Tuesday, May 14, 2024

ವೋಟ್ ಮಾಡಲು ಹೋಗುವ ಬೆಂಗಳೂರಿನ ನೌಕರರಿಗೆ ಗುಡ್​ ನ್ಯೂಸ್​

ಬೆಂಗಳೂರು: ಮತದಾನ ಮಾಡುವುದು ಎಲ್ಲಾರ ಹಕ್ಕು.18ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರು ಮತದಾನ ಮಾಡಿ ತಮ್ಮಗೇ ಬೇಕಾದ ಸರ್ಕಾರ ಹಾಗೂ ನಾಯಕನ್ನು ಆಯ್ಕೆ ಮಾಡುವುದು ಆತನ ಕರ್ತವ್ಯ.ಹೀಗಾಗಿ ಮತದಾನದ ಪ್ರಾಮುಖ್ಯತೆಯನ್ನು ಅರಿಯಬೇಕು.

ಅಂದ್ರೆ ಇತ್ತೀಚಿನ ದಿನಗಳಲ್ಲಿ ಮತದಾನದಿಂದ ಎಷ್ಟೋ ಮಂದಿ ವಂಚಿತರಾಗಿದ್ದಾರೆ. ಅವರ ಈ ನಿರ್ಲಕ್ಷ್ಯಕ್ಕೆ ಕಾರಣ ಈ ರಾಜಕೀಯ ರಂಪಾಟ ಮತ್ತು ಸಮಾಜದ ಕೆಟ್ಟ ವ್ಯವಸ್ಥೆ. ಚುನಾವಣೆಯಲ್ಲಿ ಇನ್ನೂಮೂರು ಲಕ್ಷ ಕಾರ್ಮಿಕರು ಮತದಾನದಿಂದ ವಂಚಿತರಾಗಿದ್ದರು, ಅಂದ್ರೆ ಈಗ ಅವ್ರಿಗೆಲ್ಲ ಖುಷಿ ಸುದ್ದಿ ನೀಡಲಾಗುತ್ತಿದ್ದು.

ಇದನ್ನೂ ಓದಿ : Jagadish Shettar : ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಸೇರ್ಪಡೆ

ಹೌದು,ಎಲೆಕ್ಷನ್ ದಿನ ಗಾರ್ಮೆಂಟ್ಸ್ ನೌಕರರಿಗೆ, ಕಾರ್ಮಿಕರಿಗೆಲ್ಲ(Garments Employees) ಸಂಬಳ ಸಹಿತ ರಜೆ ನೀಡಲು ನಿರ್ಧಾರ ಮಾಡಲಾಗಿದೆ. ಇದೇ ಮೇ 10ರಂದು ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಈ ದಿನ ಕಾರ್ಮಿಕರಿಗೆ ರಜೆ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ವೋಟಿಂಗ್ ಕಡಿಮೆಯಾಗುತ್ತಿದ್ದು, ಐಟಿ ಬಿಟಿ ಮಂದಿ ವೋಟ್​ ಮಾಡ್ದೆ ಬೇರೆ ಕಡೆ ಪ್ರವಾಸ ಹೋಗಿತ್ತಿದ್ದಾರೆ. ಗಾರ್ಮೆಂಟ್ಸ್​ ನೌಕರರು ವೋಟ್​​ಗಾಗಿ ಡ್ಯೂಟಿ ಮಿಸ್​​ ಮಾಡಿದ್ರೆ ಸಂಬಳ ಕಟ್​​ ಮಾಡ್ತಾರೆ ಅಂತ ವೋಟ್ ಮಾಡ್ದೆ ಕೆಲ್ಸಕ್ಕೆ ಹಾಜರಾಗ್ತಿದ್ದಾರೆ. ಹೀಗಾಗಿ ಮತದಾನದ ದಿನ ಎಲ್ಲ್ಲಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ, ಗಾರ್ಮೆಂಟ್ಸ್ ನೌಕರರಿಗೆ ಸಂಬಳ ಸಹಿತ ರಜೆ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಶೇ.50ಕ್ಕಿಂತಲೂ ಕಡಿಮೆ ಆಗುತ್ತೆ. ಹೀಗಾಗೇ ಇದನ್ನ ತಪ್ಪಿಸಲು ವಾರದ ಮಧ್ಯೆ ಮತದಾನದ ದಿನಾಂಕ ಪ್ರಕಟಿಸಿದ್ದಾರೆ. ಆದ್ರೆ, ಗಾರ್ಮೆಂಟ್ಸ್​ ಸಿಬ್ಬಂದಿ ಮತ್ತು ಕಾರ್ಮಿಕರು ಮತದಾನಕ್ಕೆ ಗೈರಾಗುವ ಆತಂಕ ಎದುರಾಗಿದೆ.

ಹೀಗಾಗಿ, ಈ ಬಾರಿ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ, ಪ್ರತಿ ಐಟಿ ಬಿಟಿ ಹಾಗೂ ಗಾರ್ಮೆಂಟ್ಸ್​​​ಗೆ ಭೇಟಿ ನೀಡಿ ವೋಟ್ ಮಾಡಲು ಮನವಿ ಮಾಡ್ತಿದ್ದಾರೆ. ಈ ವೇಳೆ ಗಾರ್ಮೆಂಟ್ಸ್​​ ಸಿಬ್ಬಂದಿ ಮತಹಾಕಲು ಊರಿಗೆ ಹೋದ್ರೆ, ಸಂಬಳ ಕಡಿತವಾಗುವ ಆತಂಕವನ್ನ ವ್ಯಕ್ತಿಪಡಿಸಿದ್ರು. ಇದ್ರಿಂದಾಗಿ ಗಾರ್ಮೆಂಟ್ಸ್ ಕಂಪನಿಗಳಿಗೆ ಸಂಬಳ ಸಹಿತ ರಜೆ ನೀಡುವಂತೆ ಸೂಚನೆ ನೀಡಿದ್ದಾರೆ.

 

RELATED ARTICLES

Related Articles

TRENDING ARTICLES