Sunday, December 22, 2024

ಪ್ರಧಾನಿ ‘ಮೋದಿ ದಿಲ್ ಕದ್ದ’ ಕನ್ನಡದ ಪೋರಿ

ಬೆಂಗಳೂರು : ‘ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತಾ’ ಎಂಬ ಕನ್ನಡ ಹಾಡಿಗೆ ಕೀಬೋರ್ಡ್‌ ನುಡಿಸಿ ಹಾಡಿರುವ ಕನ್ನಡದ ಪ್ರತಿಭೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಫಿದಾ ಆಗಿದ್ದಾರೆ.

ಹೌದು, ಕೆಲ ದಿನಗಳ ಹಿಂದೆ, ಸುಶ್ರಾವ್ಯವಾಗಿ ಪಿಯಾನೋ ಬಾರಿಸಿದ ಪುಟ್ಟ ಪೋರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಆ ಪೋರಿಯ ಪ್ರತಿಭೆಗೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲೇ ಶುಭ ಹಾರೈಕೆ

ಕೆ.ಎಸ್.ನರಸಿಂಹಸ್ವಾಮಿ ರಚನೆಯ ‘ಪಲ್ಲವಗಳ ಪಲ್ಲವಿಯಲಿ’ ಹಾಡಿಗೆ ತಕ್ಕಂತೆ ಪುಟಾಣಿ ಶಾಲ್ಮಲಿ ಪಿಯಾನೊ ನುಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಡಿಯೊವನ್ನು ರೀ ಟ್ವಿಟ್ ಮಾಡಿದ್ದು, ಶಾಲ್ಮಲಿಗೆ ಕನ್ನಡದಲ್ಲೇ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ : ಪ್ಲೀಸ್.. ಮೋದಿ ಜೀ ಶಾಲೆ ಕಟ್ಟಿಸಿಕೊಡಿ : ಪ್ರಧಾನಿ ಮೋದಿಗೆ ಜಮ್ಮು ಬಾಲಕಿ ಮನವಿ

ಸಂಗೀತ ನುಡಿಸಿ ಹಾಡುವ ಪುಟ್ಟ ಬಾಲಕಿಯ ವಿಡಿಯೋಗೆ ಪ್ರಧಾನಿ ನರೇಂದ್ರ ಮೋದಿ ಅವರು ಮನಸೋತಿದ್ದಾರೆ. ಅಲ್ಲದೆ, ಆ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಶೇರ್ ಮಾಡುವ ಮೂಲಕ ಈ ಪೋರಿಯ ಸಂಗೀತ ಪ್ರೀತಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.

ವಿಡಿಯೋ ಹಂಚಿಕೊಂಡಿದ್ದ ಅನಂತ್

ಅನಂತ್ ಕುಮಾರ್ ಎಂಬುವವರು ಶಾಲ್ಮಲಿ ಎನ್ನುವ ಪುಟ್ಟ ಬಾಲಕಿ ಕೀಬೋರ್ಡ್ ನುಡಿಸುತ್ತಾ ತನ್ನ ತಾಯಿಯ ಜೊತೆ ಹಾಡುವ ವಿಡಿಯೋವನ್ನು ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋವನ್ನು ಪ್ರಧಾನಿ ಮೋದಿ ಅವರು ಗಮನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ವಿಶೇಷತೆಗಳಿಂದ ಕೂಡಿದ ಫೋಟೋ ಹಾಗೂ ವಿಡಿಯೋ ತುಣುಕುಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಅದೇ ರೀತಿ ಕನ್ನಡದ ಪೋರಿಯ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES