ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಬನಿ ಮಿಡಿದಿದ್ದಾರೆ. ಸ್ವೀಡನ್ ನಲ್ಲಿ ‘ಯಜಮಾನ’ ಚಿತ್ರದ ಶೂಟಿಂಗ್ ನಡೀತಾ ಇದ್ದು, ಇದನ್ನು ಸ್ಥಗಿತಗೊಳಿಸಿ ದರ್ಶನ್ ಮತ್ತು ಇಡೀ ಸಿನಿಮಾ ತಂಡ ಬೆಂಗಳೂರಿಗೆ ಹೊರಡುತ್ತಿದೆ.
”ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ” ಅಂತ ದರ್ಶನ್ ಟ್ವೀಟ್ ಮಾಡಿದ್ದಾರೆ.
ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ.
— Darshan Thoogudeepa (@dasadarshan) November 24, 2018
ಹುಸಿ ಕೋಪದಿಂದಲೇ ಪ್ರೀತಿ ಸಂಪಾದಿಸಿದ್ದ ಎಲ್ಲರ ಅಣ್ಣ ಅಂಬಿ – ಡಿ.ವಿ ಸದಾನಂದ ಗೌಡ