Sunday, May 12, 2024

ಬಿಜೆಪಿ ‘ಹೈ’ಗೆ ಮಾಡಾಳ್ ಫ್ಯಾಮಿಲಿ ಸೆಡ್ಡು : ಪಕ್ಷೇತರ ಅಭ್ಯರ್ಥಿಯಾಗಿ ಪುತ್ರ ಮಲ್ಲಿಕಾರ್ಜುನ್ ಸ್ಪರ್ಧೆ

ಬೆಂಗಳೂರು : ಬಿಜೆಪಿಯಿಂದ ಟಿಕೆಟ್​ ಸಿಗದಿದ್ದರೂ ಪರವಾಗಿಲ್ಲ. ಆದರೆ ಚೆನ್ನಗಿರಿ ಕ್ಷೇತ್ರ ಬೇರೆಯವರ ಕಬ್ಜ ಆಗಬಾರದು. ಇದೆಲ್ಲ ಲೆಕ್ಕಾಚಾರ ಹಾಕಿಯೇ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಪಕ್ಷೇತರ ಸ್ಪರ್ಧೆಗೆ ನಿರ್ಧಾರ ಮಾಡಿದ್ದು, ಚುನಾವಣೆಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದಾರೆ.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲಂಚಾವತಾರ ಜಗಜ್ಜಾಹೀರಾಗಿದೆ. ಹೀಗಾಗಿ, ಬಿಜೆಪಿ ಹೈಕಮಾಂಡ್​ ಮಾಡಾಳ್​ ಕುಟುಂಬಕ್ಕೆ ಟಿಕೆಟ್​ ನೀಡಿಲ್ಲ. ಆದರೆ, ಬೇರೆ ಅಭ್ಯರ್ಥಿಗಳು ಚನ್ನಗಿರಿ ಕ್ಷೇತ್ರವನ್ನು ಕಬ್ಜ ಮಾಡಿಕೊಳ್ಳಲು ಮಾಡಾಳ್​ ಕುಟುಂಬ ಅವಕಾಶ ನೀಡುತ್ತಿಲ್ಲ.

ಬಿಜೆಪಿ ಹೈಕಮಾಂಡ್​ ವಿರುದ್ಧ ಮಾಡಾಳ್​ ಪುತ್ರ ಮಲ್ಲಿಕಾರ್ಜುನ್​ ಸೆಡ್ಡೊಡೆದಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಈ ಸಂಬಂಧ ಚನ್ನೇಶಪುರದಲ್ಲಿ ಸ್ವಾಭಿಮಾನಿ ಮಾಡಾಳ್ ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದಿಂದ ಸಭೆ ನಡೆಸಲಾಗಿದ್ದು, ಮಲ್ಲಿಕಾರ್ಜುನ ಪಕ್ಷೇತರನಾಗಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ : ಸ್ವಪಕ್ಷದ ವಿರುದ್ಧವೇ ಸಿದ್ದು ಆಪ್ತ ಜಮೀರ್ ಅಹ್ಮದ್ ಕಿಡಿ

ಚನ್ನಗಿರಿ ಕ್ಷೇತ್ರ ಸ್ಥಳೀಯರ ಕೈಯಲ್ಲೇ ಇರಬೇಕು. ನನಗೆ ನಿಮ್ಮ ಅಮೂಲ್ಯವಾದ ಬೆಂಬಲ ನೀಡಿ ಎಂದಿದ್ದಾರೆ. ಇತ್ತ ಮಲ್ಲಿಕಾರ್ಜುನ ತಾಯಿಯೂ ಸಹ ಸೆರಗೊಡ್ಡಿ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ.

ನಾವು ಗೆದ್ದೇ ಗೆಲ್ತೀವಿ

ಇನ್ನು ಚನ್ನಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದುಕೊಂಡಿರುವ ಎಚ್.ಎಸ್ ಶಿವಕುಮಾರ್ ಕ್ಷೇತ್ರದಲ್ಲಿ ಫುಲ್ ಬ್ಯುಜಿಯಾಗಿದ್ದಾರೆ. ಎರಡು‌ ಬಣಗಳಾದ ಬಳಿಕ ಪಕ್ಷಕ್ಕೆ ಸ್ವಲ್ಪ ಹಾನಿಯಾಗುವುದು ಸಹಜ. ಹೀಗಾಗಿ ಸಭೆಗಳನ್ನು ನಡೆಸಿ ಕಾರ್ಯಕರ್ತರಲ್ಲಿ ಇರುವ ಗೊಂದಲವನ್ನು ಸರಿಪಡಿಸಲಾಗುವುದು. ಚನ್ನಗಿರಿ ಬಿಜೆಪಿ ಕ್ಷೇತ್ರ, ಮತಗಳು ಗಟ್ಟಿಯಾಗಿಯೇ ಇದೆ, ನಾವು ಗೆದ್ದೇ ಗೆಲ್ತೀವಿ ಎಂದಿದ್ದಾರೆ.

ಚನ್ನಗಿರಿ ಕ್ಷೇತ್ರದ ಮತದಾರರಿಗೆ ಯಾರಿಗೆ ಮತ ನೀಡಬೇಕು ಎಂಬ ಗೊಂದಲ ಉಂಟಾಗಿದೆ. ಒಟ್ಟಿನಲ್ಲಿ ಮಾಡಾಳ್​ ಮಲ್ಲಿಕಾರ್ಜುನ ಬಿಜೆಪಿಗೆ ಸೆಡ್ಡು ಹೊಡೆದಿದ್ದರೆ, ಇತ್ತ ಸೈಲೆಂಟಾಗಿ ಮತ ಪಡೆಯಲು ಶಿವಕುಮಾರ್ ತಂತ್ರ ರೂಪಿಸುತ್ತಿದ್ದು, ಮುಂದೆ ಅಖಾಡ ಎಲ್ಲಿಗೆ ಬಂತು ನಿಲ್ಲುತ್ತೋ ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES