Thursday, December 26, 2024

ಅವ್ರು, ‘ಮೊಸರನ್ನ ಬೇಕು ಅಂತಾ, ಮಗು ಥರ ಹಠ’ ಮಾಡ್ತಾರೆ : ಅನಿತಾ ಕುಮಾರಸ್ವಾಮಿ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ರಂಗಿನ ನಡುವೆಯೇ ಕೆಲವು ವಿಶೇಷ ಸಂಗತಿಗಳು ನಡೆಯುತ್ತಿವೆ. ಈ ಪೈಕಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಸಂಬಂಧಿಸಿದ ಘಟನೆಗಳೇ ಹೆಚ್ಚು.

ಹೌದು, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪತ್ನಿ ಅನಿತಾ ಅವರನ್ನು ನಾನು ರೇಗಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ನನ್ನನ್ನು ಮದುವೆಯಾಗಲು ಅನಿತಾ ಅವರು ಷರತ್ತು ಹಾಕಿದ್ದರು ಎಂದೂ ಉಲ್ಲೇಖಿಸಿದ್ದರು. ಇದಾದ ಬಳಿಕ ಪಂಚರತ್ನ ಯಾತ್ರೆ ವೇಳೆ ಮಹಿಳಾ ಕಾರ್ಯಕರ್ತೆಯೊಬ್ಬರು ಕುಮಾರಸ್ವಾಮಿಗೆ ಮುತ್ತು ಕೊಟ್ಟಿದ್ದು ಸುದ್ದಿಯಾಗಿತ್ತು. ಇದೀಗ ಮತ್ತೊಂದು ವಿಷಯದಿಂದ ಗಮನ ಸೆಳೆದಿದ್ದಾರೆ.

ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಚೇತರಿಕೆ ಬಳಿಕ ಡಿಸ್ಚಾರ್ಜ್ ಆಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಪತಿ ಬಗೆಗಿನ ಆಸಕ್ತಿದಾಯಕ ವಿಷಯವನ್ನು ಹಂಚಿಕೊಂಡಿದ್ದಾರೆ.

ಕುಮಾರಸ್ವಾಮಿ ಅವರ ಆಹಾರ ಪದ್ಧತಿ ಬಗ್ಗೆ ಮಾತನಾಡಿದ್ದು, ‘ಅಯ್ಯೋ, ಅವರೇನೂ ತಿನ್ನಲ್ಲ.‌ ಮಗು ಥರ ಹಠ ಮಾಡ್ತಾರೆ. ಮೊಸರನ್ನ ಬೇಕು ಅಂತಾರೆಕುಮಾರಸ್ವಾಮಿ ಅವರು ಹೆಚ್ಚಿಗೆ ನೀರು ಕುಡಿಯೊಲ್ಲ. ಊಟದ ವಿಚಾರದಲ್ಲಿ ಮಕ್ಕಳ ರೀತಿ ಹಠ ಮಾಡ್ತಾರೆ’ ಎಂದು ಪತ್ನಿ ಅನಿತಾ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಇದನ್ನೂ ಓದಿ : ಪತ್ನಿ ಅನಿತಾರನ್ನು ನಾನು ರೇಗಿಸ್ತೀನಿ : ಎಚ್.ಡಿ ಕುಮಾರಸ್ವಾಮಿ

ಅವ್ರಿಗೆ ಸ್ವಲ್ಪ ಆಯಾಸ ಆಗಿತ್ತು

ಕುಮಾರಸ್ವಾಮಿಯವರ ಅನಾರೋಗ್ಯದ ಹಿನ್ನೆಲೆಯ ಕಾರಣಗಳನ್ನು ಬಿಚ್ಚಿಟ್ಟ ಅವರು, ಅವರಿಗೆ ಸ್ವಲ್ಪ ಆಯಾಸ ಆಗಿತ್ತು. ಹಾಗಾಗಿ ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕುಮಾರಸ್ವಾಮಿ ಅವರು ಹೆಚ್ಚಿಗೆ ನೀರು ಕುಡಿಯಲ್ಲ. ಎಳನೀರು, ಜ್ಯೂಸ್ ಕುಡಿಯೋದಿಲ್ಲ. ಅದರಿಂದಲೇ ಅವರಿಗೆ ಅನಾರೋಗ್ಯವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಮದುವೆಯಾಗಲು ಷರತ್ತು ಹಾಕಿದ್ರು

ನನ್ನನ್ನು ಮದುವೆಯಾಗಲು ಅನಿತಾ ಅವರು ಷರತ್ತು ಹಾಕಿದ್ದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಹೇಳಿದ್ದರು. ರಾಜಕೀಯಕ್ಕೆ ಹೋಗುವುದಿಲ್ಲ ಎಂದರೆ ಮಾತ್ರ ನಾನು ನಿಮ್ಮನ್ನು ಮದುವೆಯಾಗುತ್ತೇನೆ ಎಂದು ಅನಿತಾ ಹೇಳಿದ್ದರು. ಆ ವೇಳೆ ಮಧುಗಿರಿ ಕ್ಷೇತ್ರದಲ್ಲಿ ದೊಡ್ಡ ಹೋರಾಟವೇ ನಡೆದು ರಾಜಕೀಯಕ್ಕೆ ಇಳಿಯಲೇಬೇಕಾಯಿತು. ನಂತರ ದೇವರ ಇಚ್ಛೆಯಿಂದ ಅನಿತಾ ಅವರೂ ರಾಜಕೀಯಕ್ಕೆ ಬಂದು, ಗೆಲುವನ್ನೂ ಕಂಡರು ಎಂದು ಕುಮಾರಸ್ವಾಮಿ ತಿಳಿಸಿದ್ದರು.

RELATED ARTICLES

Related Articles

TRENDING ARTICLES