ಲೋಕ ಸಮರದ ಫಟಾಫಟ್ ಫಲಿತಾಂಶ – ಲೈವ್ ಅಪ್ಡೇಟ್ಸ್
17ನೇ ಲೋಕಸಭಾ ಫಲಿತಾಂಶಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ, ತಮಿಳುನಾಡಿನ ವೆಲ್ಲೂರಿನಲ್ಲಿ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಚುನಾವಣೆ ರದ್ದಾಗಿದೆ. 7 ಹಂತಗಳಲ್ಲಿ 29 ರಾಜ್ಯ ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆದಿದೆ. ಒಟ್ಟಾರೆಯಾಗಿ ಶೇ, 67.11ರಷ್ಟು ಮತದಾನ ನಡೆದಿದೆ.
ಎಲ್ಲೆಲ್ಲಿ? ಎಷ್ಟೆಷ್ಟು ಕ್ಷೇತ್ರ?
ಉತ್ತರಪ್ರದೇಶ-80, ಮಹಾರಾಷ್ಟ್ರ-48, ಪಶ್ಚಿಮ ಬಂಗಾಳ-42, ಬಿಹಾರ-40, ತಮಿಳುನಾಡು-39, ಮಧ್ಯಪ್ರದೇಶ-29, ಕರ್ನಾಟಕ-28, ಗುಜರಾತ್-26, ರಾಜಸ್ಥಾನ-25, ಆಂಧ್ರಪ್ರದೇಶ-25, ಒಡಿಶಾ-21, ಕೇರಳ-20, ತೆಲಂಗಾಣ-17, ಅಸ್ಸಾಂ-14,ಜಾರ್ಖಂಡ್-14, ಪಂಜಾಬ್-13, ಚತ್ತೀಸ್‌ಗಢ-11, ಹರಿಯಾಣ-10, ಜಮ್ಮು-ಕಾಶ್ಮೀರ-06, ದೆಹಲಿ-07, ಉತ್ತರಾಂಚಲ-05, ಹಿಮಾಚಲಪ್ರದೇಶ-04, ಗೋವಾ-02, ಅರುಣಾಚಲಪ್ರದೇಶ-02, ಮೇಘಾಲಯ-02, ಮಣಿಪುರ-02, ತ್ರಿಪುರಾ-02, ಮಿಜಾರೋಂ-01, ನಾಗಾಲ್ಯಾಂಡ್-01, ಸಿಕ್ಕಿಂ-01, ಚಂಡೀಗಢ್-01, ಅಂಡಮಾನ್ ಮತ್ತು ನಿಕೋಬಾರ್-01, ದಾದ್ರಾ ಮತ್ತು ಹವೇಲಿ-01, ದಿಯು-ದಮನ್-01, ಲಕ್ಷದ್ವೀಪ-01, ಪಾಂಡಿಚೇರಿ-01 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.
ಕರ್ನಾಟಕದಲ್ಲಿ ಚುನಾವಣೆ : ರಾಜ್ಯದ 28 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಫಲಿತಾಂಶವನ್ನು ಎದುರು ನೋಡ್ತಾ ಇದ್ದೇವೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಶೇ.68.61ರಷ್ಟು ಮತದಾರರು ಮತದಾನ ಮಾಡಿದ್ದಾರೆ. ಅಂದ್ರೆ 3 ಕೋಟಿ 50 ಲಕ್ಷದ 31 ಸಾವಿರ 495 ಮಂದಿ ಮತ ಹಕ್ಕು ಚಲಾಯಿಸಿದ್ದಾರೆ. ಒಟ್ಟು 28 ಕ್ಷೇತ್ರಗಳಲ್ಲಿ 4,215 ಸುತ್ತುಗಳಲ್ಲಿ ಮತಎಣಿಕೆ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆಯೇ? ಅಥವಾ ಮಹಾ ಘಟಬಂಧನ ಯಶಸ್ವಿಯಾಗುತ್ತದೆಯೇ ಅನ್ನೋ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಫಲಿತಾಂಶಕ್ಕೆ ನಾವು-ನೀವೆಲ್ಲಾ ಕಾತುರದಿಂದ ಕಾಯ್ತಾ ಇದ್ದೇವೆ. 8 ಗಂಟೆಗೆ ಮತ ಎಣಿಕೆ ಆರಂಭವಾಗುತ್ತಿದ್ದು, ಅದರ ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿದೆ.
ಲೋಕ ಸಮರದ ಫಟಾಫಟ್ ಫಲಿತಾಂಶ – ಲೈವ್ ಅಪ್ಡೇಟ್ಸ್



Pinco oyunçular üçün təhlükəsiz sistemdir. Canlı mərclərdə iştirak et və nəticəni dərhal gör, https://pinkoaz.website.yandexcloud.net/. Pinco bet platforması sadə interfeysə malikdir.
Pinco oyun dünyasına xoş gəlmisən.