Sunday, December 22, 2024

‘ಬಿಜೆಪಿ ಪೂರ್ಣ ಬಹುಮತ’ದಿಂದ ಅಧಿಕಾರಕ್ಕೆ ಬರುವುದು ಖಚಿತ : ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ಜನತೆಯ ಆಶೀರ್ವಾದ ಪಡೆದು, ಈ ಬಾರಿ ಬಿಜೆಪಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುವುದು ಖಚಿತ ಎಂದು ಸಚಿವ ಹಾಗೂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಸಂಜೀವಪ್ಪ ಕಾಲೋನಿ, ಜಯರಾಂ ಕಾಲೋನಿ, ಮತ್ತಿಕೆರೆ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿ, ಬಿಜೆಪಿಗೆ ಸ್ಪಷ್ಟ ಜನಾದೇಶ ನೀಡುವಂತೆ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಮತದಾರರಲ್ಲಿ ಮನವಿ ಮಾಡಿದರು.

ನಮ್ಮ ಜನತೆಗೆ ವಸತಿ ಸೌಲಭ್ಯ, ಶಾಲೆ, ರಸ್ತೆ, ಪಿಂಚಣಿ, ಪಡಿತರ ಚೀಟಿ, ಗುಣಮಟ್ಟದ ಆಸ್ಪತ್ರೆ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ತ್ವದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿರುವ ಬಿಜೆಪಿಯು ದುರ್ಬಲ ವರ್ಗಗಳ ಮತ್ತು ಆರ್ಥಿಕವಾಗಿ ಹಿಂದುಳಿದವರ ಸಬಲೀಕರಣವನ್ನು ಸಾಧಿಸಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : JDSಗೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಶಕ್ತಿಯೇ ಇಲ್ಲ : ಅಶ್ವತ್ಥನಾರಾಯಣ

ಪಾದಯಾತ್ರೆ ಮೂಲಕ ಮತಯಾಚನೆ

ವೈಯಾಲಿಕಾವಲ್ ಪ್ರದೇಶದ ಮಾರುತಿ ಬಡಾವಣೆಯಲ್ಲಿ ಪಾದಯಾತ್ರೆ ಮೂಲಕ ಮನೆಮನೆಗೆ ತೆರಳಿ, ಮತಯಾಚಿಸಿದರು. ಜೊತೆಗೆ ಮಲ್ಲೇಶ್ವರದ ಸಾಧನಾ ಅಪಾರ್ಟ್‌ಮೆಂಟ್ ಮತ್ತು ಗಾಯತ್ರೀನಗರದ ‘ಸಿ’ ಬ್ಲಾಕ್‌ನ  7ನೇ ಅಡ್ಡರಸ್ತೆಯ ನಿವಾಸಿಗಳೊಂದಿಗೆ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಸಭೆ ನಡೆಸಿದರು.

ಅಭಿವೃದ್ಧಿ ಯೋಜನೆಗಳ ಬಗ್ಗೆ ಅರಿವು

ಮಾರುತಿ ಬಡಾವಣೆಯಲ್ಲಿ ದೇವಸ್ಥಾನಕ್ಕೂ ಭೇಟಿ ನೀಡಿ, ದೇವರ ದರ್ಶನ ಪಡೆದರು. ಬಳಿಕ ಮನೆಗಳು ಮತ್ತು ಅಂಗಡಿ ಮುಂಗಟ್ಟುಗಳಿಗೆ ತೆರಳಿ, ಬಿಜೆಪಿಗೆ ಸ್ಪಷ್ಟ ಬಹುಮತ ಕೊಡುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಅವರು, ತಾವು ಶಾಸಕರಾಗಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಿಳಿಸಿದರು.

ಇದೇ ವೇಳೆ ಸಾಧನಾ ಅಪಾರ್ಟ್‌ಮೆಂಟ್ ಮತ್ತು ಗಾಯತ್ರಿ ನಗರಗಳಲ್ಲಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಮತದಾರರ ಸಲಹೆ-ಸೂಚನೆಗಳನ್ನು ಅವರು ಆಲಿಸಿದರು.

RELATED ARTICLES

Related Articles

TRENDING ARTICLES