Saturday, April 20, 2024

ಸಾವಿನ ಸಂಖ್ಯೆ 25ಕ್ಕೆ ಏರಿಕೆ, ನಾಲ್ವರು ಪ್ರಾಣಾಪಾಯದಿಂದ ಪಾರು

ಮಂಡ್ಯ : ಮಂಡ್ಯದಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿದೆ. ದುರಂತದಲ್ಲಿ ಶಶಿ, ಗಿರೀಶ್, ಬಾಲಕ ರೋಹಿತ್​ ಸೇರಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿರ್ಲಕ್ಷ್ಯದಿಂದ ನಾಲೆಗೆ ಉರುಳಿದ್ದು, ಆರಂಭದಲ್ಲಿ 20ಜನ ಮೃತಪಟ್ಟಿರುವುದು ಧೃಡಪಡಿಸಲಾಗಿತ್ತು. ನಂತರ ನಡೆದ ಕಾರ್ಯಾಚರಣೆ ವೇಳೆ ನಾಲೆಯಲ್ಲಿ ತೇಲಿಹೋಗಿದ್ದ ಮೂವರ ಮೃತದೇಹವನ್ನು ಹೊರತೆಗೆಯಲಾಗಿದೆ. ಕ್ರೇನ್​ ಮೂಲಕ ನಾಲೆಯಲ್ಲಿ ಮುಳುಗಿದ್ದ ಬಸ್​ನ್ನು ಮೇಲಕ್ಕೆತ್ತಲಾಗಿದೆ. ಒಟ್ಟಾರೆ ಸಾವಿನ ಸಂಖ್ಯೆ 25 ಕ್ಕೆ ಏರಿದೆ.
ಘಟನೆಯ ಕುರಿತು ಟ್ವೀಟ್ ಮಾಡಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವಿಷಾದ ವ್ಯಕ್ತಪಡಿಸಿದ್ದಾರೆ. “ಪಾಂಡವಪುರದ ಕನಗನಮರಡಿಯ ಘೋರ ಘಟನೆ ಮನಕಲುಕಿದೆ. ಅದರಲ್ಲೂ, ಬಾಳಿ ಬದುಕಬೇಕಿದ್ದ ಮಕ್ಕಳೂ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದು ನನ್ನನ್ನು ಅತೀವ ಘಾಸಿಗೊಳಿಸಿದೆ. ಇದು ಕ್ರೂರ ವಿಧಿಯ ಅಟ್ಟಹಾಸವೇ ಸರಿ. ನೋವುಣ್ಣುತ್ತಿರುವ ಸಂತ್ರಸ್ತ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ” ಅಂತ ಮಾಜಿ ಪ್ರಧಾನಿ ಟ್ವೀಟ್​ ಮಾಡಿದ್ದಾರೆ. ಸಿಎಂ ಎಚ್​ ಡಿ ಕುಮಾರಸ್ವಾಮಿ ಈಗಾಗಲೇ ಮಂಡ್ಯ ಜಿಲ್ಲೆಯ ಗಡಿ ಪ್ರವೇಶಿಸಿದ್ದಾರೆ. ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ, ಖಾಸಗಿ ಹೋಟೆಲ್​ನಲ್ಲಿ ನಡೆಯಬೇಕಿದ್ದ ಸಭೆ ಸೇರಿ ಇಂದು ನಡೆಯಬೇಕಿದ್ದ ಸಿಎಂ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಕರಾಳ ಶನಿವಾರ : ಡ್ರೈವರ್​ ನಿರ್ಲಕ್ಷ್ಯಕ್ಕೆ 20 ಮಂದಿ ದುರ್ಮರಣ

ಮಂಡ್ಯ ದುರಂತಕ್ಕೆ ಮೋದಿ, ರಾಹುಲ್ ಸಂತಾಪ

 

RELATED ARTICLES

Related Articles

TRENDING ARTICLES