ಬೆಂಗಳೂರು : ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು ರಾಜಸ್ಥಾನ ವಿರುದ್ಧ ಟಾಸ್‌ಗೆ ಕಣಕ್ಕಿಳಿಯುವಾಗ ಹೊಸ ಮೈಲುಗಲ್ಲು ಸ್ಥಾಪನೆಯಾಗಲಿದೆ.
ಹೌದು, ಐಪಿಎಲ್ ನಲ್ಲಿ 200 ಪಂದ್ಯಗಳಲ್ಲಿ ಚೆನ್ನೈ (CSK) ತಂಡ ಮುನ್ನಡೆಸಿದ ಮೊದಲ ನಾಯಕ ಎನ್ನುವ ಖ್ಯಾತಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಪಾಲಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ಹಲವು ವರ್ಷಗಳಿಂದ ಮುನ್ನಡೆಸಿದ್ದು ಒಟ್ಟು 199 ಪಂದ್ಯಗಳಲ್ಲಿ 120 ಜಯ ದಾಖಲಿಸಿದ್ದಾರೆ. 78 ಪಂದ್ಯಗಳನ್ನು ಧೋನಿ ನಾಯಕತ್ವದಲ್ಲಿ ಸೋತಿದ್ದು, 60.60% ವಿನ್ನಿಂಗ್ ಸರಾಸರಿ ಹೊಂದಿದ್ದಾರೆ.
Two-Hundred more reasons to whistle for Namma Thala 💛#Thala200 #WhistlePodu 🦁 pic.twitter.com/ajapuZrzrX
— Chennai Super Kings (@ChennaiIPL) April 12, 2023
ತವರು ಅಂಗಳದಲ್ಲೇ ಸಾಧನೆ
ಚೆನ್ನೈನ ಚೆಪಾಕ್ ಮೈದಾನದಲ್ಲಿ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಲಿವೆ. ಇದುವರೆಗೆ ಉಭಯ ತಂಡಗಳು ತಲಾ 3 ಪಂದ್ಯಗಳನ್ನು ಆಡಿದ್ದು, ಎರಡು ಪಂದ್ಯಗಳನ್ನು ಗೆದ್ದಿವೆ.
Salute the King and whistle for his 2️⃣0️⃣0️⃣th as Thala!#Thala200 #WhistlePodu 🦁💛 pic.twitter.com/UCZ5GpaBhb
— Chennai Super Kings (@ChennaiIPL) April 12, 2023
ಇದನ್ನೂ ಓದಿ : ರಾತ್ರೋರಾತ್ರಿ ಸ್ಟಾರ್ ಆದ ರಿಂಕು ಸಿಂಗ್ ಎರಡು ದಿನ ಊಟ ಬಿಟ್ಟಿದ್ದು ಯಾಕೆ ಗೊತ್ತಾ?
ಚೆನ್ನೈಗೆ ತವರಿನಲ್ಲಿ ಗೆಲ್ಲುವ ವಿಶ್ವಾಸ
ಪಾಯಿಂಟ್ಸ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ರಾಯಲ್ಸ್, ಇಂದು ಚೆನ್ನೈ ಮಣಿಸಿದರೆ ಅಗ್ರಸ್ಥಾನಕ್ಕೇರಲಿದೆ. ಲಕ್ನೋ ಹಾಗೂ ಮುಂಬೈ ಸೋಲಿಸಿ, ಗೆಲುವಿನ ಟ್ರ್ಯಾಕ್‌ಗೆ ಮರಳಿರುವ ಸಿಎಸ್‌ಕೆ, ತವರಿನಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಇದೇ ವೇಳೆ ಧೋನಿ ಹೊಸ ಮೈಲುಗಲ್ಲು ನಿರ್ಮಿಸಲಿದ್ದಾರೆ.
A special one to celebrate the super one! #Thala200 #WhistlePodu #Yellove 🦁💛pic.twitter.com/B99w8GLuig
— Chennai Super Kings (@ChennaiIPL) April 12, 2023
ಇಬ್ಬರು ಸ್ಟಾರ್ ಆಟಗಾರರು ಔಟ್
ಇಂದಿನ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಮತ್ತು ಚೆನ್ನೈ ಬೌಲಿಂಗ್ ಅಸ್ತ್ರ ದೀಪಕ್ ಚಹರ್ ಇಂದು ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎನ್ನಲಾಗಿದೆ. ಸ್ಟೋಕ್ಸ್ ಕಾಲ್ಪೆರಳ ಗಾಯಕ್ಕೆ ಒಳಗಾಗಿದ್ದರೆ, ಚಹರ್ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ.