Wednesday, January 22, 2025

ಶೂಟಿಂಗ್​ ವೇಳೆ ನಟ ಅಕ್ಷಯ್​ ಕುಮಾರ್ ಗೆ ಪೆಟ್ಟು

ಬೆಂಗಳೂರು : ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದ ಚಿತ್ರೀಕರಣದ ವೇಳೆ ನಟ ಅಕ್ಷಯ್​ ಕುಮಾರ್ ಗಾಯಗೊಂಡಿದ್ದಾರೆ.

55 ವರ್ಷ ವಯಸ್ಸಾದರು ನಟ ಅಕ್ಷಯ್​ ಕುಮಾರ್​ ನಟನೆ ಹಾಗೂ ಫೈಟಿಂಗ್ ಗಾಗಿ ಭರ್ಜರಿ ಕಸರತ್ತು ನಡೆಸುತ್ತಾರೆ. ಸಾಹಸ ಸನ್ನಿವೇಶಗಳ ಚಿತ್ರೀಕರಣದ ವೇಳೆ ಬಾಡಿ ಡಬಲ್​ ಬಳಸುವ ಬದಲು ತಾವೇ ಸ್ವತಃ ಫೈಟ್​ ಮಾಡುತ್ತಾರೆ. ಅವರ ಈ ಹುಮ್ಮಸ್ಸಿನಿಂದ ಕೆಲವೊಮ್ಮೆ ತೊಂದರೆ ಆದ ಉದಾಹರಣೆ ಕೂಡ ಇದೆ. ಈಗ ಮತ್ತೆ ಅಂಥ ಘಟನೆ ನಡೆದಿದೆ.

ಸ್ಕಾಟ್​ಲ್ಯಾಂ​ಡ್​ನಲ್ಲಿ ಶೂಟಿಂಗ್​ ಮಾಡುತ್ತಿರುವಾಗ ಅಕ್ಷಯ್​ ಕುಮಾರ್​ ಅವರಿಗೆ ಪೆಟ್ಟಾಗಿದೆ. ಅವರ ಮೊಣಕಾಲಿಗೆ ಗಾಯ ಆಗಿದೆ. ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಮತ್ತು ಟೈಗರ್​ ಶ್ರಾಫ್​ ನಟಿಸುತ್ತಿದ್ದಾರೆ. ಇದರ ಚಿತ್ರೀಕರಣದ ವೇಳೆ ಅಕ್ಷಯ್​ ಕುಮಾರ್​ ಪೆಟ್ಟು ಮಾಡಿಕೊಂಡಿದ್ದಾರೆ.

ಸಾಹಸ ಸನ್ನಿವೇಶಗಳ ಶೂಟಿಂಗ್​ ವೇಳೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಸಾಮಾನ್ಯವಾಗಿ ಅಕ್ಷಯ್​ ಕುಮಾರ್​ ಅವರು ತುಂಬ ಜಾಗರೂಕತೆ ವಹಿಸುತ್ತಾರೆ. ಆದರೂ ಕೂಡ ಕೆಲವೊಮ್ಮೆ ಅಚಾತುರ್ಯ ಸಂಭವಿಸುತ್ತದೆ. ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಅಲಿ ಅಬ್ಬಾಸ್​ ಜಫರ್​ ನಿರ್ದೇಶನ ಮಾಡುತ್ತಿದ್ದಾರೆ.

ಈ ಚಿತ್ರದ ಶೂಟಿಂಗ್​ ವೇಳೆ ಪೆಟ್ಟು ಮಾಡಿಕೊಂಡರೂ ಕೂಡ ಅಕ್ಷಯ್​ ಕುಮಾರ್​ ಅವರು ಚಿತ್ರೀಕರಣ ನಿಲ್ಲಿಸಿಲ್ಲ. ಕೆಲವೇ ನಿಮಿಷಗಳ ಕಾಲ ವಿಶ್ರಾಂತಿ ಪಡೆದ ನಂತರ ಅವರು ಶೂಟಿಂಗ್​ ಮುಂದುವರಿಸಿದ್ದಾರೆ.

RELATED ARTICLES

Related Articles

TRENDING ARTICLES