Wednesday, December 25, 2024

ಮಹಾ ಎಡವಟ್ಟು : ಮತ್ತೆ ವಿವಾದಾತ್ಮಕ ಹೇಳಿಕೆ ಹರಿಬಿಟ್ಟ ಶಾಸಕ ಯತ್ನಾಳ್

ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ವಿಷ ಸರ್ಪ. ವಿಷ ಸರ್ಪ ನೆಕ್ಕಿದ್ರೆ ಸತ್ತು ಹೋಗ್ತಾರೆ ಎಂದು ಹೇಳಿರುವ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.

ಕೊಪ್ಪಳದ ಯಲಬುರ್ಗಾದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್‌ನಲ್ಲಿ ‘ರಾಹುಲ್ ಗಾಂಧಿ ಹುಚ್ಚ’ ‘ಮೋದಿ ನಾಗರಹಾವಾದ್ರೆ, ಸೋನಿಯಾ ಗಾಂಧಿ ವಿಷಕನ್ಯನಾ? ಸೋನಿಯಾ ಗಾಂಧಿ ಚೀನಾ ಮತ್ತು ಪಾಕ್‌ನ ಏಜೆಂಟ್ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಂದು ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಯವರ ಬಗ್ಗೆ ನಾಗರ ಹಾವೂ ಅಂತ ಮಾತಾಡ್ತಾರೆ. ಹಿಂದೆ ಮೋದಿ ಬಗ್ಗೆ ಮಾತನಾಡಿಯೆ ಕಲಬುರಗಿಯಲ್ಲಿ ಸೋತರು. ಖರ್ಗೆ ಅವರು ಮೋದಿಯವರಿಗೆ ಅವಮಾನ ಮಾಡುವ ರೀತಿಯಲ್ಲಿ ಮಾತಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಗ್ಯಾರೆಂಟಿ ಬಗ್ಗೆ ಅಶ್ಲೀಲ ಪದ ಬಳಕೆ

ಬಸವರಾಜ ರಾಯರೆಡ್ಡಿ ಅವರು ಲಿಂಗಾಯತ ಹೋರಾಟವನ್ನು ವಿರೋಧಿಸಿದ್ದರು. ಕಳೆದ ಬಾರಿ ಮೋದಿ ಸತ್ತರೆ ಸಾಯಲಿ ಅಂತ ಹೇಳಿದ್ದು ರಾಯರೆಡ್ಡಿ. ಅವರನ್ನು ‘ಟಿಕ್ಕ’ ಎಂದು ಕರೆದಿದ್ದಾರೆ. ಅಲ್ಲದೇ, ಕಾಂಗ್ರೆಸ್ ಗ್ಯಾರೆಂಟಿ ಕುರಿತು ಶಾಸಕ ಯತ್ನಾಳ್ ಅಶ್ಲೀಲ ಪದ ಬಳಕೆ ಮಾಡಿದ್ದಾರೆ.

ರಾಹುಲ್ ಗಾಂಧಿ ಬಂದಲ್ಲೆಲ್ಲಾ ಕಾಂಗ್ರೆಸ್ ಡಬಾಡಬಾ ಅಂತ ಬೀಳ್ತಾವೆ. ರಾಹುಲ್ ಗಾಂಧಿ ಮೊನ್ನೆ ಬಿಜಾಪುರಕ್ಕೆ ಬಂದಿದ್ರು. ನಾನು ಅವತ್ತೇ ಗೆದ್ದುಬಿಟ್ಟೆ. ಅವರೇ ನಮ್ಮ ಸ್ಟಾರ್ ಪ್ರಚಾರಕರು, ರಾಹುಲ್ ಗಾಂಧಿ ಬಂದ್ರೆ ಏನಾದ್ರು ಒಂದ್ ಅಂದೇ ಬಿಡ್ತಾರೆ ಎಂದು ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ : ನಾನು ಪ್ರಧಾನಿ ಮೋದಿಗೆ ‘ವಿಷದ ಹಾವು’ ಎಂದಿಲ್ಲ : ಉಲ್ಟಾ ಹೊಡೆದ ಖರ್ಗೆ

ವ್ಯಾಕ್ಸಿನ್ ಹಾಕಿದ್ರೆ ಮಕ್ಕಳಾಗಲ್ಲ ಅಂದ್ರು

ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ಅವರ ಶವ ಸಂಸ್ಕಾರಕ್ಕೆ ಜಾಗ ಕೊಡದ ಕಾಂಗ್ರೆಸ್, ತಮ್ಮ ಕುಟುಂಬದವರಿಗೆ ಸಮಾದಿ ಕಟ್ಟಿದ್ದಾರೆ. ದೇಹಲಿಯಲ್ಲಿ ಕಾಣೋದು ಕೇವಲ ಎರಡೆ ಗೋರಿ ಅದಿಲ್ ಶಾಯಿ ಇನ್ನೊಂದು ಗಾಂಧಿ ಗೋರಿ. ವ್ಯಾಕ್ಸಿನ್ ಹಾಕಿದ್ರೆ ಮಕ್ಕಳಾಗಲ್ಲ ಅಂದ ಕಾಂಗ್ರೆಸ್ ನವರೆ ಮೊದಲು ಓಡಿ ವಾಕ್ಸಿನ್ ಹಾಕಿಸಿಕೊಂಡಿದ್ರು ಎಂದು ಛೇಡಿಸಿದ್ದಾರೆ.

ಜಮೀರ್ ಒಂದು ವಿಚಿತ್ರ ಪ್ರಾಣಿ

ಜನರ ಜೀವ ಹೋದ್ರು ಪರವಾಗಿಲ್ಲ ಮೋದಿಯವರ ಹೆಸರು ಕೆಡಿಸಬೇಕು ಅಂತಾರೆ. ನಾವು ಹಿಂದೂ ಮುಸ್ಲಿಂ ದ್ವೇಷ ಮಾಡಿಲ್ಲ. ಅದಕ್ಕೆ ಪಾಕಿಸ್ತಾನಕ್ಕೂ ಕೂಡ ವ್ಯಾಕ್ಸಿನ್ ಕೊಟ್ಟಿದ್ದೀವಿ. ಜಮೀರ್ ಅಹ್ಮದ್ ಖಾನ್ ಒಂದು ವಿಚಿತ್ರ ಪ್ರಾಣಿ. ಅವನು ಏನೇನೊ ಮಾತಾಡ್ತಾನೆ. ಕೆಲವೊಂದು ಬೋಗಸ್ ಸರ್ವೆ ಮಾಡ್ತಾರೆ, ಇವುಗಳನ್ನ ನಂಬಬೇಡ್ರಿ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES