Saturday, February 24, 2024

ಹೊಸ ಕಾರಿನಲ್ಲಿ ಯಾವಾಗ ಕರ್ಕೊಂಡ್ ಹೋಗ್ತೀರಾ? : ರಮ್ಯಾ ಸ್ವೀಟ್ ಪ್ರಶ್ನೆಗೆ ಡಾಲಿ ತಬ್ಬಿಬ್ಬು

ಬೆಂಗಳೂರು : ಹೊಸ ಕಾರಿನಲ್ಲಿ ಯಾವಾಗ ಕಾರ್ನರ್ ಮನೆಗೆ ಕರೆದುಕೊಂಡು ಹೋಗ್ತೀರಾ ಎಂದು ಸ್ವಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ನಟ ಡಾಲಿ ಧನಂಜಯ್ ಅವರಿಗೆ ಕೇಳಿದ್ದಾರೆ.

ಹೌದು, ಹೊಯ್ಸಳ ಸಿನಿಮಾ ಸಕ್ಸಸ್ ನಲ್ಲಿರುವ ನಟ ಡಾಲಿ ಧನಂಜಯ್ ಅವರಿಗೆ ಕೆ.ಆರ್.ಜಿ (KRG) ಸ್ಟುಡಿಯೋ ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್ ಅವರು ಹೊಸ ಕಾರೊಂದನ್ನು ಗಿಫ್ಟ್ ನೀಡಿದ್ದಾರೆ.

ಈ ಬಗ್ಗೆ ಸ್ವತಃ ಡಾಲಿ ಧನಂಜಯ್ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ನಟಿ ರಮ್ಯಾ, ಹೊಸ ಕಾರಿನಲ್ಲಿ ಯಾವಾಗ ಜಾಲಿ ರೈಡ್ ಕರ್ಕೊಂಡ್ ಹೋಗ್ತೀರಾ ಎಂದು ಕೇಳಿದ್ದಾರೆ.

ರಮ್ಯಾ ಟ್ವೀಟ್ ನಲ್ಲಿ ಏನಿದೆ?

ಹೊಸ ಕಾರನ್ನು ಪಡೆದ ನಿಮಗೆ ಅಭಿನಂದನೆಗಳು ಹಾಗೂ ಹೊಯ್ಸಳ ಸಿನಿಮಾ ಯಶಸ್ಸಿಗೆ ಬಿಗ್ ಥ್ಯಾಂಕ್ಸ್ ಧನು. ಈಗ ನೀವು ನನ್ನನ್ನು ನಿಮ್ಮ ಹೊಸ ಕಾರಿನಲ್ಲಿ ಕಾರ್ನರ್ ಮನೆಗೆ ಕರೆದುಕೊಂಡು ಹೋಗಬೇಕು. ಜೊತೆಗೆ, ನನಗೆ (ನಮಗೆ) ಚಾಕೊಲೇಟ್ ಟ್ರೀಟ್ ಕೊಡಿಸಬೇಕು! ಯಾವಾಗ್ ಕರ್ಕೊಂಡ್ ಹೋಗ್ತೀರಾ? ಎಂದು ನಟಿ ರಮ್ಯಾ ಪ್ರಶ್ನೆ.

ಇನ್ನೂ ನಟಿ ರಮ್ಯಾ ಮಾಡಿರುವ ಕಾಮೆಂಟ್ ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಸ್ವೀಟ್ ಎಮೋಜಿ ಬಳಸಿದ್ದರೆ, ಇನ್ನೂ ಕೆಲವರು, ‘ಕನ್ನಡದಲಿ ಉಸಿರಾಡುವುದೆನ್ನೆದೆ.. ಕನ್ನಡ ಉಳಿದು ಬೇರೆ ಏನಿದೆ’ ಎಂದು ಕಾಲೆಳೆದಿದ್ದಾರೆ. ಇತ್ತ, ರಮ್ಯಾ ಕೋರಿಕೆಗೆ ನಟ ಡಾಲಿ ಕಕ್ಕಾಬಿಕ್ಕಿಯಾಗಿದ್ದು, ಯಾವುದೇ ಪ್ರತಕ್ರಿಯೆ ನೀಡಿಲ್ಲ.

RELATED ARTICLES

Related Articles

TRENDING ARTICLES