Wednesday, January 22, 2025

ದೊಡ್ಡಬಳ್ಳಾಪುರದಲ್ಲಿ ಧೀರಜ್ ಮುನಿರಾಜು ಬಿರುಸಿನ ಪ್ರಚಾರ

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಧೀರಜ್ ಮುನಿರಾಜು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಬಿಜೆಪಿ ಗೆಲುವೇ ನಮ್ಮ ಸಂಕಲ್ಪ ಎಂಬ ಘೋಷ ವಾಕ್ಯದೊಂದಿಗೆ ಪ್ರಚಾರದ ಅಖಾಡಕ್ಕೆ ಧುಮುಕಿದ್ದು, ರಾಜಘಟ್ಟ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದಾರೆ.

ಕ್ಷೇತ್ರದ ದೇವಮೂಲೆಯಿಂದ ಪ್ರಾರಂಭಿಸಿರುವ ಮೊದಲ ದಿನದ ಪೂಜಾ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಪೂಜೆ ನಂತರ ಮಧುರೈ ಹೋಬಳಿಯ ಉದ್ದಿಚಕ್ಕನಹಳ್ಳಿಯಿಂದ ಪ್ರಚಾರ ಪ್ರಾರಂಭಿಸಿದರು.

ಇದನ್ನೂ ಓದಿ : ‘ತಿಮ್ಮಪ್ಪನ ದರ್ಶನ’ ಪಡೆದ ಸೀಕಲ್ ರಾಮಚಂದ್ರಗೌಡ

ಬಿಜೆಪಿ ಸೇರಿದ ಕಾರ್ಯಕರ್ತರು

ಇನ್ನೂ ಅನ್ಯ ಪಕ್ಷಗಳಿಂದ ಬೇಸತ್ತು ಅನೇಕ ಮುಖಂಡರು ಮತ್ತು ಯುವಕರು ಬಿಜೆಪಿ ಪಕ್ಷದ ತತ್ವ ಸಿದ್ದಂತಗಳನ್ನು ಒಪ್ಪಿ ಧೀರಜ್ ಮುನಿರಾಜು ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ನೂತನವಾಗಿ ಪಕ್ಷ ಸೇರಿದ ನಾಯಕರಿಗೆ ಬಿಜೆಪಿ ಶಾಲು ಹಾಗೂ ಹಾರ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಇದೇ ವೇಳೆ ಮಾತನಾಡಿದ ಧೀರಜ್ ಮುನಿರಾಜು, ಕೇಂದ್ರದಲ್ಲಿ ಪ್ರಧಾನಿ ನರೆಂದ್ರ ಮೋದಿ ಹಾಗೂ ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿ ಕಾರ್ಯಗಳಿಂದ ಪ್ರೇರೆಪಿತರಾಗಿ ಬೇರೆ ಪಕ್ಷದ ಮುಖಂಡರು ಸ್ವಯಂ ಪ್ರೇರೇಪಿತರಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES