ಬೆಂಗಳೂರು : ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯು ರಾಜ್ಯದ ಮಹಿಳೆಯರಿಗೆ ಶುಭಸುದ್ದಿ ನೀಡಿದೆ.
ಹೌದು, ಮಂಗಳವಾರ (ಇಂದು) ಮಧ್ಯರಾತ್ರಿ 12ರಿಂದ ಆರಂಭಗೊಂಡು ಮುಂದಿನ 24 ಗಂಟೆಯವರೆಗೆ ಮಹಿಳೆಯರು ವೋಲ್ಲೋ ಬಸ್ ಸೇರಿದಂತೆ ಎಲ್ಲಾ ಸರ್ಕಾರಿ ಬಸ್ ಗಳಲ್ಲೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಸಂಸ್ಥೆ ಘೋಷಿಸಿದೆ.
ಮಹಿಳೆಯರಿಗೆ ಗೌರವ ನೀಡುವ ಮೂಲಕ ಅವರಿಗೆ ರಾಜ್ಯ ಸರ್ಕಾರವೇ ನಮ್ಮ ಬೆಂಬಲಕ್ಕಿದೆ ಎಂದು ಭಾವನೆ ಮೂಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ.
ಸಾರ್ವಜನಿಕ ಸಾರಿಗೆಗೆ ಉತ್ತೇಜನೆ
ಅಂತರಾಷ್ಟ್ರೀಯ ಮಹಿಳಾ ದಿನದಂದು (ಮಾರ್ಚ್ 8) ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲು ಬಿಎಂಟಿಸಿ (BMTC) ಮುಂದಾಗಿತ್ತು. ಈ ಸಂಬಂಧ ಬಿಎಂಟಿಸಿ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ನಿರ್ಧಾರದಿಂದ ರಾಜ್ಯ ಸರ್ಕಾರದ ಜನಪ್ರಿಯತೆಯೂ ಹೆಚ್ಚಾಗಲಿದೆ. ಜೊತೆಗೆ, ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲಾಗುತ್ತದೆ ಎಂದು ಬಿಎಂಟಿಸಿ ತಿಳಿಸಿತ್ತು.
ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಸಿಹಿ ಸುದ್ದಿ..!
20 ಲಕ್ಷ ಜನ ಸಂಚಾರ
ಬೆಂಗಳೂರಿನಲ್ಲಿ ನಿತ್ಯ 10.21 ಲಕ್ಷ ಮಹಿಳಾ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಮಹಿಳಾ ದಿನಾಚರಣೆ ದಿನದಂದು ಉಚಿತ ಸೇವೆ ಕಲ್ಪಿಸಿದರೆ ಸುಮಾರು 20 ಲಕ್ಷ ಜನ ಸಂಚಾರ ಮಾಡುಬಹುದು. ಜೊತೆಗೆ, ಮಾರ್ಚ್8ರಂದು ನಿಗಮಕ್ಕೆ 8 ಕೋಟಿ ನಷ್ಟ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.