೋದ್ಮೇಲೆ ಏನೆಲ್ಲಾ ಪ್ರಕ್ರಿಯೆಗಳು ಇರುತ್ತೆ ಎಂಬುವುದು ಕೆಲವರಲ್ಲಿ      ಕನ್ಫ್ಯೂಶನ್ ಅಂತು ಇದ್ದೆ ಇರುತ್ತೆ.

ಹೌದು, ಈಗಂತೂ ಎಲೆಕ್ಟ್ರಿಕ್‌ ವಿವಿ ಪ್ಯಾಡ್‌ ಬಂದ್ಮೇಲೆ ಮತಗಟ್ಟೆಯಲ್ಲಿ ಮತ ಚಲಾಯಿಸುವ ತನಕ ಏನೇನು ಮಾಡಬೇಕು ಅನ್ನೋದರ ಬಗ್ಗೆ ಗೊಂದಲ ಸೃಷ್ಟಿಯಾಗುತ್ತದೆ. ಅಂತವರಿಗಾಗಿ ನೀವು ಮತಗಟ್ಟೆಗೆ ತೆರಳುವಲ್ಲಿಂದ ಹಿಡಿದು ನಿಮ್ಮ ಹಕ್ಕು ಚಲಾಯಿಸಿ ಹೊರಗೆ ಬರೋತನಕ ಮಾಡಬೇಕಾದ ಪ್ರಕ್ರಿಯೆಗಳ ವಿವರ ಇಲ್ಲಿದೆ ಮುಂದೆ ಓದಿ..

  • ನೀವು ಮತ ಚಲಾಯಿಸುವಾಗ ಮತಗಟ್ಟೆಯ ಒಳಗೆ ಮೊಬೈಲ್‌ ಆಗಲಿ, ಕ್ಯಾಮೆರಾ ಆಗಲಿ ಯಾವುದೇ ವಸ್ತುಗಳನ್ನು ಬಳಸುವಂತಿಲ್ಲ ಎನ್ನುವ ನಿಯಮವನ್ನು ಚುನಾವಣಾ ಆಯೋಗ ತಂದಿದೆ. ಈ ವಿಷಯ ಎಲ್ಲರ ಗಮನದಲ್ಲಿರಬೇಕು.
  • ಮತಗಟ್ಟೆಯಲ್ಲಿ ಸರತಿ ಸಾಲಿನಂತೆ ಮತದಾರರ ಹೆಸರನ್ನು ಪರಿಶೀಲಿಸಿ ಮತದಾನಕ್ಕೆ ನಮಗೆ ಅವಕಾಶ ಸಿಗುತ್ತದೆ.
  • ನಿಮ್ಮ ಬೆರಳಿಗೆ ಶಾಯಿ ಹಾಕಿ, ಸ್ಲಿಪ್​​ ನೀಡಿ ಸಹಿ ತಗೆದುಕೊಲ್ಲತ್ತಾರೆ .
  • ನಾವು ಸ್ಲಿಪ್​ನ್ನು ಮತ್ತೊಬ್ಬ ಅಧಿಕಾರಿಗೆ ನೀಡಿ ಶಾಹಿ ಹಚ್ಚಿದ ಬೆರಳು ತೋರಿಸಿ ನಾವು EVM ಕಡೆಗೆ ಹೋಗಬೇಕು.
  • ನಾವು ಮೊದಲು ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸಿ ಸೂಕ್ತ ಅಭ್ಯರ್ಥಿಯ ಮೇಲೆ ನಾವು ಕ್ಲಿಕ್​ ಮಾಡಬೇಕು.
  • VVPATನಲ್ಲಿ ನಿಮ್ಮ ಮತ ಚಲಾವಣೆಯಾಗಿರುವುದನ್ನು ತೋರಿಸುತ್ತದೆ.
  • ನೀವು ಹೆಚ್ಚಿನ ಮಾಹಿತಿಗಾಗಿ ಚುನಾವಣೆ ಆಯೋಗದ  ವೆಚ್​ ಸೈಟ್​ ಪರಿಶೀಲನೆ ಮಾಡಬಹುದು.

RELATED ARTICLES

Related Articles

TRENDING ARTICLES