Saturday, May 18, 2024

ಇಂದು ಚನ್ನಪಟ್ಟಣಕ್ಕೆ ಮೋದಿ, ದಳಪತಿಗಳು ಫುಲ್ ಅಲರ್ಟ್

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕಮಲ ಅರಳಿಸಲು ಬಿಜೆಪಿ ಪಣ ತೊಟ್ಟಿದೆ. ಹೀಗಾಗಿ, ಪ್ರಧಾನಿ ಮೋದಿ ಚುನಾವಣಾ ರಣಕಣದಲ್ಲಿ ಅಬ್ಬರಿಸುತ್ತಿದ್ದಾರೆ. ಇಂದು ಹಳೇ ಮೈಸೂರು ಭಾಗದಲ್ಲಿ ಕೇಸರಿ ಪಡೆ ರಣಕಹಳೆ ಮೊಳಗಲಿದೆ.

ಪ್ರಧಾನಿ ಮೋದಿ ಹಳೇ ಮೈಸೂರು ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ. ಕೋಲಾರ, ಚನ್ನಪಟ್ಟಣ, ಬೇಲೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ ಅರಮನೆ ನಗರಿ ಮೈಸೂರಿನಲ್ಲಿ ರೋಡ್​ ಶೋ ನಡೆಸಲಿದ್ದಾರೆ. ಆ ಮೂಲಕ ಕಮಲ ಕಲಿಗಳ ಪರ ಮತಯಾಚಿಸಲಿದ್ದಾರೆ.

ಹೀಗಿರಲಿದೆ ನಮೋ ಮಿಂಚಿನ ಸಂಚಾರ

ಬೆಳಗ್ಗೆ 10.45ಕ್ಕೆ ಹೆಲಿಪ್ಯಾಡ್​ ತಲುಪಲಿರುವ ಪ್ರಧಾನಿ ನರೇಂದ್ರ ಮೋದಿ

ಬೆಳಗ್ಗೆ 10.50ಕ್ಕೆ ಕೋಲಾರದತ್ತ ಪ್ರಯಾಣ

ಬೆಳಗ್ಗೆ 11.20ಕ್ಕೆ ಕೋಲಾರ​​ ಹೆಲಿಪ್ಯಾಡ್ ಗೆ ಪ್ರಧಾನಿ ಮೋದಿ ಆಗಮನ

ಬೆಳಗ್ಗೆ 11.25ಕ್ಕೆ ಸಮಾವೇಶದತ್ತ ಪ್ರಧಾನಿ ಪ್ರಯಾಣ

ಬೆಳಗ್ಗೆ 11.30ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿ

ಮಧ್ಯಾಹ್ನ 12.15ಕ್ಕೆ ಸಮಾವೇಶ ಅಂತ್ಯ

ಮಧ್ಯಾಹ್ನ 12.20ಕ್ಕೆ ಸಮಾವೇಶ ಸ್ಥಳದಿಂದ ಹೆಲಿಪ್ಯಾಡ್​ನತ್ತ ಪ್ರಯಾಣ

ಮಧ್ಯಾಹ್ನ 12.30ಕ್ಕೆ ಚನ್ನಪಟ್ಟಣದತ್ತ ಪ್ರಯಾಣ

ಮಧ್ಯಾಹ್ನ 1.15ಕ್ಕೆ ಚನ್ನಪಟ್ಟಣ ಹೆಲಿಪ್ಯಾಡ್​ ಆಗಮನ

ಮಧ್ಯಾಹ್ನ 1.25ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿ

ಮಧ್ಯಾಹ್ನ 2.20ಕ್ಕೆ ಸಮಾವೇಶ ಮುಕ್ತಾಯ

ಇದನ್ನೂ ಓದಿ : ಬಿಜೆಪಿಗೆ ‘ಜನ ಸೇವೆಯೇ ರಾಷ್ಟ್ರಸೇವೆ’ : ಪ್ರಧಾನಿ ಮೋದಿ

ಮಧ್ಯಾಹ್ನ 2.30ಕ್ಕೆ ಬೇಲೂರಿನತ್ತ ಮೋದಿ ಪ್ರಯಾಣ

ಮಧ್ಯಾಹ್ನ 3.30ಕ್ಕೆ ಬೇಲೂರಿನ ಹೆಲಿಪ್ಯಾಡ್​ ಗೆ ಆಗಮನ

ಮಧ್ಯಾಹ್ನ 3.40ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿ

ಸಂಜೆ 4.35ಕ್ಕೆ ಸಮಾವೇಶ ಮುಕ್ತಾಯ

ಸಂಜೆ 4.45ಕ್ಕೆ ಮೈಸೂರಿನತ್ತ ಮೋದಿ

ಸಂಜೆ 5.45ಕ್ಕೆ ಮೈಸೂರು ವಿದ್ಯಾಪೀಠ ವೃತ್ತಕ್ಕೆ ಆಗಮನ

ಸಂಜೆ 5.45ರಿಂದ ಸಂಜೆ 6.30ರವರೆಗೆ ರೋಡ್​ ಶೋ

ಸಂಜೆ 7 ಗಂಟೆಗೆ ದೆಹಲಿಯತ್ತ ಮೋದಿ ಪ್ರಯಾಣ

RELATED ARTICLES

Related Articles

TRENDING ARTICLES