Monday, December 23, 2024

ಶಿಡ್ಲಘಟ್ಟದಲ್ಲಿ ‘ಬಿಜೆಪಿ ಬಂದ್ರೆ ಅಭಿವೃದ್ಧಿ’ಗೆ ಆನೆಬಲ : ಸೀಕಲ್ ರಾಮಚಂದ್ರಗೌಡ

ಬೆಂಗಳೂರು : ಶಿಡ್ಲಘಟ್ಟದಲ್ಲಿ ‘ಬಿಜೆಪಿ ಬಂದ್ರೆ ಮಾತ್ರ ಅಭಿವೃದ್ಧಿ’ಗೆ ಆನೆಬಲ ಬರುತ್ತದೆ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜಂಗಮಕೋಟೆಯ 5ನೇ ಬ್ಲಾಕ್​ನಲ್ಲಿ 250ಕ್ಕೂ ಹೆಚ್ಚು ಜನರು ಸೀಕಲ್ ರಾಮಚಂದ್ರಗೌಡರ ಸಮ್ಮುಖದಲ್ಲಿ ಇಂದು ಬಿಜೆಪಿಗೆ ಸೇರ್ಪಡೆಗೊಂಡರು.

ಮುಖಂಡರಾದ ಬಿ.ಎಂ.ಆರ್ ರಾಜಣ್ಣ, ಪಾಪಣ್ಣ, ಸತೀಶ್, ಮುನಿಸ್ವಾಮಿ ನಾಯಕ, ಹರೀಶ್ ನಾಯಕ ಮತ್ತು ಮೂರ್ತಿ ಅವರ ನೇತೃತ್ವದಲ್ಲಿ 250 ಜನರ ಅನುಭವಿ ಮತ್ತು ಯುವಕರ ದಂಡೇ ಸೇರ್ಪಡೆಗೊಂಡಿತು. ನೂತನವಾಗಿ ಪಕ್ಷ ಸೇರಿದವರನ್ನು ಬಿಜೆಪಿ ಶಾಲು ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು.

ಯಾಮಾರಿದ್ರೆ ಪಶ್ಚಾತ್ತಾಪ ಗ್ಯಾರೆಂಟಿ

ಈ ವೇಳೆ ಮಾತನಾಡಿದ ಸೀಕಲ್ ರಾಮಚಂದ್ರಗೌಡ ಅವರು, ಮೇ 10ನೇ ತಾರೀಖು ಯಾಮಾರಿದರೆ 5 ವರ್ಷ ಪಶ್ಚಾತ್ತಾಪ ಪಡಬೇಕಾಗುತ್ತದೆ. ಒಮ್ಮೆ ಬಿಜೆಪಿಗೆ ಮತನೀಡಿ ಶಿಡ್ಲಘಟ್ಟದ ಅಭಿವೃದ್ಧಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ : ಮೋದಿ ‘ಕೈ’ ಬಲಪಡಿಸಲು ಸೀಕಲ್ ರಾಮಚಂದ್ರಗೌಡರನ್ನು ಗೆಲ್ಲಿಸಿ : ಜೆ.ಪಿ ನಡ್ಡಾ

ಕಳೆದ ಬಾರಿಯ ಯಾವ ಶಾಸಕರು ಮಾಡದ ಕೆಲಸವನ್ನು 5 ವರ್ಷಗಳಲ್ಲಿ ಮಾಡುತ್ತೇನೆ. ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಶಿಡ್ಲಘಟ್ಟದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮಾತ್ರ ಅಭಿವೃದ್ಧಿಗೆ ಆನೆಬಲ ಸಿಗಲಿದೆ ಎಂದು ಸೀಕಲ್ ರಾಮಚಂದ್ರಗೌಡ ಅವರು ಹೇಳಿದರು.

ಶಿಡ್ಲಘಟ್ಟ ಕೇಸರಿಮಯ

ಸೀಕಲ್ ರಾಮಚಂದ್ರ ಗೌಡ ಅವರು ಶಿಡ್ಲಘಟ್ಟ ಮತಕ್ಷೇತ್ರದಲ್ಲಿ ಹೋದ ಕಡೆಯಲ್ಲೆಲ್ಲ ಕೇಸರಿ ಧ್ವಜ ನೆಟ್ಟು ಬರುತ್ತಿದ್ದಾರೆ. ಜಂಗಮಕೋಟೆಯ ಗ್ರಾಮಸ್ಥರು ಆರತಿ ಬೆಳಗಿ, ಪಟಾಕಿ ಸಿಡಿಸಿ, ಹೂವಿನ ಹಾರಗಳನ್ನು ಹಾಕಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ.ರಾಜಣ್ಣ, ಚಿಕನ್ ವಿಜಿ, ಪ್ರತಾಪ್, ಸೀಕಲ್ ರಾಮಚಂದ್ರ ಗೌಡರ ಬೆಂಬಲಿಗರು, ಅಭಿಮಾನಿಗಳು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES