ಚಿತ್ರದುರ್ಗ : ಹೊಸದುರ್ಗ ಐದು ಸುತ್ತಿನ ಕೋಟೆಗೆ ಪ್ರಸಿದ್ದಿಯಾಗಿದ್ದು, ಆ ಕೋಟೆಗೆ ಪಾಳೇಗಾರನಾಗಲು ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಹಗಲಿರುಳು ಹೋರಾಡುತ್ತಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೊಸದುರ್ಗ ಮತ ಕೋಟೆಗೆ ಲಗ್ಗೆ ಹಾಕಿ ಅಖಾಡದಲ್ಲಿ ಘರ್ಜಿಸುತ್ತಿದ್ದಾರೆ. 2008 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬೀಗಿದ್ದ ಗೂಳಿಹಟ್ಟಿ ಶೇಖರ್ ಈ ಬಾರಿಯೂ ಇತಿಹಾಸ ಸೃಷ್ಟಿಸಲು ಅಣಿಯಾಗಿದ್ದಾರೆ.
ಮತಬೇಟಿಗೆ ಹೋದೆಡೆಯಲ್ಲ ಜನರು ಪಟಾಕಿ ಸಿಡಿಸಿ ಹೂಮಾಲೆ ಹಾಕಿ, ಓಕಳಿ ತೆಗೆದು ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಅವರಿಗೆ ಅದ್ದೂರಿಯಾಗಿ ಸ್ವಾಗತ ಕೋರುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯ ಹಣ್ಣಿನ ಬುಟ್ಟಿಯ ಗುರುತಿಗೆ ಮತದಾರ ಪ್ರಭುಗಳು ಒಲವು ತೋರಿಸುತ್ತಿದ್ದಾರೆ.
ಹೊಸದುರ್ಗ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದು, ಪ್ರಚಾರದ ಭಾಗವಾಗಿ ಇಂದು ಕ್ಷೇತ್ರದ ಹೊಸದುರ್ಗ,ಬಾಗೂರು ಶ್ರೀರಾಂಪುರ ಪಂಚಾಯತಿಯ ಗ್ರಾಮಗಳಿಗೆ ತೆರಳಿ ತಮ್ಮ ಹಣ್ಣಿನ ಬುಟ್ಡಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ : ನನ್ನನ್ನು ಗೆಲ್ಲಿಸುವಂತೆ ‘ಕಣಿವೆ ಮಾರಮ್ಮ’ನಿಗೆ ಪ್ರಾರ್ಥಿಸಿದ್ದೇನೆ : ಗೂಳಿಹಟ್ಟಿ ಶೇಖರ್
ಶೇಖರಪ್ಪನೇ ಮುಂದಿನ ಶಾಸಕರು
ಇದೇ ಸಂದರ್ಭದಲ್ಲಿ ಮತದಾರರು ಪ್ರತಿಕ್ರಿಯೆ ನೀಡಿದ್ದು, ನಮ್ಮ ಹೊಸದುರ್ಗ ತಾಲೂಕಿನ ತುಂಬಾ ಕಾಮಗಾರಿ ಚೆಕ್ ಡ್ಯಾಂ ಗಳಾಗಲಿ, ಕರೋನಾ ಸಂಧರ್ಭದಲ್ಲಿ ಕಿಟ್ ಗಳಾಗಲಿ ದಾನಧರ್ಮ ಆಗಲಿ ಶೇಖರಪ್ಪ ಬಿಟ್ಟರೆ ಯಾರೂ ಇಲ್ಲ ಶೇಖರಪ್ಪನೇ ಮುಂದಿನ ಶಾಸಕರು. ಯಾಕೆಂದರೆ ಒಬ್ಬ ಒಳ್ಳೆಯ ವ್ಯಕ್ತಿನಾ ಜನ ಇವತ್ತಿನ ಕಾಲದಲ್ಲಿ ಆರಿಸುತ್ತಾರೆ ಎಂದು ತಿಳಿಸಿದ್ದಾರೆ.
ಹೊಸದುರ್ಗ ಕ್ಷೇತ್ರ ಮತದಾರರೇ ಇದೇ ಮೇ 10ರಂದು ನಡೆಯುವ ಚುನಾವಣೆಯಲ್ಲಿ ನಿಮ್ಮ ಮನೆಮಗನಾದ ನಾನು ಕ್ರ.ಸಂ. 09ರಲ್ಲಿ ‘ಹಣ್ಣಿನ ಬುಟ್ಟಿ’ ಚಿಹ್ನೆ ಅಡಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಯಾವಾಗಲೂ ತಮ್ಮ ಸೇವೆ ಮಾಡಲು ‘ಹಣ್ಣಿನಬುಟ್ಟಿ’ ಚಿಹ್ನೆಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಆಶೀರ್ವದಿಸಿ ಎಂದು ಗೂಳಿಹಟ್ಟಿ ಡಿ.ಶೇಖರ್ ಮನವಿ ಮಾಡಿದ್ದಾರೆ.