Monday, December 23, 2024

ಸಿಎಂ ಬೊಮ್ಮಾಯಿ ಭರ್ಜರಿ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಫೀವರ್ ಹೆಚ್ಚಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ಸಹ ನಡೆಯಲಿದೆ. ಹೀಗಾಗಿ, ಪಕ್ಷಗಳು ಮತದಾರರ ಓಲೈಕೆಗೆ ರಣತಂತ್ರ ರೂಪಿಸುತ್ತಿವೆ. ಆಡಳಿತರೂಢ ಬಿಜೆಪಿ ಸರ್ಕಾರವೂ ಇದಕ್ಕೆ ಹೊರತಾಗಿಲ್ಲ.

ಚುನಾವಣೆಯಲ್ಲಿ ಯುವಕರನ್ನು ಓಲೈಸುವ ಉದ್ದೇಶದಿಂದ ಹಲವು ಘೋಷಣೆ ಹೊರಬರುತ್ತಿವೆ. ಉನ್ನತ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ 9 ಹೊಸ ವಿಶ್ವವಿದ್ಯಾಲಯಗಳ ಉದ್ಘಾಟನೆ ಹಾಗೂ 7 ಎಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣದ ಘೋಷಣೆ ಮಾಡಿದೆ.

ಈ ಜಿಲ್ಲೆಗಳಲ್ಲಿ ಹೊಸ ವಿ.ವಿ ಆರಂಭ

ಚಾಮರಾಜನಗರ, ಮಂಡ್ಯ, ಬೀದರ್, ಕೊಡಗು, ಕೊಪ್ಪಳ ಹಾಗೂ ರಾಯಚೂರಿನಲ್ಲಿ ನೂತನ ವಿಶ್ವವಿದ್ಯಾಲಯಗಳು ಆರಂಭವಾಗಲಿವೆ. ರಾಜ್ಯದ ವಿದ್ಯಾರ್ಥಿಗಳು ಐಐಟಿ ಮುಂದೆ ನಿಲ್ಲುವುವು ಬೇಡ. ಕೆಐಟಿ ಮೂಲಕ ದೇಶಕ್ಕೇ ಮಾದರಿ ಶಿಕ್ಷಣ ಒದಗಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ.

ಪ್ರಧಾನಿ ಮೋದಿಗೆ ವಿಶೇಷ ಧನ್ಯವಾದ

ಕಲಬುರ್ಗಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಫ್‌ಡಿಐನಲ್ಲಿ ದೇಶದಲ್ಲೇ ಕರ್ನಾಟಕ ನಂಬರ್ 1. ದೇಶದಲ್ಲೇ ಮೊದಲ ಬಾರಿಗೆ ಎಂಪ್ಲಾಯಿಮೆಂಟ್ ಪಾಲಿಸಿ ತಂದಿದ್ದು ನಾನು. ಟೆಕ್ಸ್ಟ್‌ಟೈಲ್ ಪಾರ್ಕ್‌ನಿಂದ ಈ ಭಾಗದಲ್ಲಿ ಅಭಿವೃದ್ಧಿ ಹೊಸ ಶಕೆ ಆರಂಭವಾಗಲಿದೆ. ಮೇಗಾ ಟೆಕ್ಸ್ಟ್‌ಟೈಲ್ ಪಾರ್ಕ್‌ಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಸರಬರಾಜು ಆಗಲಿದೆ. ಟೆಕ್ಸ್ಟ್‌ಟೈಲ್ ಪಾರ್ಕ್‌‌ನಲ್ಲಿ ಹೂಡಿಕೆ ಮಾಡಲು ಈಗಾಗಲೇ ಅನೇಕ ಉದ್ದಿಮೆದಾರರು ಮುಂದೆ ಬಂದಿದ್ದಾರೆ ಎಂದಿದ್ದಾರೆ.

ಕಲಬುರಗಿಗೆ ಬಂದಿದ್ದು ನನಗೆ ತುಂಬಾ ಖುಷಿಯಾಗುತ್ತಿದೆ. ಕಲಬುರಗಿಯು ದೇಶದ‌ ಮೂಲೆಗೆ ಮೂಲೆಗೆ ಸಂಪರ್ಕ ಬೆಳೆಸುತ್ತದೆ. ಭವಿಷ್ಯದಲ್ಲಿ ಕಲಬುರಗಿ ಹೂಡಿಕೆದಾರರ ಕೇಂದ್ರ ಸ್ಥಾನವಾಗಲಿದೆ. ಪ್ರಧಾನಿಗಳ ಆಶಿರ್ವಾದಿಂದ ಕಲಬುರಗಿಗೆ ಪಿಎಂ ಮಿತ್ರ ಪಾರ್ಕ್ ಮಂಜೂರಾಗಿದೆ. ಕರ್ನಾಟಕದ ಮೊದಲ ಪಿಎಂ ಮಿತ್ರ ಪಾರ್ಕ್ ಕಲಬುರಗಿಯಲ್ಲಿ ಸ್ಥಾಪನೆಯಾಗಲಿದೆ. ಅದಕ್ಕಾಗಿ ಪ್ರಧಾನಿ ಮೋದಿಗೆ ವಿಶೇಷ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES