ಮೈಸರೂರು : ಹಳೆ ಮೈಸೂರು ಭಾಗದ ಹೈ ವೋಲ್ಟೇಜ್ ಕ್ಷೇತ್ರ ಚಾಮುಂಡೇಶ್ವರಿ ದಿನೇ ದಿನೇ ರಂಗೇರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಹೆಸರು ಘೋಷಣೆಯಾದ ಬಳಿಕ ಕ್ಷೇತ್ರದಲ್ಲಿ ಕೈ ನಾಯಕರ ತಂಡ ಹೆಚ್ಚು ಅಲರ್ಟ್ ಆಗಿದೆ.
ಹೌದು, ಇದಕ್ಕೆ ಪೂರಕವಾಗಿ ಇಂದು ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದ 11 ಜನ ಒಟ್ಟಾರೆ ಸೇರಿ ಸಭೆ ನಡೆಸಿದ್ದಾರೆ. ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಸೇರಿ ಪ್ರಮುಖ ಕೈ ಮುಖಂಡರು ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಸಭೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಮಾವಿನಹಳ್ಳಿ ಸಿದ್ದೇಗೌಡ, ನನಗೆ ಬಿ ಫಾರಂ ಕೊಡಲು ಕೊಡಲು ಸಹಕರಿಸಿದ ಎಲ್ಲಾ ಕೈ ನಾಯಕರಿಗೆ ಮತ್ತು 11 ಜನ ಟಿಕೆಟ್ ಆಕಾಂಕ್ಷಿಗಳಿಗೆ ನಮಸ್ಕರಿಸುತ್ತೇನೆ. ಇದೇ ಏಪ್ರಿಲ್ 13ನೇ ತಾರೀಕು ಸಿದ್ದರಾಮಯ್ಯನವರು ಚಾಮುಂಡೇಶ್ವರಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುವ ಮೂಲಕ ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ದೊಡ್ಡ ಘೋಷಣೆ : ಯುವತಿಯರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಯಾವತ್ತು ನನಗೆ ಮಾರ್ಗದರ್ಶನ ನೀಡುತ್ತಾರೋ ಅಂದಿನ ದಿನವೇ ನಾನು ನಾಮಿನೇಷನ್ ಫೈಲ್ ಮಾಡಲಿದ್ದೇನೆ. ಈಗಾಗಲೇ ನಾವು ಪ್ರಚಾರವನ್ನು ಕೆಲ ಕಡೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
11 ನಾಯಕರ ಬೆಂಬಲ, ಮಾರ್ಗದರ್ಶನ
ಸಿದ್ದರಾಮಯ್ಯನವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಮಾಡಿದ ನಂತರ ಪ್ರತಿಯೊಂದು ಹಳ್ಳಿಯಲ್ಲೂ ಅಬ್ಬರದ ಪ್ರಚಾರ ಕೈಗೊಳ್ಳಲಿದ್ದೇವೆ. ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದ 11 ನಾಯಕರು ಕೂಡ ನನಗೆ ಕೈಜೋಡಿಸಿ ನಿಲ್ಲುತ್ತೇನೆ ಎಂದು ಮಾರ್ಗದರ್ಶನ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಏಪ್ರಿಲ್ 13 ನೇ ತಾರೀಕು ನನಗೆ ಸಿದ್ದರಾಮಯ್ಯ ಅವರು ಆಶೀರ್ವಾದ ಮಾಡಲು ಬರುತ್ತಿದ್ದಾರೆ. ನಂತರ ಪ್ರಚಾರ ಹೇಗೆ ನಡೆಯಲಿದೆ ಎಂಬುದನ್ನು ನೀವೇ ನೋಡಿ. ಈ ಬಾರಿಯ ಚುನಾವಣೆಯನ್ನು ಕ್ಷೇತ್ರದ ಜನ ನಿರ್ಧರಿಸುತ್ತಾರೆ ಮತ್ತು ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂದು ಮಾವಿನಹಳ್ಳಿ ಸಿದ್ದೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.