Monday, December 23, 2024

ಮದುವೆ ಮನೆಗೆ ತೆರಳಿ ಮತ ಯಾಚಿಸಿದ ರಘು ಆಚಾರ್

ಚಿತ್ರದುರ್ಗ : ಕೋಟೆನಾಡು ಚಿತ್ರದುರ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಹೋದಕಡೆಯೆಲ್ಲಾ ಜನರಿಂದ ಜೆಡಿಎಸ್ ಅಭ್ಯರ್ಥಿಗೆ ಭರ್ಜರಿ ರೆಸ್ಪಾನ್ ವ್ಯಕ್ತವಾಗುತ್ತಿದೆ.

ಇಂದು ಪ್ರಚಾರದ ಅಖಾಡಕ್ಕಿಳಿದ ಜಿ.ರಘು ಆಚಾರ್ ಹುಲ್ಲೂರು, ಹಿರೇಗುಂಟನೂರು, ಬೊಮ್ಮನಹಳ್ಳಿ, ಭೀಮಸಮುದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ರೋಡ್ ಶೋ, ಪಾದಯಾತ್ರೆ, ಮನೆ ಮನೆಗೆ ಭೇಟಿ ನೀಡಿ ಮತ ಬೇಟೆಯಾಡುತ್ತಿದ್ದಾರೆ.

ಪ್ರಚಾರದ ಭರಾಟೆ ನಡುವೆ ಮತದಾರರ ಬಳಿ ಮನವಿ ಮಾಡಿದ ರಘು ಆಚಾರ್ ಅವರು, ಚಿತ್ರದುರ್ಗದ ಸಮಗ್ರ ಅಭಿವೃದ್ಧಿಗಾಗಿ, ನಿಮ್ಮ ಕನಸಿನ ಚಿತ್ರದುರ್ಗದ ನವ ನಿರ್ಮಾಣಕ್ಕಾಗಿ ನನಗೆ ಮತನೀಡಿ. ನಾನು ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ‘ನುಡಿದಂತೆ ನಡೆಯುವ ಯಾವನಾದ್ರು ಸಿಎಂ’ ಇದ್ರೆ ಅದು ನನ್ನ ಮಗ : ಎಚ್.ಡಿ ದೇವೇಗೌಡ

ಲಂಚದ ಹಾವಳಿ, ಜೂಜು ದಂಧೆ ಬ್ರೇಕ್

ಚಿತ್ರದುರ್ಗ ಜಿಲ್ಲೆಯಲ್ಲಿ ಲಂಚದ ಹಾವಳಿ, ಜೂಜು ದಂಧೆ ತಾಂಡವವಾಡುತ್ತಿದೆ. ಈ ಎಲ್ಲಾ ಅಕ್ರಮಗಳಿಗೆ ನಾನು ಕಡಿವಾಣ ಹಾಕುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟು ಒಂದು ಬಾರಿ ಅವಕಾಶ ಕೊಟ್ಟು ನೋಡಿ. ಜೆಡಿಎಸ್ ಪಕ್ಷ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ. ಆ ಮೂಲಕ ನಿಮ್ಮೆಲ್ಲರ ಕಷ್ಟಗಳು ದೂರಾಗಲಿದೆ ಎಂದು ಮನವಿ ಮಾಡಿದರು.

ರಘು ಆಚಾರ್ ಪ್ರಚಾರದ ಸಮಯದಲ್ಲಿ ಅಭಿಮಾನಿಗಳು, ಬೆಂಬಲಿಗರು, ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಕ್ರೇನ್, ಜೆಸಿಬಿಗಳ ಮೂಲಕ ಬೃಹತ್ ಹಾರ ಹಾಕಿ ಹೂಮಳೆಗರೆದು ಅದ್ದೂರಿಯಾಗಿ ಬರಮಾಡಿಕೊಂಡರು.

ಜೆಡಿಎಸ್ ಗೆ ನಿಮ್ಮ ಮತ ನೀಡಿ

ಇದೇ ವೇಳೆ ಹಿರೇಗುಂಟನೂರು ಗ್ರಾಮ ಪಂಚಾಯ್ತಿಯ ಹೊಸಹಳ್ಳಿ, ಉಪ್ಪಾರಹಟ್ಟಿ ಹಾಗೂ ಕತ್ತೆ ತಿಮ್ಮನಹಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ಚುನಾವಣಾ ಪ್ರಚಾರದ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು. ಮೇ 10 ರಂದು ತಪ್ಪದೇ ಮತದಾನ ಮಾಡಿ. ದುರ್ಗದ ಸರ್ವತೋಮುಖ ಅಭಿವೃದ್ಧಿಗಾಗಿ ಈ ಬಾರಿ ಜೆಡಿಎಸ್ ಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಎಂದು ಮನವಿ ಮಾಡಿದರು.

RELATED ARTICLES

Related Articles

TRENDING ARTICLES