ಬೆಂಗಳೂರು : ಅಮೆರಿಕದ ನ್ಯಾಶ್ವಿಲ್ಲೆ ನಗರದ ಖಾಸಗಿ ಕ್ರಿಶ್ಚಿಯನ್ ಶಾಲೆಯಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, 3 ವಿದ್ಯಾರ್ಥಿಗಳು ಸೇರಿದಂತೆ 7 ಮಂದಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಶೂಟರ್ ನನ್ನು (ದಾಳಿಕೋರ ಮಹಿಳೆಯಾಗಿದ್ದು) ಘಟನಾ ಸ್ಥಳದಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಪತ್ರೆಗೆ ಕರೆದೊಯ್ದ ಬಳಿಕ ಮೃತರ ಸಾವು ದೃಢಪಟ್ಟಿದೆ. ಟೆನ್ನೆಸ್ಸಿಯ (ಕಾನ್ವೆಂಟ್) ಶಾಲೆಯಲ್ಲಿ ಈ ದಾಳಿ ನಡೆದಿದೆ.
ಬಿಗಿ ಪೊಲೀಸ್ ಬಂದೋಬಸ್ತ್
ಘಟನೆಯಿಂದ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ವಾಸ್ತವವಾಗಿ, ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ತಕ್ಷಣದ ಚಿಕಿತ್ಸೆಗಾಗಿ ಮನ್ರೋ ಕ್ಯಾರೆಲ್ ಜೂನಿಯರ್ ಮಕ್ಕಳ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
An active shooter event has taken place at Covenant School, Covenant Presbyterian Church, on Burton Hills Dr. The shooter was engaged by MNPD and is dead. Student reunification with parents is at Woodmont Baptist Church, 2100 Woodmont Blvd. pic.twitter.com/vO8p9cj3vx
— Metro Nashville PD (@MNPDNashville) March 27, 2023
ಈ ದಾಳಿಯಲ್ಲಿ ಇನ್ನೆಷ್ಟು ಸಾವು ನೋವುಗಳು ಸಂಭವಿಸಿವೆಯೋ ಇಲ್ಲವೋ ಎಂಬುದು ದೃಢಪಟ್ಟಿಲ್ಲ. ಈ ಘಟನೆಯ ನಂತರ, ಶಾಲೆಯಲ್ಲಿದ್ದ ಇತರ ವಿದ್ಯಾರ್ಥಿಗಳನ್ನು ಪೊಲೀಸ್ ರಕ್ಷಣೆಯಲ್ಲಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಯಿತು. ಭಯಭೀತರಾದ ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಚರ್ಚ್‌ಗೆ ಕರೆತರಲಾಯಿತು.
We need to:
Ban assault weapons — and if we can’t, then we should raise the age to purchase them from 18 to 21.
Ban high-capacity magazines.
Strengthen background checks.
Enact safe storage laws and red flag laws.
Repeal gun manufacturers’ immunity from liability.
— President Biden (@POTUS) June 2, 2022
ಶಾಲೆಯ ವೆಬ್‌ಸೈಟ್‌ನ ಪ್ರಕಾರ, 2001ರಲ್ಲಿ ಸ್ಥಾಪಿಸಲಾದ ಶಾಲೆಯು ಸರಿಸುಮಾರು 200 ವಿದ್ಯಾರ್ಥಿಗಳನ್ನು ಹೊಂದಿದೆ. ಅಲ್ಲದೆ ಶಾಲೆಯಲ್ಲಿ 33 ಶಿಕ್ಷಕರಿದ್ದಾರೆ.