Thursday, November 7, 2024

ಮತ ಎಣಿಕೆಗೆ ಶುರುವಾಯ್ತು ಕೌಂಟ್​ಡೌನ್…ಯಾರಿಗೆ ದೆಹಲಿ ಗದ್ದುಗೆ?

ಲೋಕ ಸಮರದ ಫಟಾಫಟ್​ ಫಲಿತಾಂಶ – ಲೈವ್ ಅಪ್​​​ಡೇಟ್ಸ್​

17ನೇ ಲೋಕಸಭಾ ಫಲಿತಾಂಶಕ್ಕೆ ಕೌಂಟ್​ಡೌನ್​ ಸ್ಟಾರ್ಟ್ ಆಗಿದೆ. ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ, ತಮಿಳುನಾಡಿನ ವೆಲ್ಲೂರಿನಲ್ಲಿ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಚುನಾವಣೆ ರದ್ದಾಗಿದೆ. 7 ಹಂತಗಳಲ್ಲಿ 29 ರಾಜ್ಯ ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆದಿದೆ. ಒಟ್ಟಾರೆಯಾಗಿ ಶೇ, 67.11ರಷ್ಟು ಮತದಾನ ನಡೆದಿದೆ.
ಎಲ್ಲೆಲ್ಲಿ? ಎಷ್ಟೆಷ್ಟು ಕ್ಷೇತ್ರ?
ಉತ್ತರಪ್ರದೇಶ-80, ಮಹಾರಾಷ್ಟ್ರ-48, ಪಶ್ಚಿಮ ಬಂಗಾಳ-42, ಬಿಹಾರ-40, ತಮಿಳುನಾಡು-39, ಮಧ್ಯಪ್ರದೇಶ-29, ಕರ್ನಾಟಕ-28, ಗುಜರಾತ್-26, ರಾಜಸ್ಥಾನ-25, ಆಂಧ್ರಪ್ರದೇಶ-25, ಒಡಿಶಾ-21, ಕೇರಳ-20, ತೆಲಂಗಾಣ-17, ಅಸ್ಸಾಂ-14,ಜಾರ್ಖಂಡ್-14, ಪಂಜಾಬ್-13, ಚತ್ತೀಸ್‌ಗಢ-11, ಹರಿಯಾಣ-10, ಜಮ್ಮು-ಕಾಶ್ಮೀರ-06, ದೆಹಲಿ-07, ಉತ್ತರಾಂಚಲ-05, ಹಿಮಾಚಲಪ್ರದೇಶ-04, ಗೋವಾ-02, ಅರುಣಾಚಲಪ್ರದೇಶ-02, ಮೇಘಾಲಯ-02, ಮಣಿಪುರ-02, ತ್ರಿಪುರಾ-02, ಮಿಜಾರೋಂ-01, ನಾಗಾಲ್ಯಾಂಡ್-01, ಸಿಕ್ಕಿಂ-01, ಚಂಡೀಗಢ್-01, ಅಂಡಮಾನ್ ಮತ್ತು ನಿಕೋಬಾರ್-01, ದಾದ್ರಾ ಮತ್ತು ಹವೇಲಿ-01, ದಿಯು-ದಮನ್-01, ಲಕ್ಷದ್ವೀಪ-01, ಪಾಂಡಿಚೇರಿ-01 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.

ಕರ್ನಾಟಕದಲ್ಲಿ ಚುನಾವಣೆ : ರಾಜ್ಯದ 28 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಫಲಿತಾಂಶವನ್ನು ಎದುರು ನೋಡ್ತಾ ಇದ್ದೇವೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಶೇ.68.61ರಷ್ಟು ಮತದಾರರು ಮತದಾನ ಮಾಡಿದ್ದಾರೆ. ಅಂದ್ರೆ 3 ಕೋಟಿ 50 ಲಕ್ಷದ 31 ಸಾವಿರ 495 ಮಂದಿ ಮತ ಹಕ್ಕು ಚಲಾಯಿಸಿದ್ದಾರೆ. ಒಟ್ಟು 28 ಕ್ಷೇತ್ರಗಳಲ್ಲಿ 4,215 ಸುತ್ತುಗಳಲ್ಲಿ ಮತಎಣಿಕೆ ನಡೆಯಲಿದೆ. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆಯೇ? ಅಥವಾ ಮಹಾ ಘಟಬಂಧನ ಯಶಸ್ವಿಯಾಗುತ್ತದೆಯೇ ಅನ್ನೋ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಫಲಿತಾಂಶಕ್ಕೆ ನಾವು-ನೀವೆಲ್ಲಾ ಕಾತುರದಿಂದ ಕಾಯ್ತಾ ಇದ್ದೇವೆ. 8 ಗಂಟೆಗೆ ಮತ ಎಣಿಕೆ ಆರಂಭವಾಗುತ್ತಿದ್ದು, ಅದರ ಕ್ಷಣ ಕ್ಷಣದ ಅಪ್​ಡೇಟ್ಸ್ ಇಲ್ಲಿದೆ.

ಲೋಕ ಸಮರದ ಫಟಾಫಟ್​ ಫಲಿತಾಂಶ – ಲೈವ್ ಅಪ್​​​ಡೇಟ್ಸ್​

 

RELATED ARTICLES

Related Articles

TRENDING ARTICLES