ರೆಬಲ್ ಸ್ಟಾರ್ ಅಂಬರೀಶ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
”ಹಿರಿಯ ನಟ, ಮಾಜಿ ಸಚಿವ ಮತ್ತು ದೀರ್ಘಕಾಲದ ನನ್ನ ಗೆಳೆಯ ಅಂಬರೀಶ್ ಅವರ ಸಾವು ದಿಗ್ಭ್ರಮೆ ಉಂಟು ಮಾಡಿದೆ. ತೀರಾ ಅನಿರೀಕ್ಷಿತ ಸಾವು. ಚಿತ್ರರಂಗ ಮತ್ತು ರಾಜಕೀಯರಂಗಗಳೆರಡರಲ್ಲಿಯೂ ಜನಮನ ಗೆದ್ದ ನಾಯಕ ಅಂಬರೀಷ್.ನಿಜವಾದ ಅರ್ಥದಲ್ಲಿ ಅಜಾತಶತ್ರು. ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿ” ಅಂತ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಶಾಂತಿ ಸಂಯಮದಿಂದ ಅಂತಿಮ ಗೌರವ : ”ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಅವರ ಸಾವಿನಿಂದ ಅವರ ಅಪಾರ ಅಭಿಮಾನಿಗಳಿಗಾಗಿರುವ ಆಘಾತ, ದುಃಖ, ನೋವುಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಈ ಸಂದರ್ಭದಲ್ಲಿ ಎಲ್ಲರೂ ಶಾಂತಿ ಮತ್ತು ಸಂಯಮವನ್ನು ಕಾಪಾಡಿಕೊಂಡು ಮೃತ ನಾಯಕನಿಗೆ ಅಂತಿಮ ಗೌರವ ಸಲ್ಲಿಸಬೇಕೆಂದು ನಾನು ಮನವಿಮಾಡಿಕೊಳ್ಳುತ್ತೇನೆ.
ಅಂಬರೀಶ್ ಅವರ ಅಗಲಿಕೆ ಆಘಾತವನ್ನುಂಟು ಮಾಡಿದೆ : ಎಚ್.ಡಿ ದೇವೇಗೌಡ್ರು
ಅಪ್ಪಾಜಿಯನ್ನು ಕಳೆದುಕೊಂಡಿದ್ದನ್ನು ಅರಗಿಸಿಕೊಳ್ಳಲಾಗ್ತಿಲ್ಲ – ದರ್ಶನ್
ಹುಸಿ ಕೋಪದಿಂದಲೇ ಪ್ರೀತಿ ಸಂಪಾದಿಸಿದ್ದ ಎಲ್ಲರ ಅಣ್ಣ ಅಂಬಿ – ಡಿ.ವಿ ಸದಾನಂದ ಗೌಡ