Monday, December 23, 2024

DK Shivakumar : ನನ್ನ ವಿರುದ್ಧ ಸ್ಪರ್ಧೆ ಮಾಡುವುದಾದರೇ ಆರ್.ಅಶೋಕ್​ಗೆ ಸ್ವಾಗತ 

ಚಿಕ್ಕಮಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಒಂದು ತಿಂಗಳು ಮಾತ್ರ ಸಮಯವಿದ್ದು, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆಯಾಗಲಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಳಿಕ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಮಾಡಲಿದೆ. ಈ ನಡುವೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಚರ್ಚೆ ಒಂದು ನಡೆದಿದೆ.

ಇದನ್ನೂ ಓದಿ : Rinku Singh: ರಾತ್ರೋರಾತ್ರಿ ಸ್ಟಾರ್ ಆದ ರಿಂಕು ಸಿಂಗ್ ಎರಡು ದಿನ ಊಟ ಬಿಟ್ಟಿದ್ದು ಯಾಕೆ ಗೊತ್ತಾ..?

ಹೌದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿಯಿಂದ ಸಚಿವ ಆರ್.ಅಶೋಕ್ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ವಿಚರವಾಗಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ವಿರುದ್ಧ ಸ್ಪರ್ಧೆ ಮಾಡುವುದಾದರೇ ಆರ್.ಅಶೋಕ್​ಗೆ ಸ್ವಾಗತಿಸುವೆ ಎಂದು ಕೆಪಿಸಿಸಿ‌ ಅಧ್ಯಕ್ಷ ಡಿ ಕೆ‌ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : Dk Shiva kumar : ಪಕ್ಷದಲ್ಲಿ ನಾಯಕರನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿಯ ಪಟ್ಟಿ ಬಿಡುಗಡೆ ವಿಳಂಬ

ರಾಜಕಾರಣದಲ್ಲಿ ನಮ್ಮ ಎದುರಿಗೆ ಯಾರೇ ಬಂದರೂ ಅವರ ವಿರುದ್ಧ ನಾವು ಹೋರಾಟ ಮಾಡಬೇಕು. ರಾಜಕಾರಣದಲ್ಲಿ ಯಾರು ಯಾರ  ವಿರುದ್ದವಾದರೂ ನಿಲ್ಲಬಹುದು. ಅಶೋಕ್ ಸ್ಪರ್ಧೆ ಮಾಡುವುದಾದರೇ ಅವರಿಗೆ ನನ್ನ ಸ್ವಾಗತವಿದೆ ಎಂದರು.

ಸಿಎಂ ಅಭ್ಯರ್ಥಿ ಸ್ಥಾನದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಹೆಸರು ಪ್ರಸ್ತಾಪ ಕುರಿತು ಪ್ರತಿಕ್ರಿಯಿಸಿದ, ಅವ್ರು ಖರ್ಗೆಗೆ ಹಿಂದೆ ಅನ್ಯಾಯ ಆಗಿದೆ ಎಂಬ ಕೂಗಿದೆ. ಕಾಂಗ್ರೆಸ್ ಪಕ್ಷ ಏನು ಹೇಳುತ್ತದೆಯೋ ನೋಡಣ. ಮಲ್ಲಿಕಾರ್ಜುನ ಖರ್ಗೆ ಇದುವರೆಗೆ ಏನು ಕೇಳಿಲ್ಲ. ಪಕ್ಷ ಹೇಳಿದಂತೆ ನಾವೆಲ್ಲರೂ ಕೇಳಬೇಕು. ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷ 3ನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

 

RELATED ARTICLES

Related Articles

TRENDING ARTICLES